ರಾಯಬಾಗ:-ನೆರೆಹಾವಳಿ ಹಾಗೂ ಕೋರೋಣ ಎಂಬ ಮಹಾಮಾರಿ ಜನರನ್ನು ಸಂಕಷ್ಟಕ್ಕೆ ದೂಡಿದ ಸಂದರ್ಭದಲ್ಲಿ ಜನರ ಸಂಪರ್ಕಕ್ಕೆ ಸಿಗದ ಶಾಸಕರು ಈಗ ಚುನಾವಣೆ ನಿಮಿತ್ತ ಕ್ಷೇತ್ರದಲ್ಲಿ ಬೀಡುಬಿಟ್ಟಿದ್ದಾರೆ ಎಂದು ಅಲ್ಲಿನ ಸ್ಥಳೀಯರ ಒಬ್ಬರು ಶಾಸಕರಿಗೆ ಘೆರಾವ್ ಹಾಕಿದ ಘಟನೆ ಬೆಳಕಿಗೆ ಬಂದಿದೆ. ಹೌದು,ರಾಯಬಾಗ ತಾಲೂಕಿನ ಹಳೇ ದಿಗ್ಗೇವಾಡಿ ಗ್ರಾಮದಲ್ಲಿನ ಮುಖಂಡರೊಬ್ಬರ ಮನೆ ಗೆ ಆಗಮಿಸಿದ್ದ ರಾಯಬಾಗ ಮಾಜಿ ಶಾಸಕ ದುರ್ಯೋಧನ ಐಹೊಳೆಯವರನ್ನು ಊರಿನ ಗ್ರಾಮಸ್ಥರು ಸೇರಿಕೊಂಡು ಛೀಮಾರಿ ಹಾಕಿ ಊರಿನಿಂದ ಮರಳಿ ಕಳುಸಿದ ಘಟನೆ ಜರುಗಿದೆ.
ಕೃಷ್ಣಾ ನದಿಯ ತಟದ ಮೇಲಿರುವ ಈ ಪುಟ್ಟ ಗ್ರಾಮ ಮೇಲಿಂದ ಮೇಲೆ ಪ್ರತಿ ವರ್ಷವು ಕೃಷ್ಣಾ ನದಿಯ ನೆರೆ ಹಾವಳಿಗೆ ತುತಾಗುತ್ತಲಿದ್ದು ಅಂತ ಕಷ್ಟದ ಸಂದಭ೯ದಲ್ಲಿ ಇತ್ತ ಕಡೆ ಮುಖ ಮಾಡದೆ, ಜನರ ಸಂಕಷ್ಟಕ್ಕೆ ಪರಿಹಾರ ನೀಡದೆ ಇರುವ ಶಾಸಕರು ಈಗ ಚುನಾವಣಾ ಹತ್ತಿರ ಬರುತ್ತಿರುವ ಸಂದರ್ಭದಲ್ಲಿ ಊರಿಗೆ ಬಂದಿರುವ ಕಾರಣಕ್ಕೆ ಹಾಗೂ ನಮ್ಮ ಸಂಕಷ್ಟಕ್ಕೆ ಆಗದೆ ಇರುವ ಶಾಸಕ ನಮಗೆ ಬೇಕಾಗಿಲ್ಲ ಎಂಬ ಒಕ್ಕೋರಲಿನ ಕೂಗು ಇಡಿ ಗ್ರಾಮದಲ್ಲಿ ಇವತ್ತು ಕೇಳಿಬರುತ್ತಿತ್ತು. ಈ ಎಲ್ಲ ಕಾರಣಗಳಿಂದ ಜನಸಾಮಾನ್ಯರೆಲ್ಲರೂ ಸೇರಿಕೊಂಡು ಊರಿನಿಂದ ಶಾಸಕರನ್ನು ಹೊರಗೆ ಹೋಗುವಂತೆ ಸೂಚಿಸಿದ್ದಾರೆ. ಮತ್ತು ಶಾಸಕರು ಅಲ್ಲಿಂದ ತಕ್ಷಣ ಪಲಾಯನ ಮಾಡಿರುತ್ತಾರೆ. ವರದಿ: ಚಂದ್ರು ತಳವಾರ


