ಘಟಪ್ರಭಾ ಎಡದಂಡೆ ಕಾಲುವೆಯಲ್ಲಿ ಅಪರಚಿತ ಮಹಿಳೆಯ ಶವ ಪತ್ತೆ; ಸಾವಿನ ಸುತ್ತ ಅನುಮಾನಗಳ ಹುತ್ತ.!
ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಸಮೀಪದ ನಿಪನಾಳ ಗ್ರಾಮದ ಹೊರವಲಯದ ಘಟಪ್ರಭಾ ಯಡದಂಡೆ ಕಾಲುವೆಯಲ್ಲಿ ಬೆಳ್ಳಂಬೆಳಗ್ಗೆ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದೆ. ಇನ್ನು ಮಹಿಳೆಯ ಸಾವಿಗೆ ನಿಕರವಾದ ಮಾಹಿತಿ ಪೊಲೀಸ್ ಮೂಲಗಳಿಂದ ತಿಳಿದು ಬರಬೇಕಿದೆ.
ಅನಾಮದೇಯ ಮಹಿಳೆ ಅಂದಾಜು ವಯಸ್ಸು ೬೫ ರಿಂದ ೭೦ ವರ್ಷ ಎಂದು ಗುರುತಿಸಲಾಗಿದೆ. ಮಹಿಳೆ ಮೂಲತಃ ಯಾವ ಊರಿನವಳು ಎಂಬುದು ತಿಳಿದು ಬಂದಿಲ್ಲ. ಸ್ಥಳಕ್ಕೆ ರಾಯಬಾಗ ಪೊಲೀಸರು ಬೇಟಿ ನಿಡಿ ಪರಿಶೀಲನೆ ನಡೆಸುತ್ತಿದ್ದಾರೆ. ಶವ ಹೊರ ತೆಗೆಯಲು ರಾಯಬಾಗ ಅಗ್ನಿ ಶಾಮಕ ದಳದ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಇನ್ನು ಈ ಶವದ ಬಗ್ಗೆ ಮಾಹಿತಿ ಇದ್ದಲ್ಲಿ ರಾಯಬಾಗ ಪೊಲೀಸರಿಗೆ ಸಂಪರ್ಕಿಸಲು ಕೋರಲಾಗಿದೆ.
ಜರ್ನಲಿಸ್ಟ್: ಚಂದ್ರು ತಳವಾರ


