ವಿಶೇಷ ಜಗತ್ತು ಗಾಂಧೀಜಿಯನ್ನ ಕಳೆದುಕೊಂಡ ಈ ಕರಾಳದಿನ….
ವಿಶೇಷ ಸಂಪಾದಕೀಯ
ಜಗತ್ತು ಗಾಂಧೀಜಿಯನ್ನ ಕಳೆದುಕೊಂಡ ಈ ಕರಾಳ ದಿನ
ಜನವರಿ/30
ಸಂಪಾದಕೀಯ
ಚಂದ್ರು ತಳವಾರ
ಜಗತ್ತಿಗೆ ಅಹಿಂಸ ತತ್ವ ಸಾರಿದ ಸಂತನ ಹತ್ಯಯಾದ ದಿನ ಜನವರಿ 30.ಅದೇ ರೀತಿ ಜಗತ್ತಿನ ಮಹಾತ್ಮನನ್ನ ಕಳೆದುಕೊಂಡ ಈ ಕರಾಳದಿನ
Yes,
ಅದೇಕೋ ಏನೋ ಜನವರಿ 30 ಬಂತೆಂದರೆ ಒಂದಷ್ಟು ಅನುಮಾನಗಳು ಸೃಷ್ಟಿಯಾಗುತ್ತವೆ.
ಒಬ್ಬ ಅಹಿಂಸಾವಾದಿಯನ್ನ ಸಾರ್ವಜನಿಕವಾಗಿ ಗುಂಡಿಕ್ಕಿಕೊಳ್ಳುವಂತಹ ಮನಸ್ಥಿತಿ ಗೋಡ್ಸೆಯವರಿಗೆ ಹೇಗೆ ಬಂತು.
ನಾವು ಇತಿಹಾಸದ ಪುಟಗಳಲ್ಲಿ ತಿಳಿಯುವುದೇನೆಂದರೆ ಗಾಂದಿ ಒಬ್ಬ ಅಹಿಂಸಾವಾದಿ.ಸತ್ಯ ಶೋದಕ.ಗಾಂದಿ ವಿಚಾರಧಾರೆಗಳು ಜಗತ್ತಿಗೆ ಮಾರ್ಗದರ್ಶನ ಎಂದು ತಿಳಿದಿದ್ದೆವು ಅದು ಸತ್ಯವೂ ಸಹ.
ಒಬ್ಬ ತುಂಟ ಹುಡುಗ ಒಂದು ಬಾರಿ ಸತ್ಯ ಹರಿಶ್ಚಂದ್ರ ನಾಟಕ ನೋಡಿ ತನ್ನ ಜೀವನವನ್ನೇ ಬದಲಾಯಿಸಿಕೋಂಡು ಜಗತ್ತಿನ ಶ್ರೇಷ್ಟರಲ್ಲೋಬ್ಬನಾಗುತ್ತಾನೆ ಎಂದು ಓದಿದ್ದೆವು.ಆದರೆ ಅದೇ ನಾಟಕವನ್ನ ಹತ್ತಾರುಬಾರಿ ನೋಡಿದರೂ ಬದಲಾಗದ ಮನಸುಗಳ ಮದ್ಯ ಗಾಂದಿ ವಿಚಾರ ಧಾರೆಗಳು ಅಪ್ರಸ್ತುತ ಅನ್ಸುತ್ತೆ.
ಒಂದಷ್ಟು ಸಮಯದಲ್ಲಿ ಈ ದೇಶ ಗಾಂದಿ ಹುಟ್ಟಿದ ದೇಶ ಸತ್ಯವೇ ನಮ್ಮ ಉಸಿರು ದೇಶಕ್ಕಾಗಿ ಪ್ರಾಣ ಕೊಡುತ್ತೇವೆ ಎಂದು ಅಬ್ಬರದ ಬಾಷಣ ಮಾಡುವವನ್ನ ನೊಡಿದರೆ ನಾಚಿಕೆಯಾಗುತ್ತೆ.ಗಾಂದಿ ವಿಚಾರಗಳನ್ನ ಪುಸ್ತಕಗಳಲ್ಲಿ.ಪೋಟೋ ಪ್ರೇಮ್ ಗಳಲ್ಲಿ ಹಾಕಿ ಮುಚ್ಚಿಟ್ಟಿದ್ದಾರೆ.ಅವರ ಬಾವಚಿತ್ರವನ್ನ ನೋಟಿನಲ್ಲಿ ಮುದ್ರಿಸಿ ತಮ್ಮ ಅಕ್ರಮಗಳಿಗೆಲ್ಲಾ ನೋಟಿನ ಕಂತೆಗಳನ್ನೆ ಬಳಸುತ್ತಿರುವ ಜನತೆಯ ಮದ್ಯ ಗಾಂದಿಯ ವಿಚಾರಗಳು ಯಾಕೆ ಅಲ್ಲವೆ.
ಆದರೆ ನಮ್ಮ ಮುಂದಿನ ಪೀಳಿಗೆಗೆ ಗಾಂದಿಯ ವಿಚಾರಗಳ ಪ್ರಸ್ತುತತೆ ತುಂಬಾ ಅವಶ್ಯಕತೆ ಇದೆ.ಯಾಕೆಂದರೆ ಗಾಂದಿ ಒಬ್ಬ ವ್ಯಕ್ತಿಯಲ್ಲಾ ಅವರೋಬ್ಬ ಶಕ್ತಿ.ಸಂತ.ಹೋರಾಟಗಾರ.ಸಂಘಟಕ.ಬರಹಗಾರ.ಚಿಂತಕ ಹೀಗೆ ಯಾವುದನ್ನು ಬೇಕಾದರೂ ಹೇಳಬಹುದು ಆಗಾಗಿ ಗಾಂದಿ ವಿಚಾರಗಳು ತುಂಬಾ ಅವಶ್ಯಕತೆ ಇದೆ
ಗಾಂಧೀಜಿಯವರ ಜೀವನದರ್ಶನದಲ್ಲಿ ಸತ್ಯಕ್ಕೆ ಪ್ರಥಮ ಸ್ಥಾನವಾದರೆ ಅಹಿಂಸೆಗೆ ದ್ವಿತೀಯ ಸ್ಥಾನ. ಸತ್ಯಶೋಧನೆಯಲ್ಲಿ ತೊಡಗಿದ ಇವರು ಅನುಸರಿಸಿದ ಏಕೈಕ ಮಾರ್ಗವೇ ಅಹಿಂಸೆ. ಅಹಿಂಸೆ ಸಾಧನ, ಸತ್ಯವೇ ಅದರ ಸಿದ್ಧಿ. ಸತ್ಯದ ಅಥವಾ ದೇವರ ಸಾಕ್ಷಾತ್ಕಾರಕ್ಕೆ ಅಹಿಂಸೆಯಲ್ಲದೆ ಅನ್ಯ ಮಾರ್ಗವೇ ಇಲ್ಲ ಎಂಬುದನ್ನು ಮನಗಂಡ ಇವರು ಅಹಿಂಸೆಯ ಆಚರಣೆಗೆ ತಮ್ಮ ಬಾಳಿನ ಸರ್ವಸ್ವವನ್ನೂ ಪಣವಾಗಿಟ್ಟರು. ಇವರ ಅಂತರಂಗ ಬಹಿರಂಗ ಜೀವನವನ್ನೆಲ್ಲಾ ಇದು ವ್ಯಾಪಿಸಿತು. ತ್ರಿಕರಣಪುರ್ವಕ ಅಹಿಂಸೆಯ ಆಚರಣೆಯಲ್ಲಿ ತೊಡಗಿದ ಇವರು ಅಹಿಂಸೆಯನ್ನು ಕುರಿತು ಹೇಳಿರುವ ಮಾತುಗಳು ಋಷಿ ವಾಣಿಯಂತೆ ಪ್ರಮಾಣವಾಕ್ಯಗಳಾಗಿವೆ.
ಗಾಂಧಿಯವರ ಮೊದಲ ಮೂರು ಪರಿಕಲ್ಪನೆಗಳು:
ವಿಶ್ವ ಒಕ್ಕೂಟ : “ಎಲ್ಲಾ ರಾಷ್ಟ್ರಗಳು, ದೊಡ್ಡ ಅಥವಾ ಸಣ್ಣ, ಸಂಪೂರ್ಣವಾಗಿ ಸ್ವತಂತ್ರವಾಗಿ ರಚಿಸಿದಾಗ ಮಾತ್ರ ಅಂತರರಾಷ್ಟ್ರೀಯ ಲೀಗ್ ಇರುತ್ತದೆ…. ಅಹಿಂಸೆಯ ಆಧಾರದ ಮೇಲೆ ಸಮಾಜದಲ್ಲಿ, ಚಿಕ್ಕ ರಾಷ್ಟ್ರವು ಎತ್ತರದಂತೆಯೇ ಎತ್ತರವನ್ನು ಅನುಭವಿಸುತ್ತದೆ. ಮೇಲು-ಕೀಳು ಎಂಬ ಕಲ್ಪನೆಯು ಸಂಪೂರ್ಣವಾಗಿ ನಾಶವಾಗುತ್ತದೆ.
ಜಾಗತಿಕ ಪೌರತ್ವ : “ನಾನು ನನ್ನ ಅನಕ್ಷರಸ್ಥ ಆದರೆ ಬುದ್ಧಿವಂತ ತಾಯಿಯಿಂದ ಅರ್ಹತೆ ಮತ್ತು ಸಂರಕ್ಷಿಸಬೇಕಾದ ಎಲ್ಲಾ ಹಕ್ಕುಗಳು ಕರ್ತವ್ಯದಿಂದ ಬಂದವು ಎಂದು ಕಲಿತಿದ್ದೇನೆ. ಹೀಗಾಗಿ, ನಾವು ಪ್ರಪಂಚದ ಪೌರತ್ವದ ಕರ್ತವ್ಯವನ್ನು ಮಾಡಿದಾಗ ಮಾತ್ರ ಬದುಕುವ ಹಕ್ಕು ನಮಗೆ ಸೇರಿಕೊಳ್ಳುತ್ತದೆ. ಈ ಒಂದು ಮೂಲಭೂತ ಹೇಳಿಕೆಯಿಂದ, ಬಹುಶಃ ಪುರುಷ ಮತ್ತು ಮಹಿಳೆಯ ಕರ್ತವ್ಯಗಳನ್ನು ವ್ಯಾಖ್ಯಾನಿಸಲು ಮತ್ತು ಮೊದಲು ನಿರ್ವಹಿಸಬೇಕಾದ ಕೆಲವು ಅನುಗುಣವಾದ ಕರ್ತವ್ಯಕ್ಕೆ ಪ್ರತಿ ಹಕ್ಕನ್ನು ಪರಸ್ಪರ ಸಂಬಂಧಿಸಲು ಸಾಕಷ್ಟು ಸುಲಭವಾಗಿದೆ.
ಪರಮಾಣು ನಿಶ್ಯಸ್ತ್ರೀಕರಣ: “ಪಶ್ಚಿಮ ಇಂದು ಬುದ್ಧಿವಂತಿಕೆಗಾಗಿ ಹವಣಿಸುತ್ತಿದೆ. ಇದು ಪರಮಾಣು ಬಾಂಬಿನ ಗುಣಾಕಾರದ ಬಗ್ಗೆ ಹತಾಶವಾಗಿದೆ, ಏಕೆಂದರೆ ಪರಮಾಣು ಬಾಂಬುಗಳು ಕೇವಲ ಪಶ್ಚಿಮಕ್ಕೆ ಮಾತ್ರವಲ್ಲದೆ ಇಡೀ ಪ್ರಪಂಚದ ಸಂಪೂರ್ಣ ವಿನಾಶವನ್ನು ಅರ್ಥೈಸುತ್ತವೆ, ಬೈಬಲ್ನ ಭವಿಷ್ಯವಾಣಿಯು ನೆರವೇರಲಿದೆ ಮತ್ತು ಪರಿಪೂರ್ಣವಾದ ಜಲಪ್ರಳಯವು ಇರುತ್ತದೆ.
ಹೀಗೆ ಒಂದೇ ಎರಡೇ ಜಗತ್ತಿನಲ್ಲಿ ಸಾವಿರಾರು ಜನ ಬರಹಗಾರರು ಚಿಂತಕರು ಗಾಂಧೀಜಿಯವರನ್ನ ಕುರಿತು ಅದ್ಯಯನ ಮಾಡಿದ್ದಾರೆ ಅವರ ಚಿಂತನೆಗಳನ್ನ ದಾಖಲಿಸಿದ್ದಾರೆ.
ನಮ್ಮದು ತೃಣ ಸಮಾನ ಆದರೂ ಈ ಕರಳಾ ದಿನದ ನಿಮಿತ್ತ ಒಂದಿಷ್ಟು ಮಾಹಿತಿ ಹಂಚಿಕೋಳ್ಳುವ ದಾವಂತ ನಮ್ಮದು
ಕೆಟ್ಟದನ್ನ ನೋಡಬೇಡ
ಕೆಟ್ಟದನ್ನ ಕೇಳಬೇಡ
ಕೆಟ್ಟದ್ದನ್ನ ಆಡಬೇಡ
ಓ ರಾಷ್ಟ್ರಪಿತ ನಿಮ್ಮನ್ನ ಕಳೆದುಕೋಡ ಈ ಜಗತ್ತು
ಪ್ರಭುದೇವರ ವಚನ ನೆನಪಾಯಿತು.
ಬಯಲು ಬಯಲನ್ನೆ ಬಿತ್ತಿ
ಬಯಲು ಬಯಲನ್ನೇ ಬೆಳೆದು
ಬಯಲು ಬಯಲಾಯಿತಯ್ಯಾ ಪರಮಾತ್ಮ ಎಂಬಂತಾಗಿದೆ