ಹುಕ್ಕೆರಿ: ರೈತರಿಗೆ ಸಕಾಲಕ್ಕೆ ತಲುಪದ ಸರ್ಕಾರಿ ಯೊಜನೆಗಳು ನಿರ್ಲಕ್ಷ ವಹಿಸುತ್ತಿರುವ ಹುಕ್ಕೇರಿ ಕ್ರಷಿ ಇಲಾಖೆ ಅಧಿಕಾರಿಗಳು.!
ಹೌದು ರೈತರ ಕಲ್ಯಾಣಕ್ಕಾಗಿ ರಾಜ್ಯ ಮತ್ತು ಕೇಂದ್ರ ಸರಕಾರವು ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸುತ್ತಿವೆ.
ಆದರೆ, ಕೃಷಿ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಅರ್ಹ ರೈತರಿಗೆ ಯಾವುದೇ ಮಾಹಿತಿಯನ್ನು ಸಕಾಲಕ್ಕೆ ನೀಡದೆ ಯೋಜನೆಯಿಂದ. ವಂಚಿತರನ್ನಾಗಿಸುತ್ತಿದ್ದಾರೆ.
ಅಧಿಕಾರಿಗಳು ವಿವಿಧ ಯೋಜನೆಗಳ ಕುರಿತು ಹೇಳಬೇಕಿದೆ ಆದರೆ ತಾಲೂಕು-ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳಲ್ಲಿ ಮಾಹಿತಿ ನೀಡುವವರೇ ಇಲ್ಲ.
ಗ್ರಾಮಮಟ್ಟದಲ್ಲೂ ಮಾಹಿತಿ ಸಿಗುತ್ತಿಲ್ಲ. ತಮಗೆ ಬೇಕಾದವರಿಗೆ ಮಾಹಿತಿ ರವಾನಿಸಿ ಸುಮ್ಮನಿರುತ್ತಾರೆ.
ಇದರಿಂದ ಸಾವಿರಾರು ರೈತರು ಸರಕಾರದ ವಿವಿಧ ಯೋಜನೆಗಳಿಂದ ವಂಚಿತರಾಗಿದ್ದಾರೆ.
ಆದ್ದರಿಂದ ಜಿಲ್ಲಾಮಟ್ಟದ ಅಧಿಕಾರಿಗಳು ತಾಲೂಕು ಮಟ್ಟದಲ್ಲಿ ರೈತರಿಗೆ ಅನೂಕೂಲ ಮಾಡಬೇಕಿದ್ದ ಈ ಅಧಿಕಾರಿಗಳು ಅವರ ಸಂಬಂದಿಕರು ಗೆಳೆಯರಿಗೆ ಮಾತ್ರ ಸರ್ಕಾರದ ಸವಲತ್ತುಗಳ ಮಾಹಿತಿ ನೀಡಿ ತಮ್ಮ ದಿನನಿತ್ಯದ ಕೆಲಸವನ್ನು ಕಾಲಹರಣ ಮಾಡಿ ತಮ್ಮ ಕರ್ತವ್ಯವನ್ನ ಬೇಜವಾಬ್ದಾರಿತನ ತೋರುತಿದ್ದಾರೆ.
ಅಧಿಕಾರಿಗಳಿಗೆ ಭೆಟಿಯಾಗಲೂ ನೀವು ಮಂತ್ರಿಗಳಿಗೆ ಭೆಟಿಯಾದ ಹಾಗೆ ಅನುಭವ ಆಗುತ್ತದೆ ರೈತರಿಗೆ ಇವರೆಲ್ಲಾ ರೈತರನ್ನ ಕಲ್ಯಾಣ ಮಾಡುವವರಲ್ಲ ಅವರೆ ಕಲ್ಯಾಣ ಮಾಡಿಕೊಂಡು ತಮ್ಮ ಖಜಾನೆ ತುಂಬಿಸಿಕೊಳ್ಳುವವರೆ ಹುಕ್ಕೆರಿ ಕ್ರಷಿ ಇಲಾಖೆ ಅಧಿಕಾರಿಗಳು ಮಾಡಲು ಬೆನ್ನಟ್ಟಿದ್ದಾರೆ.
ಹುಕ್ಕೇರಿಯ ಕೃಷಿ ಇಲಾಖೆಯ, ಇನ್ನಷ್ಟು ಕರ್ಮಕಾಂಡವನ್ನು ಎಳೆ ಎಳೆಯಾಗಿ ನಿರ್ಭೀತಿಯಿಂದ ಶೀಘ್ರದಲ್ಲಿ ಬಯಲು ಮಾಡುತ್ತೇವೆ. ಕಾಯ್ದು ನೋಡಿ,
ಜರ್ನಲಿಸ್ಟ್: ಚಂದ್ರು ತಳವಾರ


