ಸೋರುತಿಹುದು ತಹಶಿಲ್ದಾರ ಕಚೇರಿ ಮಾಳಿಗೆ,
ದಾಖಲಾತಿ ಹಾಳಾದರೆ ಹೊಣೆ ಯಾರು..?
ಖಾನಾಪುರ:ಇಕ್ಕಟ್ಟಿನಲ್ಲಿ ಕಾರ್ಯ, ಜವಳು ಹಿಡಿದಿರುವ ಗೋಡೆಗಳು, ಮಳೆ ನೀರಿನಿಂದ ಸೋರುವುದನ್ನು ತಡೆಯಲು ಪ್ಲಾಸ್ಟಿಕ್ ಚೀಲದ ಹೊದಿಕೆಯೊಂದಿಗೆ ಚಾವಣಿಯ ರಕ್ಷಣೆ, ಮುಂತಾದ ದೃಶ್ಯಗಳು ಜಾಂಬೋಟಿ ಪಟ್ಟಣದಲ್ಲಿರುವ ಉಪತಹಸೀಲ್ದಾರ್ ಕಚೇರಿ ಕಟ್ಟಡದಲ್ಲಿ ಕಂಡುಬರುತ್ತವೆ.
ರೈತರಿಗೆ ಅಭಯ, ಕಂದಾಯ ದಾಖಲೆಗಳು ಸುರಕ್ಷಿತವಾಗಿರಬೇಕಾಗಿರುವ ಸ್ಥಳದಲ್ಲಿ ಮಳೆ ಬಂದರೆ ಸಾಕು ಕಚೇರಿ ನೆಲದೊಳಗೆ 3 ಇಂಚು ಎತ್ತರ ತನಕ ನೀರು ತುಂಬಿ ಬಾವಿಯಂತೆ ಆಗಿರುತ್ತದೆ. ನೀರು ತುಂಬಿದರೂ ಅಧಿಕಾರಿಗಳು ಹಾಗೇಯೆ ಕಚೇರಿಯೊಳಗೆ ಹೋಗಿ ಕೆಲಸ ಮಾಡುವ ದುಸ್ಥಿತಿ ಒದಗಿ ಬಂದಿದೆ.
2020-21 ನೇ ಸಾಲಿನಲ್ಲಿ ನಿರ್ಮಿತಿ ಕೇಂದ್ರದಿಂದ ಹದಿನೆಂಟು ಲಕ್ಷ ಮೂವತ್ತನಾಲ್ಕು ಸಾವಿರ ಅನುದಾನದನದಲ್ಲಿ ನಿರ್ಮಾಣವಾಗಿರುವ ಕಟ್ಟಡ ಎರಡೇ ವರ್ಷಕ್ಕೆ ಸೋರುತ್ತಿದ್ದು ಉಪತಹಶೀಲ್ದಾರ ಕಚೇರಿ ಸಿಬ್ಬಂದಿ ಜೀವ ಭಯದಲ್ಲಿ ಕಾರ್ಯ ನಿರ್ವಹಿಸುವ ಅನಿವಾರ್ಯತೆ ಬಂದೊದಗಿದೆ
ಮಳೆ ಬಂದರೆ ಸಾಕು ಜೀವ ಭಯದಿಂದ ಇಲ್ಲಿ ಸಿಬ್ಬಂದಿಗಳು ಕಾರ್ಯ ನಿರ್ವಾಹಿಸುವ ಅನಿವಾರ್ಯ ಇದೆ.
ಇಂತಹ ಕಟ್ಟಡದಲ್ಲಿ ಅಧಿಕಾರಿಗಳು ತಹಶಿಲ್ದಾರ ಮತ್ತು ನಾಡಕಚೇರಿ ಎರಡು ರೀತಿಯಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ.
ಇಕ್ಕಟಿನ ಸ್ಥಳ ಇರುವುದರಿಂದ ಕೋಣೆಯನ್ನು ಪಡೆದು ತಹಸೀಲ್ದಾರ್ ಕಚೇರಿಯ ಕೆಲವು ಸಿಬ್ಬಂದಿ ಕಂದಾಯ ಇಲಾಖೆಯ ಕರಾಜಶ ್ಯವನ್ನು ಮಾಡಲಾಗುತ್ತಿದೆ.
ಆದರೆ ಕಂದಾಯ ಇಲಾಖೆಯ ಮುಖ್ಯ ಕಾರ್ಯಗಳಾದ ಅಭಿಲೇಖಾಲಯ (ಹಳೆಯ ಪಹಣಿ ದಾಖಲೆಗಳು), ಭೂಮಿ ಪಹಣಿ ಮುಂತಾದವುಗಳನ್ನು ಸ್ಥಳಾಂತರಿಸಿಲ್ಲ.
ಮಳೆ ಬಂದರೆ ಕಚೇರಿ ಸೋರುವುದರಿಂದ ರೈತರ ಪಹಣಿ ದಾಖಲಾತಿಗಳು ಮಳೆ ನೀರಿಗೆ ಹಾನಿ ಆಗುತ್ತದೆ ಎಂಬ ಭಯದ ವಾತಾವರಣ ರೈತರಿಗೆ ಮತ್ತು ಅಲ್ಲಿನ ಅಧಿಕಾರಿಗಳಿಗೆ ಇಬ್ಬರಿಗೂ ಇದೆ ಕಚೇರಿಯಲ್ಲಿ ದಾಖಲಾತಿಗಳು ಮಳೆಯಿಂದ ಹಾನಿಗೆ ಒಳಗಾದರೆ ರೈತರ ಗತಿಯೇನು ಎಂಬ ಪ್ರಶ್ನೆ ಕಾಡುತ್ತಿದೆ.
ಈ ಬಗ್ಗೆ ಮಾತನಾಡಿದ ಸ್ಥಳೀಯ ಮುಖಂಡ ರಾಜಶೇಖರ ಹಿಂಡಲಗಿ, ಸುರಕ್ಷಿತವಾದ ಕಟ್ಟಡದಲ್ಲಿ ರೈತರ ಹೊಲದ ದಾಖಲಾತಿಗಳನ್ನು ರಕ್ಷಣೆ ಕಲ್ಪಿಸಬೇಕು.
ಮಳೆಗೆ ರೈತರ ಪಹಣಿ ದಾಖಲಾತಿಗಳು ಹಾನಿಯಾದರೆ ಹೊಣೆ ಅಧಿಕಾರಿಗಳೇ ಹೊತ್ತುಕೊಳ್ಳಬೇಕು ಎಂದು ಎಚ್ಚರಿಸಿದ್ದಾರೆ. ವರದಿ:-ಚಂದ್ರು ತಳವಾರ


