ತಳಕಟನಾಳ: ಕಲಿಕಾ ಮಟ್ಟ ಹೆಚ್ಚಿಸಲು ಬೇಸಿಗೆ ರಜೆಯಲ್ಲಿ ಮಕ್ಕಳಿಗಾಗಿ ಗ್ರಂಥಾಲಯದಲ್ಲಿ ವಿಶೇಷ ತರಬೇತಿ.!
ಹೌದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ತಳಕಟನಾಳ ಗ್ರಾಮದಲ್ಲಿ ಮಕ್ಕಳ ಕಲಿಕಾ ಮಟ್ಟವನ್ನು ಹೆಚ್ಚಿಸಲು ಕರ್ನಾಟಕ ಸರ್ಕಾರದ ಕ್ಷಣ ಇಲಾಖೆಯ ಆದೇಶದಂತೆ ಮಕ್ಕಳಿಗೆ ವಿಶೇಷ ಬೋಧನೆ ನೀಡುವುದರ ಮೂಲಕ ಅವರ ಕಲಿಕಾ ಮಟ್ಟವನ್ನು ಹೆಚ್ಚಿಸುವುದು ಮತ್ತು ಬುದ್ಧಿಮಟ್ಟವನ್ನು ಚುರುಕು ಗೊಳಿಸಿ ಕಲಿಕೆಯಲ್ಲಿ ಬದಲಾವಣೆ ತರುವಂತದ್ದಾಗಿದೆ.
ಆಟ ಪಾಠ ಬೋಧನೆಯ ಜೊತೆಗೆ ಮಕ್ಕಳಿಗೆ ವಿಶೇಷ ಬೋಧನೆ ನೀಡುವುದರಿಂದ ಮಕ್ಕಳು ಕ್ರಿಯಾಶೀಲರಾಗುತ್ತಾರೆ.
ಅದೇ ರೀತಿಯಾಗಿ ಈ ಕಾರ್ಯಕ್ರಮವನ್ನು ಉದ್ದೇಶಿಸಿ ತಳಕಟನಾಳ ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀ ರವೀಂದ್ರ ದೊಡಮನಿ ಮಾತನಾಡಿ ಮಕ್ಕಳು ಮಣ್ಣಿನಿಂದ, ಪೇಪರ ನಿಂದ ತಯಾರಿಸಿದ ವಸ್ತುವನ್ನು ನೋಡಿದರೆ ಮಕ್ಕಳಲ್ಲಿ ಕಲಿಕಾ ಮಟ್ಟ ತುಂಬಾ ಹೆಚ್ಚಿಸಿದೆ.
ಹಾಗೂ ನನಗೆ ವೈಯಕ್ತಿಕವಾಗಿ ಸಂತೋಷ ತಂದಿದೆ.
ಇದರಿಂದ ಸರಕಾರಕ್ಕೆ ಮತ್ತು ಶಿಕ್ಷಣ ಇಲಾಖೆಗೆ ಎಷ್ಟು ಕೃತಜ್ಞತೆ ಹೇಳಿದರು ಸಾಲದು ಎಂದು ಕರ್ನಾಟಕ ಸರಕಾರದ ಶಿಕ್ಷಣ ಇಲಾಖೆಯ ಯೋಜನೆಗಳನ್ನು ಕೊಂಡಾಡಿದರು.
ಕಾರ್ಯಕ್ರಮದಲ್ಲಿ ಲಕ್ಷ್ಮಣ್ ತ ಸೋಗಲ,ನಿಂಗರಾಜ್ ಗೊಟೂರ,ಭೀಮಸಿ ಬೆನ್ನಿ, ರಮೇಶ್ ಕೌಜಲಗಿ, ಶ್ರೀಮತಿ ಪವಿತ್ರಾ ಮಾದರ, ಬಸವರಾಜ್ ನಾವಿ, ಅದೇ ರೀತಿಯಾಗಿ ಇನ್ನಿತರರು ಉಪಸ್ಥಿತರಿದ್ದರು. ವರದಿ: ಚಂದ್ರು ತಳವಾರ