ರಾಯಬಾಗ: ಭ್ರಷ್ಟಾಚಾರದಲ್ಲಿ ಸಿಕ್ಕು ನರಳಾಡಿದ್ದ, ಲಂಚಬಾಕ ಪಿಡಿಓ ಮೇಲೆ ಕ್ರಮ ಕೈಗೊಳ್ಳದ ಜಿಲ್ಲಾಡಳಿತ..!
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಿಪಾನಾಳ ಗ್ರಾಮ ಪಂಚಾಯಿತಿಯಲ್ಲಿ ಮಲ್ಲಪ್ಪ ಗುಳೇದಾರ ಎಂಬ ಅಭಿವೃದ್ಧಿ ಅಧಿಕಾರಿ ಉದ್ಯೋಗ ಪರವಾನಿಗೆ, ಹಾಗೂ ಕೈಬರಹ ಉತಾರ (ಪಹಣಿ ಪತ್ರಿಕೆ) ನೀಡಲು ಭೀಮಸಿ ಮರಿಯಪ್ಪಗೋಳ ಎಂಬ ಬಡ ರೈತರ ಕಡೆಯಿಂದ ೨೦೦೦ ಸಾವಿರ ರೂಪಾಯಿ ಹಾಗೂ ಜ್ಯೋತಿಬಾ, ಹುಬ್ಬಳ್ಳಿ ಎಂಬುವವರಿಂದ ೪೦೦ ರೂಪಾಯಿ, ಹಣ ಪಡೆದು ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದು ಟಿವಿ3 ಕನ್ನಡ ಸುದ್ದಿ ಮಾಧ್ಯಮ ಸೇರಿದಂತೆ ಅನೇಕ ರಾಜ್ಯ ಮಟ್ಟದ ಸುದ್ದಿ ಮಾಧ್ಯಮಗಳ ಮುಂದೆ ಬೆತ್ತಲಾಗಿದ್ದರು.
ಯಾವುದೊಂದು ಅಭಿವೃದ್ಧಿ ಕಾಣದ ನಿಪನಾಳ ಗ್ರಾಮ ಪಂಚಾಯಿತಿ ದುರ್ದೈವವೇನೆಂದು ತಿಳಿಯುತ್ತಿಲ್ಲ. ಈ ಅಭಿವೃದ್ಧಿ ಅಧಿಕಾರಿ ಪಂಚಾಯತಿಗೆ ಕಾಲಿಟ್ಟಾಗಿಂದಲೂ ಅಭಿವೃದ್ಧಿ ಅಂತೂ ಶೂನ್ಯ ಬ್ರಷ್ಟಾಚಾರ ಬಲು ಜೋರಾಗಿದೆ.
ಎಷ್ಟೋ ಸಾರಿ ಅಲ್ಲಿನ ಸಿಬ್ಬಂದಿಗಳು ಹಾಗೂ ಸದಸ್ಯರು ಕೂಡ ಈ ಪಿಡಿಒಗೆ ಬುದ್ಧಿ ಹೇಳಿದ್ದರು ಕೇಳಿರಲಿಲ್ಲ.
ಆದರೆ ಏನು ಮಾಡೋದು ಸ್ವಾಮಿ! ಈ ಗುಳೆದಾರ ಮಲ್ಲಪ್ಪನಿಗೆ ಲಂಚವೆ ಇವನ ಹೊದಿಕೆಯಾಗಿದೆ.
ಇನ್ನು ಆಗಿನ ತಾಲೂಕ ಕಾರ್ಯನಿರ್ವಾಹಕ ಅಧಿಕಾರಿಗಳು ಕೈ ಬರಹ ಉತಾರ (ಪಹಣಿ ಪತ್ರಿಕೆ) ನೀಡಲು ಬರುವುದಿಲ್ಲ.
ಸಾರ್ವಜನಿಕರಿಂದ ದುಡ್ಡು ವಸೂಲಿ ಮಾಡಿರುವುದು ತಪ್ಪು ಎಂದು ಇ ಲಂಚಕೊರ ಅಧಿಕಾರಿಗೆ ಛಿಮಾರಿ ಹಾಕಿದ್ದರು.
ಇಷ್ಟೆಲ್ಲಾ ಸುದ್ದಿಯು ಮಾಧ್ಯಮಗಳಲ್ಲಿ ಜಗಜ್ಜಾಹಿರ ಆಗಿದ್ದರು ಕೂಡ ಜಿಲ್ಲಾಡಳಿತ ಮಾತ್ರ ಇತನ ಮೇಲೆ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದೆ ಮೌನವಾಗಿರುವದು ಹಲವು ಅನುಮಾನಗಳಿಗೆ ಯಡೆಮಾಡಿ ಕೊಡುತ್ತಿದೆ.
ಹಾಗಾದ್ರೆ ಜಿಲ್ಲಾಡಳಿತ ಇಂತಹ ಭ್ರಷ್ಟರಿಗೆ ರಕ್ಷಣೆ ಕೊಡುತ್ತಾ..? ಅಥವಾ ಇ ಲಂಚದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಜಿಲ್ಲಾಡಳಿತ ಲಂಚಬಾಕ ಪಿಡಿಓ ಮಲ್ಲಪ್ಪನನ್ನು ಅಮಾನತು ಮಾಡುತ್ತಾ..? ಕಾಯ್ದು ನೋಡಬೇಕಾಗಿದೆ.
ಜರ್ನಲಿಸ್ಟ್: ಚಂದ್ರು ತಳವಾರ