ರಾಯಬಾಗ ಧ್ವಜಾರೋಹಣ ಮಾಡದ ಅಂಗನವಾಡಿ ಕಾರ್ಯಕರ್ತೆ ವಿರುದ್ಧ ಕ್ರಮ ಕೈಗೊಳ್ಳದ ಜಿಲ್ಲಾಡಳಿತ..!
ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಮಂಟೂರ ಗ್ರಾಮದ ಬಡಿಗೇರ ಓಣಿಯ ಅಂಗನವಾಡಿ ಕೇಂದ್ರದಲ್ಲಿ ಧ್ವಜಾರೋಹಣ ಮಾಡಲು ಸನ್ 2020-21 ರಲ್ಲಿ ಪಂಚಾಯಿತಿಯ 14 ನೇ ಹಣಕಾಸು ಯೋಜನೆಯಡಿಯಲ್ಲಿ ಅಂಗನವಾಡಿ ಶಾಲೆ ಮುಂಭಾಗದಲ್ಲಿ ಧ್ವಜಾರೋಹಣ ಮಾಡುವುದಕ್ಕಾಗಿ ಜೆಂಡಾ ಕಟ್ಟಿಯನ್ನು ಕಟ್ಟಿಸಿರುತ್ತಾರೆ.
ಆದರೆ ಸತತ ಮೂರು ವರ್ಷಗಳಿಂದ ಧ್ವಜಾರೋಹಣ ಮಾಡುತ್ತಿಲ್ಲ ಎಂದು ಸ್ಥಳೀಯರ ಮಾಹಿತಿ ಮೇರೆಗೆ ಟಿವಿ3 ಸುದ್ದಿ ವಾಹಿನಿಯು ತನ್ನ ವೆಬ್ಸೈಟ್ನಲ್ಲಿ ಸುದ್ದಿ ಬಿತ್ತರಿಸಿತ್ತು.
ಸುದ್ದಿ ಪ್ರಸಾರವಾದ ಬೆನ್ನೆಲೆ ರಾಯಭಾಗ ಸಿಡಿಪಿಓ ಅಧಿಕಾರಿ ಅಂಗನವಾಡಿ ಕಾರ್ಯಕರ್ತೆಗೆ ಶೋಕಾಸ್ ನೋಟಿಸ್ ಕೂಡ ಜಾರಿ ಮಾಡಿದ್ದರು.
ನೋಟಿಸ್ ಗೆ ಪ್ರತಿಯಾಗಿ ಅಂಗನವಾಡಿ ಕಾರ್ಯಕರ್ತೆಯು ತನ್ನದು ಬೇಜವಾಬ್ದಾರಿತನ ಎಂದು ಅರಿತು ತಿಳಿಯದೆ ತಪ್ಪಾಗಿದೆ. ಇನ್ನು ಮುಂದೆ ಹಾಗಾಗದಂತೆ ನೋಡಿಕೊಂಡು ಅಂಗನವಾಡಿ ಕೇಂದ್ರದ ಮುಂದೆ ಧ್ವಜಾರೋಹಣ ನೆರವೇರಿಸುತ್ತೇವೆ ಅಂತಾ ಹೇಳಿ ತಮ್ಮ ಮೇಲಿನ ಆರೋಪವನ್ನು ಕೈಬಿಡುವಂತೆ ಪತ್ರ ಬರೆದಿದ್ದರು.
ಅಂದ್ರೆ ಸರಕಾರದ ಆದೇಶ ಮೀರುತ್ತಿದ್ದೇನೆ ಎಂಬ ಭಯ ಕೂಡಾ ಅಂಗನವಾಡಿ ಕಾರ್ಯಕರ್ತೆಗೆ ಇಲ್ಲ ಅಂದ್ರೆ ಏನರ್ಥ…? ಇದು ದೇಶದ ಗಣತೆಯ ಪ್ರಶ್ನೆಯಾಗಿದೆ.
ಅಷ್ಟಕ್ಕು ದೇಶಕ್ಕೆ ಅಪಮಾನ ಮಾಡುತ್ತಿದ್ದೇನೆ ಎಂಬ ಭಯ ಇವರಿಗಿಲ್ಲವೋ…?
ಅಂಗನವಾಡಿ ಕಾರ್ಯಕರ್ತೆ ಧ್ವಜಾರೋಹಣ ಮಾಡದೆ ರಾಜ್ಯ ರಾಷ್ಟ್ರ ಗೌರವಕ್ಕೆ ಅಗೌರವ ತೋರಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ.
ಬಡಿಗೇರ್ ಓಣಿಯ ಅಂಗನವಾಡಿ ಶಾಲೆ ಇದು ಮಂಟೂರು ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯ ಮಕ್ಕಳನ್ನು ಹೊಂದಿರುವ ಅಂಗನವಾಡಿ ಶಾಲೆಯಾಗಿದೆ. ಇಂತಹ ಅಂಗನವಾಡಿ ಶಾಲೆಯಲ್ಲಿ ಧ್ವಜಾರೋಹಣ ಮಾಡದೇ ಇರುವುದು ಅಲ್ಲಿನ ಮಕ್ಕಳ ದುರ್ದೈವವಷ್ಟೆ.
ಜನೆವರಿ 26 ಧ್ವಜಾರೋಹಣ ದಿವಸ ಬಡಿಗೇರ್ ಓಣಿಯ 1 ಅಂಗನವಾಡಿಯ ಮಕ್ಕಳು ಧ್ವಜಾರೋಹಣ ಕಾರ್ಯದಲ್ಲಿ ಪಾಲ್ಗೊಂಡಿಲ್ಲ ಎಂದರೆ ಇದು ನಾಚಿಕೆಗೇಡಿನ ಸಂಗತಿ.
ಅಷ್ಟಕ್ಕೂ ಅಲ್ಲಿನ ಅಂಗನವಾಡಿ ಕಾರ್ಯಕರ್ತೆ ಲಕ್ಷ್ಮೀಬಾಯಿ ಮಾರುತಿ ಕರಗಾವಿ ಅವರು ಅಲ್ಲಿನ ಶಾಲೆಯ ಧ್ವಜಾರೋಹಣ ಕಾರ್ಯದಲ್ಲಿ ಪಾಲ್ಗೊಂಡಿರುತ್ತಾರೆ.
ಹಾಗಾದರೆ ಬಡಿಗೇರ ಓಣಿಯ ಅಂಗನವಾಡಿ ಮಕ್ಕಳ ಗತಿ ಏನು..? ಮಕ್ಕಳಿಗೆ ಮಾದರಿಯಾಗಿರಬೇಕಾಗಿದ್ದ ಅಂಗನವಾಡಿ ಕಾರ್ಯಕರ್ತೆ ಹೀಗೆ ಮಾಡಿದ್ದು ಸರಿನಾ..? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಬಾರಿ ಚರ್ಚೆಗೆ ಗ್ರಾಸವಾಗಿದೆ.
ಆದಕಾರಣ ಸರಕಾರ ಮತ್ತು ಮೇಲಾಧಿಕಾರಿಗಳು ಇವರುಗಳ ಕ್ಷಮೆಯಾಚನೆಗೆ ಮರುಳಾಗದೆ ಸೇವಾ ನಿಯಮದಡಿಯಲ್ಲಿ ಅಂಗನವಾಡಿ ಕಾರ್ಯಕರ್ತೆ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಬೇಕು ಎಂದು ಸ್ಥಳೀಯ ಪ್ರಜ್ಞಾವಂತರ ಅಭಿಪ್ರಾಯವಾಗಿದೆ.
ಜರ್ನಲಿಸ್ಟ್: ಚಂದ್ರು ತಳವಾರ