ರಾಯಬಾಗ:-ಸರ್ವೆ,ವರದಿ,ಪರ ಇದ್ದರು ತಪ್ಪಿದ ಕೈ ಟಿಕೇಟ್! ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು,ಶಂಭು ಕಲ್ಲೋಳಿಕರ್ ಗೆ ಅಭಿಮಾನಿಗಳಿಂದ ಹೆಚ್ಚಿದ ಒತ್ತಾಯ! ಹೌದು ರಾಜ್ಯದಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಸಾರ್ವತ್ರಿಕ ವಿಧಾನಸಭೆ ಚುನಾವಣೆ ನಡೆಯಲಿದ್ದು ಅಭ್ಯರ್ಥಿಗಳ ಆಯ್ಕೆ ಹಣ ಬಲ ತೋಳ್ಬಲ ಜನಬಲದ ಮೇಲೆ ನಡೆಯುತ್ತಿರುವುದು ಬಹುತೇಕ ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಆದರೆ ಇತ್ತೀಚಿನ ದಿನಮಾನಗಳಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಶಂಭು ಕಲ್ಲೋಳಿಕರ್ ರಾಯಬಾಗ ಮತಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು ಮತ್ತು ಬಹುತೇಕ ಟಿಕೆಟ್ ಶಂಭು ಕಲ್ಲೋಳಿಕರ್ ರವರಿಗೆ ಸಿಗುತ್ತದೆ ಎಂಬ ಕಾತುರದಲ್ಲಿದ್ದ ಕಾರ್ಯಕರ್ತರಿಗೆ ಇಂದು ಕಾಂಗ್ರೆಸ್ ಪಕ್ಷ ರಾಯಬಾಗದ ಮತದಾರ ಪ್ರಭುಗಳಿಗೆ ದೊಡ್ಡ ನಿರಾಶೆಯನ್ನು ತಂದೊಡ್ಡಿದೆ. ಕಾಂಗ್ರೆಸ್ ಟಿಕೆಟ್ ಸಿಗುವ ಭರವಸೆ ಇತ್ತು. ಈಗಾಗಲೇ ಕೇಂದ್ರ ಮತ್ತು ರಾಜ್ಯದ ನಾಯಕರುಗಳು ಭರವಸೆ ನೀಡಿದ್ದರು. ಆದರೂ ಟಿಕೆಟ್ ಮಿಸ್ ಆಗಿರುವುದು ಕಾರ್ಯಕರ್ತರಲ್ಲಿ ಗೊಂದಲವನ್ನುಂಟು ಮಾಡಿದೆ. ಅಭಿಮಾನಿಗಳು ಮತ್ತು ಬೆಂಬಲಿಗರು, ಕಾರ್ಯಕರ್ತರಿಗೆ ಮುಂದಿನ ನಡೆಯ ಬಗ್ಗೆ ಚರ್ಚಿಸಲು ನಾಳೆ ರಾಯಭಾಗದಲ್ಲಿ ಕಾರ್ಯಕರ್ತರ ಸಮಾಲೋಚನೆ ಸಭೆ ಕರೆಯಲಾಗಿದ್ದು ಸಭೆಯಲ್ಲಿ ಜನಾಭಿಪ್ರಾಯ ಸಂಗ್ರಹಿಸಿ ಜನರ ತೀರ್ಮಾನಕ್ಕೆ ಬದ್ಧ ಜನ ಏನೇ ತೀರ್ಮಾನ ತೆಗೆದುಕೊಂಡರು ನಾವು ಅದಕ್ಕೆ ಬದ್ಧರಿದ್ದೇವೆ ಎಂದು ಯುವ ನಾಯಕ ಕಿರಣ್ ಕಲೋಳಿಕರ ತಿಳಿಸಿರುತ್ತಾರೆ. ವರದಿ:ಚಂದ್ರು ತಳವಾರ


