ರಾಷ್ಟ್ರೀಯ ಶೂಟಿಂಗ್ ಕಾಂಪಿಟಿಷನ್: ಆಕಾಶ್ ಗುಡಗೇನಟ್ಟಿ ರವರನ್ನು ಅಭಿನಂದಿಸಿದ ರಾಜ್ಯಪಾಲರು
ಬೆಳಗಾವಿ : ತಮಿಳುನಾಡಿನಲ್ಲಿ ನಡೆದ ತಮಿಳುನಾಡು ಪುದುಚೇರಿ ಅಂಡಮಾನ್ ಮತ್ತು ನಿಕೋಬಾರ್ ಡೈರೆಕ್ಟರೇಟ್ ಸ್ಪೋರ್ಟ್ಸ್ ಶೂಟಿಂಗ್ ಸ್ಪರ್ಧೆ, (IDSSC-NCC) ಅಖಿಲ ಭಾರತ ಮಟ್ಟದಲ್ಲಿ ಜರುಗಿದ (IDSSC-NCC) ರಾಷ್ಟ್ರೀಯ ಶೂಟಿಂಗ್ ಕಾಂಪಿಟೇಶನ್ ನಲ್ಲಿ ಕರ್ನಾಟಕ ಮತ್ತು ಗೋವಾ ಡೈರೆಕ್ಟರೇಟ್ ಜನರಲ್ ಚಾಂಪಿಯನ್ ಶಿಪ್ ಗೆದ್ದಿದೆ.
ಈ ಹಿನ್ನೆಲೆಯಲ್ಲಿ ರಾಜ್ಯದ ಗೌರವಾನ್ವಿತ ರಾಜ್ಯಪಾಲರಾದ ಥಾವಚಂದ್ ಗೊಹ್ಲೊಟ್ ಅವರನ್ನು ಕರ್ನಾಟಕ ಟೀಮ್ ಹಾಗೂ ಬೆಳಗಾವಿಯ ಆಕಾಶ್ ಗುಡಗೇನಟ್ಟಿ ಅವರನ್ನು ಅಭಿನಂದಿಸಿದ್ದಾರೆ. ರಾಜ್ಯಪಾಲರು ಎಂಟರ್ ಡೈರೆಕ್ಟರೇಟ್ ಸ್ಪೋರ್ಟ್ ಶೂಟಿಂಗ್ ಚಾಂಪಿಯನ್ಶಿಪ್ 2024ರಲ್ಲಿ ಭಾಗವಹಿಸಿದ ಕರ್ನಾಟಕ ಹಾಗೂ ಗೋವಾದ ಎನ್ಸಿಸಿ, ಕೆಡೆಟ್ ಗಳಿಗೆ ರಾಜ್ಯ ಭವನದಲ್ಲಿ ರಾಜ್ಯಪಾಲ ಥಾವಚಂದ್ ಗೊಹ್ಲೊಟ್ ಅವರು ಸನ್ಮಾನಿಸಿದರು. ಈ ವೇಳೆ ಏರ್ ಕಮಾಡೋರ್ ಎಸ್ ಬಿ ಅರುಣ್ ಕುಮಾರ್, ವಿಎಸ್ ಎಮ್ ಮತ್ತು ಉನ್ನತ ಶಿಕ್ಷಣ ಸಚಿವ ಡಾ. ಎಂ. ಸಿ. ಸುಧಾಕರ್ ಮುಂತಾದವರು ಹಾಜರಿದ್ದರು
ಬೆಳಗಾವಿಯ ಕೆ ಎಲ್ ಇ ಸಂಸ್ಥೆಯ ಲಿಂಗರಾಜ ಕಾಲೇಜಿನ ಎನ್ಸಿಸಿ ಕೆಡೆಟ್ ಘಟಕದ
ಲಿಂಗರಾಜ್ ಮಹಾವಿದ್ಯಾಲಯ ಬಿಎ ನಾಲ್ಕನೇ ಸೆಮಿಸ್ಟರ್ ಓದುತ್ತಿದ್ದು, ತಮಿಳುನಾಡಿನಲ್ಲಿ ಜುಲೈ 02-07- 2024 ರಿಂದ 15-07 – 2024 ರ ವರೆಗೆ ನಡೆದ ಎಂಟರ್ ಡೈರೆಕ್ಟರೇಟ್ ಸ್ಪೋರ್ಟ್ಸ್ ಶೂಟಿಂಗ್ ಕಾಂಪಿಟಿಷನ್ ನಲ್ಲಿ 26ನೇ ಕರ್ನಾಟಕ ಬೆಟಾಲಿಯನ್ ಡಿಜಿ ಎನ್ ಸಿ ಸಿ ಯ (Dgncc ) ಕರ್ನಾಟಕದಿಂದ ರಾಷ್ಟ್ರಮಟ್ಟದ ಶೂಟಿಂಗ್ ಕಾಂಪಿಟೇಶನ್ ನಲ್ಲಿ ಆಕಾಶ್ ಸತೀಶ್ ಗುಡಗೇನಟ್ಟಿ ಬೆಳ್ಳಿ ಪದಕ ಗೆದ್ದಿದಾರೆ. ಅವರು ಬೆಳ್ಳಿ ಪದಕ ಗೆದ್ದು ಲಿಂಗರಾಜ್ ಮಹಾ ಮಹಾವಿದ್ಯಾಲಯಕ್ಕೆ ಹೆಸರು ಆಕಾಶದೆತ್ತರಕ್ಕೆ ಹರಡುವಂತೆ ಮಾಡಿದ್ದಾರೆ, ಅವರಿಗೆ ಮುಂದಿನ ದಿನಗಳಲ್ಲಿ ಒಳ್ಳೆಯದಾಗಲಿ ಎಂದು ಹಾರೈಸಿದರು.
ಬೆಳಗಾವಿ ಗ್ರೂಪ್ ಕಮಾಂಡರ್ ಕರ್ನಲ್ ಮೋಹನ್ ನಾಯ್ಕ್ 26. ಕರ್ನಾಟಕ ಬೆಟಾಲಿಯನ್ ಅಧಿಕಾರಿಗಳು ಕಮಾಂಡಿಂಗ್ ಆಫೀಸರ್ (ಸಿಓ) ಎಸ್ ದರ್ಶನ್,(ಎಓ) ಕರ್ನಲ್ ಶಂಕರ್ ಯಾದವ್, ಎಸ್ ಎಂ ಕಲ್ಲಪ್ಪಾ ಪಾಟೀಲ್, ಕಾಲೇಜಿನ ಪ್ರಾಚಾರ್ಯರು ಎಸ್ ಹೆಚ್ ಮೇಲಿನಮನಿ, ಎನ್ ಸಿ ಸಿ ಅಧಿಕಾರಿಗಳು ಮಹೇಶ್, ಗುರನಗೌಡರ್ ಹಾಗೂ ಕಾಲೇಜಿನ ಆಡಳಿತ ಮಂಡಳಿ ಬೆಳಗಾವಿ ನಗರದ ವಿವಿಧ ಸಂಘ ಸಂಸ್ಥೆಗಳು ಅಭಿನಂದಿಸಿವೆ.