ಮುಗಳಿ: ಹೊಸಮನಿ ಶಿಕ್ಷಕರ ವರ್ಗಾವಣೆ ಕಣ್ಣಿರಿಟ್ಟ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು. ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ ಇರುವ ಸಂಬಂಧ ಅವಿನಾಭಾವವಾದದ್ದು.
ಹೀಗೆ ಬೀಳ್ಕೊಡುಗೆ ಸಮಾರಂಭದಲ್ಲಿ ವಿದ್ಯಾರ್ಥಿಗಳು ಶಿಕ್ಷಕರನ್ನು ತಬ್ಬಿ ಬಿಕ್ಕಿಬಿಕ್ಕಿ ಅತ್ತ ಘಟನೆಯೊಂದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮುಗಳಿ ಗ್ರಾಮದ ಸರಕಾರಿ ಕನ್ನಡ ಶಾಲೆಯಲ್ಲಿ ನಡೆದಿದೆ.
ವಿದ್ಯಾರ್ಥಿಗಳಿಗೆ ಅತ್ಯಂತ ಪ್ರೀತಿಪಾತ್ರವಾಗಿದ್ದ ಕನ್ನಡ ಶಿಕ್ಷಕರು ಎಂದರೆ ಎಚ್ ಡಿ ಹೊಸಮನಿ, ಇವರು ಚಿಕ್ಕೊಡಿ ತಾಲೂಕಿನ ಮುಗಳಿ ಕನ್ನಡ ಶಾಲೆಗೆ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರವಹಿಸಿದ್ದರು, ಗ್ರಾಮದ ಮುಗಳಿ ಶಾಲೆಯಲ್ಲಿ ನಿರಂತರ 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಇತ್ತೀಚೆಗಷ್ಟೇ ಹಾವೇರಿ ಜಿಲ್ಲೆಯ ರಾಣೆಬೆನ್ನೂರ ತಾಲೂಕಿಗೆ ವರ್ಗಾವಣೆಯಾದರು.
ಶಿಕ್ಷಕ ವೃತ್ತಿ ಇಲಾಖೆಯಲ್ಲಿ ಹೊಸಮನಿಯವರದು ಅತ್ಯಂತ ಸರಳ ಹಾಗೂ ಪ್ರಾಮಾಣಿಕ ಶಿಕ್ಷಕ ಎಂದು ಗುರುತಿಸಿಕೊಂಡಿದ್ದರು. ಶಾಲೆಯಿಂದ ಬೀಳ್ಕೊಡುವ ಸಂದರ್ಭದಲ್ಲಿ ಶಿಕ್ಷಕರನ್ನು ಹೋಗಬೇಡಿ ಸರ್ ಗುಣ ತಬ್ಬಿಕೊಂಡು ಬಿಕ್ಕಿಬಿಕ್ಕಿ ಅತ್ತರು. ವಿದ್ಯಾರ್ಥಿನಿಯರ ಜೊತೆ ಶಾಲೆಯ ಸಹೋದ್ಯೋಗಿಗಳು ಸಹ ಕಣ್ಣೀರು ಹಾಕಿದ್ದಾರೆ.
ಎಚ್ ಡಿ ಹೊಸಮನಿ ಗುರುಗಳ ಬಿಳ್ಕೋಡುಗೆ ಸಮಾರಂಭದಲ್ಲಿ ಇಡಿ ಗ್ರಾಮಸ್ಥರೆ ಕೂಡಿ ಬಸ್ ಗೆ ಹತ್ತಿಸುವ ಸಂದರ್ಭ ನೋಡಿ ಕಣ್ಣಿರು ಸುರಿದೇವೂ ಇಂತಹ ಗುರುಗಳನ್ನ ಪಡೆಯಲು ನಾವೂ ಯಾವ ಜನ್ಮದ ಪುಣ್ಯವೋ ಗೊತ್ತಿಲ್ಲ…ಹಾವೇರಿ ಜಿಲ್ಲೆಯ ರಾಣೆಬೆನ್ನೂರ ತಾಲೂಕಿನ ನೂಕಾಪೂರ ಗ್ರಾಮದ ಗುರುಗಳು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮುಗಳಿ ಗ್ರಾಮದಲ್ಲಿ ೨೦ ವರ್ಷ ಸೇವೆ ಸಲ್ಲಿಸಿ ಯಾವೂದೇ ಕಪ್ಪು ಚುಕ್ಕೆ ಬಾರದಂತೆ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದ ಏಕೈಕ ಶಿಕ್ಷಕರು ಹೊಸಮನಿ ಗುರುಗಳು ಬಹಳ ಮ್ರದು ಹ್ರದಯ ಸಹಾಯ ಮಾಡುವ ಗುಣ ಗ್ರಾಮದಲ್ಲಿ ಪ್ರತಿ ವರ್ಷ ಮಹಾಶಿವರಾತ್ರಿ ಜಾತ್ರೆಯಲ್ಲಿ ನಮ್ಮ ಗ್ರಾಮ ಎಂದು ಹೆಮ್ಮೆಯಿಂದ ಸತತವಾಗಿ ಎಲ್ಲಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದರು,ಮನೆಯಿಂದ ಹೊರಗೆ ಬಂದರೆ ನೇರವಾಗಿ ತಲೆ ಕೆಳಗೆ ಮಾಡಿ ಹೊರಟರೆ ಶಾಲೆಗೆ ಹೋಗಿಯೆ ತಲೆ ಮೆಲೆ ಮಾಡುತ್ತಿದ್ದರು,ಅಂದರೆ ಇಷ್ಟೊಂದು ಸೌಜನ್ಯ ಸ್ವಭಾವದ ಶಿಕ್ಷಕರು ತಮ್ಮ ಜೀವನದ ೨೦ ವರ್ಷ ಭಾಗವನ್ನೆಲ್ಲಾ ಮುಗಳಿ ಗ್ರಾಮದಲ್ಲಿ ಕಳೆದರು,ಇನ್ಮೂ ಎಲ್ಲಾ ಕಾರ್ಯಕ್ರಮದಲ್ಲಿ ಇವರದು ಮೆಲುಗೈ ಶಿಕ್ಷಣ ಕ್ರೀಡೆ ಶಾಲೆಯ ಉಸ್ತುವಾರಿ ವಹಿಸಿ ಮಕ್ಕಳ ಜೊತೆ ಬೆರೆತು ಪಾಲಕರ ಜೊತೆ ಭಾಂದವ್ಯ ಇಟ್ಟುಕೊಂಡು ತಮ್ಮ ಕರ್ತವ್ಯವನ್ನು ನಿರ್ವಹಿಸಿ ಜನರ ಪಾತ್ರರಾಗಿದ್ದರು.ನಮ್ಮ ಗ್ರಾಮದಲ್ಲಿ ಈ ಮೊದಲು ಎಮ್ ಆರ್ ಶೇಖಾ ಗುರುಗಳು ಕೂಡಾ ಇಡಿ ತಮ್ಮ ಸೇವಾವದಿಯನ್ನ ಮುಗಳಿ ಗ್ರಾಮದಲ್ಲಿ ನಿರ್ವಹಿಸಿದ್ದನ್ನ ಕೂಡಾ ಮರೆಯಲಾರದ ಸಂಗತಿ,ಇನ್ನೂ ಹೊಸಮನಿ ಶಿಕ್ಷಕರ ವರ್ಗಾವಣೆ ತಿಳಿಯುತ್ತಿದ್ದಂತೆ ಗ್ರಾಮದಲ್ಲಿ ಜನರು ನಾವೂ ಎನೋ ಕಳೆದುಕೊಂಡಂತೆ ಆಗುತ್ತಿದೆ ಎಂದು ದುಖಃ ವ್ಯಕ್ತಪಡಿಸಿದರು. ವರದಿ:- ಚಂದ್ರು ತಳವಾರ