ಬೆಳಗಾವಿ: ಮನೆ ಕಳ್ಳತನ ಆರೋಪಿತನನ್ನ ಹೆಡೆಮುರಿ ಕಟ್ಟಿ, ಜೈಲಿಗಟ್ಟಿದ ತಿಲಕವಾಡಿ ಪೋಲಿಸರು
ಬೆಳಗಾವಿ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಮನೆಗಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾನ್ಯ ಪೊಲೀಸ್ ಆಯುಕ್ತರು ಬೆಳಗಾವಿ ನಗರ, ಉಪ-ಪೊಲೀಸ್ ಆಯುಕ್ತರು (ಅಪರಾಧ ಮತ್ತು ಸಂಚಾರ) ಮತ್ತು ಸಹಾಯಕ ಪೊಲೀಸ್ ಆಯುಕ್ತರು ಖಡೇಬಜಾರ ಉಪ-ವಿಭಾಗ ರವರ ಮಾರ್ಗದರ್ಶನದಲ್ಲಿ ತಿಲಕವಾಡಿ ಪೊಲೀಸ್ ಠಾಣೆ ಇನ್ಸಪೆಕ್ಟರ್ ರವರ ನೇತೃತ್ವದ ಅಧಿಕಾರಿ ಮತ್ತು ಸಿಬ್ಬಂದಿ ಜನರ ತಂಡವು ದಿನಾಂಕ: 10-07-2024 ರಂದು ಒಬ್ಬ ಆರೋಪಿತನನ್ನು ಬಂಧಿಸಿ ತಿಲಕವಾಡಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ : 77/2024 ಕಲಂ 305 ಬಿಎನ್ಎಸ್ ನೇದ್ದರಲ್ಲಿ ಈ ಕೆಳಕಂಡ ಸ್ವತ್ತನ್ನು ವಶಪಡಿಸಿಕೊಂಡಿದ್ದು.
೧)ಬಂಗಾರದ ಗಂಟನ ಒಂದು ೪೦ಗ್ರಾಂ ಅಂದಾಜ ಕಿಮ್ಮತ್ತ ೨,೪೦,೦೦೦/-ರೂ.
2] ಬಂಗಾರದ ಎರಡು ಬಳೆಗಳು 30ಗ್ರಾಂ ಅಕಿ-1,80,000/- ರೂತಿಲಕವಾಡಿ: ಮನೆ ಕಳ್ಳತನ ಆರೋಪಿತನನ್ನ ಜೈಲಿಗಟ್ಟಿದ ತಿಲಕವಾಡಿ ಪೋಲಿಸರು
3] ಬಂಗಾರದ ಕಿವಿಯೋಲೆಗಳು ಒಂದು ಜೊತೆ 10 ಗ್ರಾಂ ಅಕಿ- 60,000/- ರೂ
4] ಹಿರೋ ಎಚ್ ಎಪ್ ಡಿಲಕ್ಸ್ ಮೊಟಾರ ನಂಬರ ಕೆಎ-೧೭ ಎಚ್ ಜಿ-೦೮೯೫ ಅಂದಾಜು ಕಿಮ್ಮತ್ತ-೨೦,೦೦೦/-ರೂ
5] ಲೈಟ್ ನೀಲಿ ವಿವೋ ಕಂಪನಿಯ ಮೋಬೈಲ ಒಂದು ಅಕಿ-2000/-ರೂ
ಹೀಗೆ ಒಟ್ಟು 5.02.000/-ರೂ ಕಿಮ್ಮತ್ತಿನವುಗಳನ್ನು ವಶಪಡಿಸಿಕೊಂಡಿದ್ದು ಪ್ರಕರಣದ ತನಿಖೆಯನ್ನು ಮುಂದುವರೆಸಿರುತ್ತಾರೆ.
ಸದರಿ ಮನೆಗಳ್ಳತನ ಪ್ರಕರಣದಲ್ಲಿ ಪತ್ತೆ ಹಚ್ಚುವಲ್ಲಿ ಖಡೇಬಜಾರ ಉಪ-ವಿಭಾಗದ ಎಸಿಪಿ ರವರಾದ ಶ್ರೀ, ಶೇಖರಪ್ಪ ಎಚ್. ರವರ ಮಾರ್ಗದರ್ಶನದಲ್ಲಿ ವಿಶೇಷ ಕರ್ತವ್ಯ ನಿರ್ವಹಿಸಿದ ತಿಲಕವಾಡಿ ಪೊಲೀಸ್ ಇನ್ಸಪೆಕ್ಟರ್ ಶ್ರೀ ಪರಶುರಾಮ ಪೂಜೇರಿ, ಪಿಎಸ್ಐ ಶ್ರೀ ಸಂತೋಷ ದಳವಾಯಿ, ಸಿಬ್ಬಂದಿ ಜನರಾದ ಮಹೇಶ ಪಾಟೀಲ, ಎಸ್ ಎಮ್ ಕರಲಿಂಗಣ್ಣವರ, ಮಲ್ಲಿಕಾರ್ಜುನ ಪಾತ್ರೋಟ, ಲಾಡಜಿಸಾಬ ಮುಲ್ತಾನಿ. ಸಂಜು ಸಂಗೋಟಿ ಬೆರಳು ಮುದ್ರೆ ಘಟಕದ ಸಿಬ್ಬಂದಿ ಹಾಗೂ ತಾಂತ್ರಿಕ ವಿಭಾಗ ಸಿಬ್ಬಂದಿಯಾದ ರಮೇಶ ಅಕ್ಕಿ, ಮಹಾದೇವ ಕಾಶೀದ ರವರನ್ನೊಳಗೊಂಡ ತಂಡ ಕಾರ್ಯನಿರ್ವಹಿಸಿದ್ದು, ಇವರ ಕಾರ್ಯ ವೈಖರಿಯನ್ನು ಮಾನ್ಯ ಪೊಲೀಸ್ ಆಯುಕ್ತರು ಬೆಳಗಾವಿ ನಗರ, ಉಪ ಪೊಲೀಸ್ ಆಯುಕ್ತರು (ಕಾ&ಸು) ಮತ್ತು ಉಪ ಪೊಲೀಸ್ ಆಯುಕ್ತರು (ಅಪರಾಧ ಮತ್ತು ಸಂಚಾರ) ಬೆಳಗಾವಿ ನಗರ ರವರು ಶ್ಲಾಘಿಸಿರುತ್ತಾರೆ.
ಜರ್ನಲಿಸ್ಟ್: ಚಂದ್ರು ತಳವಾರ