ಬೆಂಡವಾಡ: ತೆರೆದ ಬಾವಿ ನುಂಗಿದ ಪಿಡಿಒ ಮೇಲೆ ಕ್ರಮಕ್ಕೆ ಮುಂದಾಗದ ಜಿಲ್ಲಾ ಆಡಳಿತ ಹಾಗೂ ಪಂಚಾಯತ ರಾಜ್ಯ ಇಲಾಖೆ! ಹೌದು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬೆಂಡವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಜೋಡಟ್ಟಿಯಲ್ಲಿ ಮಹೇಶ್ ಶ್ರೀಶೈಲ್ ಬೆನ್ನಾಳಿ ಇವರ ಹೆಸರಿನಲ್ಲಿ ಯಾವುದೇ ತರಹದ ಒಂದು ಗುಂಟೆಯೂ ಸಹಿತ ಜಮೀನು ಇರುವುದಿಲ್ಲ. ಆದರೆ ಬೆಂಡವಾಡ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಹಾಗೂ ವಾರ್ಡ್ ನಂಬರ್ ಐದರಲ್ಲಿ ಬರುವ ಪಂಚಾಯತ ಸದಸ್ಯರ ಕುಮ್ಮುಕ್ಕಿಂನ್ನಿಂದ್ ನರೇಗಾ ಯೋಜನೆಯಲ್ಲಿ ಬಾವಿಯನ್ನು ತೆಗೆದಿದ್ದೇವೆಂದು ನಕಲಿ ಬಿಲ್ ತೆಗೆದು ಸರಕಾರಕ್ಕೆ ಬಾರಿ ನಷ್ಟ ಮಾಡಿರುತ್ತಾರೆ. ಈ ವಿಷಯ ಕುರಿತು ಟಿವಿ3 ಕನ್ನಡ ವಾಹಿನಿ ಪಿಡಿಒ ಜೊತೆ ನಡೆಸಿದ ಫೋನಿನ ಸಂಭಾಷಣೆಯಲ್ಲಿ ಪಿಡಿಒ ತನ್ನ ತಪ್ಪನ್ನು ಒಪ್ಪಿಕೊಂಡು ತನ್ನ ತಪ್ಪಿಗೆ ಪ್ರತಿಯಾಗಿ 20,000 ದಷ್ಟು ದುಡ್ಡನ್ನು ಸರಕಾರಕ್ಕೆ ಮರಳಿ ದುಡ್ಡನ್ನು ಬರಿಸುತ್ತೇವೆ ಎಂದು ಅಂಗಲಾಚ್ಚಿದ್ದಾನೆ. ಇದು ಟಿವಿ3 ಸುದ್ದಿ ಮಾಧ್ಯಮದ ಮೂರನೇ ಬಹುದೊಡ್ಡ ಸುದ್ದಿ ಆಗಿರುತ್ತದೆ. ವಾಹಿನಿಯು ಸುದ್ದಿ ಬಿತ್ತರಿಸಿ ಈಗಾಗಲೇ ಹಲವು ದಿನಗಳು ಕಳೆದಿರುತ್ತವೆ. ಬೆಂಡವಾಡ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಮೇಲೆ ಕ್ರಮ ಯಾವಾಗ ಎಂದು ತಾಲೂಕ ಪಂಚಾಯತಿ ಇಓ ಅವರನ್ನು ಪ್ರಶ್ನಿಸಿದಾಗ ಜಿಲ್ಲಾ ಪಂಚಾಯಿತಿ ಚೀಪ್ ಆಫೀಸರ್ ಅವರನ್ನ ಕೇಳಿ ಎಂದು ಉಡಾಫೆ ಉತ್ತರ ಉತ್ತರ ಕೊಡುತ್ತಿದ್ದಾರೆ. ಇನ್ನು ಯಾವುದೇ ಕ್ರಮಕ್ಕೆ ಮುಂದಾಗದ ಜಿಲ್ಲಾಡಳಿತ ಹಾಗೂ ಪಂಚಾಯತ ರಾಜ್ ಇಲಾಖೆ ಇಂತಹ ಭ್ರಷ್ಟ ಅಧಿಕಾರಿಗಳಿಗೆ ಸಾತ್ ಕೊಡುತ್ತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ. ಆದ್ದರಿಂದ ಜಿಲ್ಲಾದಳಿತ ಈಗಲಾದರೂ ತಕ್ಷಣ ಎಚ್ಚೆತ್ತು ತಪ್ಪಿತಸ್ಥರು ಯಾರೇ ಆಗಿರಲಿ ಅಂತವರ ಮೇಲೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ಟಿವಿ3 ಸುದ್ದಿ ಮಾಧ್ಯಮದ ಆಶಯವಾಗಿದೆ.ವರದಿ:-ಚಂದ್ರು ತಳವಾರ


