ಧಾರವಾಡ: ಚಿಕ್ಕೋಡಿ ತಾಲೂಕಿನ ಮಮದಾಪೂರ ಗ್ರಾಮದಲ್ಲಿ ಹೆಂಡತಿ ಹಾಗೂ ಅವಳ ಸ್ನೇಹಿತನನ್ನು ಕೊಂದ ಆರೋಪದಲ್ಲಿ ಚಿಕ್ಕೋಡಿಯ ಏಳನೇಯ ಜಿಲ್ಲಾ ನ್ಯಾಯಾಲಯ ಗಲ್ಲು ಶಿಕ್ಷೆಯನ್ನು ನೀಡಿದ್ದರ ಪ್ರಕರಣದಲ್ಲಿ ಉಚ್ಚನ್ಯಾಯಾಲದ ದಾರವಾಡ ಬೆಂಚ, ಗಲ್ಲು ಶಿಕ್ಷೆಯನ್ನು ಜೀವಾವದಿಗೆ ಇಳಿಸಿದೆ.
ದಾರವಾಡದ ಉಚ್ಚ ನ್ಯಾಯಮೂರ್ತಿಗಳಾದ ನ್ಯಾ. ಶ್ರೀನಿವಾಸ ಹಾಗೂ ಹುದ್ದಾರ ನ್ಯಾ. ಹುದ್ದಾರ ಇವರು ಗಲ್ಲು ಬೆಳಗಾವಿಯ ಎಳನೇಯ ಜಿಲ್ಲಾ ನ್ಯಾಯಾಲಯ ಚಿಕ್ಕೋಡಿ ಇವರು ನೀಡಿದ್ದ ಗಲ್ಲು ಶಿಕ್ಷೆಯ ಆದೇಶವನ್ನು ಜಿವಾವದಿಗೆ ಇಳಿಸಿ, ಇದೊಂದು ಅಪರೂಪದ ಪ್ರಕರಣವಲ್ಲಾ ಕೊಲೆ ಮಾಡುವ. ಉದ್ದೇಶದಿಂದಲ್ಲೇ ಎಲ್ಲಾ ಆರೋಪಿಗಳು ಒಂದಾಗಿ ಜೊಡೆ ಕೊಲೆ ಮಾಡಿದ್ದಾರೆ.
ಬಾಬು ಇತನಿಗೆ ಅಕ್ರಮದ ಬಗ್ಗೆ ನೋವಿತ್ತು ಆದರೆ ಅದರ ಪರಿಣಾಮ ಕೂಡಾ ಗೊತ್ತಿತ್ತು ಒಬ್ಬನೇ ಕೃತ್ಯದಲ್ಲಿ ಭಾಗವಹಿಸಿದ್ದರೆ ಬೇರೆ ಇರುತಿತ್ತು ಎಂದು ಹೇಳುತ್ತಾ ಗಲ್ಲು ಶಿಕ್ಷೆಯನ್ನು ಜೀವಾವದಿಗೆ ಇಳಿಸಿದೆ.
ಆರೋಪಿ ಬಾಬು, ನಾಗಪ್ಪ ಹಾಗೂ ಮುತ್ತಪ್ಪ ಇವರಿಗೆ ತಲಾ ಇಪ್ಪತ್ತೈದು ಸಾವಿರ ದಂಡ ಹಾಕಿ ಆದೇಶ ಮಾಡಿದ್ದಾರೆ.


