ರಾಯಬಾಗ: ಮಾಳಿ ಪೆಟ್ರೋಲ್ ಬಂಕ್ ನಲ್ಲಿ ಬಾಲ ಕಾರ್ಮಿಕರ (ಶಾಲಾ ಮಕ್ಕಳ) ಬಳಕೆ..!
ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಹಿಡಕಲ ಗ್ರಾಮದಲ್ಲಿರುವ HP ಪೆಟ್ರೋಲ್ ಬಂಕ್ ನಲ್ಲಿ ರಾಜಾರೋಷವಾಗಿ ಬಾಲಕಾರ್ಮಿಕರನ್ನು ಬಳಸಿಕೊಳ್ಳಲಾಗುತ್ತಿದೆ.
ಸಂಗಪ್ಪ ಮಾಳಿ ಎಂಬಾತ ಎಚ್ ಪಿ ಪೆಟ್ರೋಲ್ ಬಂಕಿನ ಮಾಲೀಕನಾಗಿರುತ್ತಾನೆ.
ಈತನೇ ತನ್ನ ಮನಸ್ಸು ಇಚ್ಛೆಯಂತೆ ಸರಕಾರದ ನಿಯಮಾವಳಿಗಳನ್ನು ಗಾಳಿಗೆ ತೂರಿ ಬಾಲ ಕಾರ್ಮಿಕರು (ಶಾಲಾ ಮಕ್ಕಳನ್ನು) ತನ್ನ ಪೆಟ್ರೋಲ್ ಬಂಕಿನಲ್ಲಿ ದುಡಿಸಿಕೊಳ್ಳುತ್ತಿದ್ದಾನೆ.
ಇದರಿಂದ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ.
ಬಾಲ ಕಾರ್ಮಿಕ ಪದ್ಧತಿ ಕಾಗದದಲ್ಲಿ ಮಾತ್ರ ನಿರ್ಮೂಲನೆಯಾಗಿದೆ. ತಾಲೂಕಿನಾದ್ಯಂತ ಬಾಲ ಕಾರ್ಮಿಕ ಪದ್ಧತಿ ತಾಂಡವವಾಡುತ್ತಿದ್ದರು, ಕಣ್ಮುಚ್ಚಿ ಕುಳಿತ ಅಧಿಕಾರಿಗಳು
ಕಠಿಣ ಕಾನೂನು: ಸಂಗಪ್ಪ ಮಾಳಿ ಪೆಟ್ರೋಲ್ ಬಂಕನಲ್ಲಿ ಖುದ್ದು ಬಾಲಕಾರ್ಮಿಕರನ್ನು ದುಡಿಸಿಕೊಳ್ಳುತ್ತಿದ್ದಾರೆ. ಹಾಗಾದರೆ ಇದು ಅಪರಾಧವಲ್ಲವೇ ? ಈ ಸುದ್ದಿಯನ್ನು ನೋಡಿದ ಮೇಲಾದರೂ ಸಂಬಂಧಪಟ್ಟ ಕಾರ್ಮಿಕ ಇಲಾಖೆಯವರು ಮಾಲೀಕನ ಮೆಲೆ ಕೇಸ್ ಜಡೆದು ಬಂಧನಕ್ಕೆ ಒಳಪಡಿಸಿ, ಸೂಕ್ತ ಕಾನೂನಿನ ಕ್ರಮ ಕೈಗೊಳ್ಳಬೇಕಿದೆ. 6-14 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ಬಳಸಿಕೊಳ್ಳುವುದು ನಿಷೇಧಿಸಲಾಗಿದೆ. ಈ ವಿಷಯದಲ್ಲಿ ಕಾರ್ಮಿಕ ಇಲಾಖೆಯಿಂದ ಅಗತ್ಯ ಜಾಗೃತಿ ಇಲ್ಲವಾಗಿದೆ. ಬಹುತೇಕ ಕಡೆಗಳಲ್ಲಿ ಇಂದಿಗೂ ಬಾಲಕಾರ್ಮಿಕರನ್ನು ಬಳಕೆ ಮಾಡಿಕೊಳ್ಳುವುದು ಮುಂದುವರಿದಿದೆ.
ಕಾನೂನುಗಳು ಇವು; ಬಾಲಕಾರ್ಮಿಕ (ತಡೆ ಮತ್ತು ನಿಯಂತ್ರಣ) ಕಾಯಿದೆ 1986ರ ಪ್ರಕಾರ ಹದಿನಾಲ್ಕು ವರ್ಷದ ಒಳಗಿನ ಮಕ್ಕಳನ್ನು ದುಡಿಸಿಕೊಳ್ಳುವಂತಿಲ್ಲ. ಅಪರಾಧ ಕಾನೂನು (ತಿದ್ದುಪಡಿ) ಕಾಯಿದೆ 2013 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಕಾಯಿದೆ ಒತ್ತಾಯಪೂರ್ವಕವಾಗಿ ದುಡಿಸಿಕೊಳ್ಳುವುದನ್ನು ನಿರ್ಬಂಧಿಸುತ್ತದೆ.
ಇನ್ನು ಬಾಲ ಕಾರ್ಮಿಕ ನಿರೀಕ್ಷಕರಾದ ಭುವನೇಶ್ವರಿ ಡಾಲೆ ರವರು ತಾಲೂಕಿನಲ್ಲಿ ಇಂತಹ ಸಾಕಷ್ಟು ಘಟನೆ ನಡೆದರು ಕ್ಯಾರೇ ಎನ್ನುತ್ತಿಲ್ಲ. ಆದ್ದರಿಂದ ಸರ್ಕಾರ ಮತ್ತು ಸಂಬಂಧಿಸಿ ದ ಅಧಿಕಾರಿಗಳು ಈ ಕೂಡಲೇ ಎಚ್ಚೆತ್ತು ತಪ್ಪಿತಸ್ಥ ಪೆಟ್ರೋಲ್ ಬಂಕ್ ಮಾಲೀಕನ ವಿರುದ್ಧ ಹಾಗು hp ಕಂಪನಿಯ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕಿದೆ.
ಈ ಬಗ್ಗೆ ವಿಡಿಯೋ ಆಧಾರಿತ ಸಾಕಷ್ಟು ಮಾಹಿತಿ ಲಭ್ಯವಿದ್ದು, ಮುಂದಿನ ಭಾಗದಲ್ಲಿ ಟಿವಿ3 ಕನ್ನಡ ಸುದ್ದಿ ವಾಹಿನಿ ಯಲ್ಲಿ ರಿವಿಲ್ ಮಾಡುತ್ತೇವೆ ನಿರೀಕ್ಷಿಸಿ!!