ಶಿವಾಪೂರ ಗ್ರಾಮದಲ್ಲಿ ಶ್ರೀ ಮಾಧವಾನಂದ ಪ್ರಭುಜಿಯವರ ಸ್ಮರಣಾರ್ಥ ಸಪ್ತಾಹ
ಮೂಡಲಗಿ ಶಿವಾಪೂರ ಗ್ರಾಮದಲ್ಲಿ ಶ್ರೀ ಮಾಧವಾನಂದ ಪ್ರಭುಜಿಯವರ ಸ್ಮರಣಾರ್ಥ ಸಪ್ತಾಹ
ಶಿವಾಪೂರ(ಹ): ಧ್ಯಾನವೇ ಎಲ್ಲ ಸಮಸ್ಯೆಗಳಿಗೆ ಪರಿಹಾರ ರಾಮಣ್ಣ ಮಹಾರಾಜರು .
ಮೂಡಲಗಿ ತಾಲೂಕಿನ ಶಿವಾಪೂರ ಗ್ರಾಮದಲ್ಲಿ ಶ್ರೀ ಮಾಧವಾನಂದ ಪ್ರಭುಜಿಯವರ ಸ್ಮರಣಾರ್ಥ ಸಪ್ತಾಹದ ಅಂಗವಾಗಿ ಅವರ ಪರಮ ಶಿಷ್ಯರಾದ ಹಾಗೂ ಸ್ವಾತಂತ್ರ ಹೋರಾಟಗಾರರಾದ ದಿ.ಗುರುಲಿಂಗಪ್ಪ ಮಲ್ಲಪ್ಪ ಬಿ ಪಾಟೀಲ ಅವರ 28 ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಅವರು ಇಂಚಗೇರಿ ಸಂಪ್ರದಾಯದ ಪ್ರಕಾರ ಪ್ರತಿಯೊಬ್ಬರು ಗುರು ಉಪದೇಶಪಡೆದು ಪ್ರಾಪಂಚಿಕದ ಜೊತೆಗೆ ಭಜನೆ, ಧ್ಯಾನದಂತಹ ಸಂಸ್ಕಾರ ಅಳವಡಿಸಿಕೊಂಡರೆ ಜೀವನ ಪಾವನವಾಗುವುದರ ಜೊತೆಗೆ ಬಂದಂತಹ ಕಷ್ಟಗಳು ಪರಿಹಾರ ವಾಗುತ್ತವೇ ಎಂದರು.
ಕಾರ್ಯಕ್ರಮದಲ್ಲಿ ಇಂಚಗೇರಿ ಸಂಪ್ರದಾಯದ ಪ್ರಕಾರ ಸಮರ್ಥ ರಾಮದಾಸರ ದಾಸಬೋಧ ವಾಚನಾ,ವಿಮಲ ಬ್ರಹ್ಮ ನಿರುಪನೇ ಹಾಗೂ ಪುಷ್ಪವೃಷ್ಟಿಯೊಂದಿಗೆ ಸಪ್ತಾಹ ಮಂಗಲಗೊಂಡಿತು.ಕಾರ್ಯಕ್ರಮದಲ್ಲಿ ವಸಂತ ಮಹಾರಾಜರು ನಾಗನೂರ,ಮುತ್ತಪ್ಪ ಮಹಾರಾಜರು ಮುನ್ಯಾಳ,ಬಾಳಯ್ಯ ಸ್ವಾಮಿಗಳು, ಅಲ್ಲಪ್ಪ ಕಿತ್ತೂರು ಸೇರಿದಂತೆ ಗ್ರಾಮದ ಹಿರಿಯರು ಇಂಚಗೇರಿ ಸಂಪ್ರದಾಯದ ಭಕ್ತಾದಿಗಳು ಸೇರಿದಂತೆ ಇತರರಿದ್ದರು ,ನಿರುಪನೇ ಹಾಗೂ ವಂದನಾರ್ಫನೇಯನ್ನು ಸಂಗಪ್ಪ ಹಡಪದ ಮಾಡಿದರು.