ದುಡ್ಡಿನ ಮುಖ ನೋಡಿ ಸಂವಿಧಾನ ಶಿಲ್ಪಿ ಬಾಬಾಸಾಹೇಬ ಅಂಬೇಡ್ಕರವರಿಗೆ ಅವಮಾನ ಮಾಡಿದ ಖ್ಯಾತ ನಿಸರ್ಗ ಆಸ್ಪತ್ರೆ.!
ಅಂಬೇಡ್ಕರ್ ವ್ರತ್ತ ಎಂದು ಸ್ಕ್ಯಾನಿಂಗ್ ಭಿತ್ತಿಪತ್ರದಲ್ಲಿ ಪ್ರಿಂಟ ಆಗಬೇಕಿದ್ದ ವಾಕ್ಯ ಕಂಡು ಕಾಣಿ ಗೊತ್ತಿದ್ದರು ವೈದ್ಯ ಅದನ್ನ ತಿದ್ದಿ ಹಾಗೇ ಸ್ಥಳಿಯ ಜನತೆಗೆ ಹಂಚಿ ಕಾನೂನಿನ ಪೇಚಿಗೆ ಸಿಲುಕಿ ಒದ್ದಾಡಿತ್ತಿದ್ದಾನೆ ಈ ವೈದ್ಯ.
ಬೆಳಗಾವಿ ಜಿಲ್ಲೆ ರಾಯಬಾಗ ಪಟ್ಟಣದ ನಿಸರ್ಗ ಆಸ್ಪತ್ರೆಯ ಬೇಜವಾಬ್ದಾರಿತನವಾಗಿದೆ.
ಮಹಾನ್ ಮಾನವತವಾದಿ ಸಂವಿಧಾನ ಶಿಲ್ಪಿ, ದೀನ ದಲಿತರ ಬಾಳಿನ ಬೆಳಕು ಡಾ. ಬಿ. ಆರ್ ಅಂಬೇಡ್ಕರ್ ಅವರ ಹೆಸರನ್ನೇ ಅಂಬೇಕರ್ ಅಂಥ ತಿದ್ದಿ ೧೦ ಸಾವಿರ ಜನರಿಗೆ ಸ್ಕ್ಯಾನಿಂಗ್ ಪೇಪರ್ ಹಂಚಿ ಇದೀಗ ನಿಸರ್ಗ ಆಸ್ಪತ್ರೆಯು ದಲಿತರ ಕೆಂಗಣ್ಣಿಗೆ ಗುರಿಯಾಗಿದೆ.
ಆಸ್ಪತ್ರೆಯ ವಿರುದ್ಧ ಇಂದು ರಿಪಬ್ಲಿಕ್ ಸೇನೆ, ಹಾಗೂ ದಲಿತ ಸೇನೆ ಹೋರಾಟಗಾರರು ಒಗ್ಗಟ್ಟಿನಿಂದ ಸೇರಿ ನಿಸರ್ಗ ಆಸ್ಪತ್ರೆಯ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಅಷ್ಟೇ ಅಲ್ಲದೆ, ಪ್ರಿಂಟಿಂಗ್ ಪ್ರೆಸ್ ನವನ ಮೇಲೆ ಕೂಡಾ ಎ೧ ಆರೋಪಿ ಎಂದು ಪ್ರಕರಣ ದಾಖಲಿಸಬೇಕು.
ತಾಲೂಕಿನ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ಹಾಗೂ ತಾಲೂಕ ಮಟ್ಟದ ಆಡಳಿತ ಅಧಿಕಾರಿಗಳು ಕೂಡಲೆ ಪ್ರಕರಣವನ್ನು ಗಂಭೀರವಾಗಿ ಪರಿಣಿಸಿ, ಅಂಬೇಡ್ಕರರನ್ನು ಅವಮಾನಿಸಿದ ಹಾಸ್ಪಿಟಲ್ ಹಾಗೂ ತಪ್ಪಿತಸ್ತ ಪ್ರಿಂಟಿಂಗ ಪ್ರೆಸ್ ವಿರುದ್ಧ ಕೂಡಾ ಸೂಕ್ತ ಕಾನೂನಿನ ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದರು.
ಅದೇ ರೀತಿಯಾಗಿ ಒಂದು ವೇಳೆ ಸೂಕ್ತ ಕಾನೂನು ಕ್ರಮ ಜರುಗಿಸದೆ ಹೋದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾಧ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಸರಕಾರಕ್ಕೆ ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ದಲಿತ ಸೇನೆ ಅಧ್ಯಕ್ಷ ಉಮೇಶ್ ಶಿಂಗೆ ಹಾಗೂ ರಿಪಬ್ಲಿಕ್ ಸೇನೆಯ ಮುಖಂಡ ಉತ್ತಮ ಕಾಂಬಳೆ ಎಚ್ಚರಿಸಿದರು.
ಜರ್ನಲಿಸ್ಟ್: ಚಂದ್ರು ತಳವಾರ