South Korea Plane Crash: 179 ಜನರನ್ನು ಬಲಿ ಪಡೆದ ವಿಮಾನ ಅಪಘಾತಕ್ಕೆ ಕಾರಣವೇನು? ಎಡವಟ್ಟು ಮಾಡಿದ್ರಾ ದಕ್ಷಿಣ ಕೋರಿಯಾ ಅಧಿಕಾರಿಗಳು.!?
ಜೆಜು ಏರ್ ಫ್ಲೈಟ್ 2216 ವಿಮಾನವು 175 ಪ್ರಯಾಣಿಕರು ಮತ್ತು 6 ಸಿಬ್ಬಂದಿಗಳೊಂದಿಗೆ ಥಾಯ್ಲೆಂಡ್ನ ಬ್ಯಾಂಕಾಕ್ನಿಂದ ದಕ್ಷಿಣ ಕೊರಿಯಾದ ಮುವಾನ್ಗೆ ಹಿಂತಿರುಗುತ್ತಿತ್ತು. ಈ ವೇಳೆ ಲ್ಯಾಂಡಿಂಗ್ ಆಗುತ್ತಿದ್ದ ಸಮಯದಲ್ಲಿ ಕಾಣಿಸಿಕೊಂಡ ಕೆಲವು ತೊಂದರೆಗಳ ಪರಿಣಾಮ 179 ಜನರು ಸಾವನ್ನಪ್ಪಿದ್ದಾರೆ.
ಸಿಯೋಲ್ (Seoul): ಕಝಾಕಿಸ್ತಾನದಲ್ಲಿ (Kazakhstan) ಸಂಭವಿಸಿದ ಅಜರ್ಬೈಜಾನ್ (Azerbaijan) ವಿಮಾನ ಅಪಘಾತ (plane crash) ಮಾಸುವ ಮುನ್ನವೇ ದಕ್ಷಿಣ ಕೊರಿಯಾದ (South Korea) ಮುವಾನ್ನಲ್ಲಿ ಮತ್ತೊಂದು ಭೀಕರ ವಿಮಾನ ಅಪಘಾತ ಘಟನೆ ನಡೆದಿದೆ. ಜೆಜು ಏರ್ ಫ್ಲೈಟ್ (Jeju Air Flight) 2216 ಥೈಲ್ಯಾಂಡ್ನಿಂದ (Thailand) ಹಿಂದಿರುಗುತ್ತಿದ್ದಾಗ ದಕ್ಷಿಣ ಜಿಯೋಲ್ಲಾ ಪ್ರಾಂತ್ಯದಲ್ಲಿ ಅಪಘಾತ ಸಂಭವಿಸಿದ್ದು, ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 181 ಜನರ ಪೈಕಿ ಇಬ್ಬರ ಹೊರತು ಪಡಿಸಿ ಉಳಿದ 179 ಜನರು ಸಾವನ್ನಪ್ಪಿದ್ದಾರೆ.
ಇನ್ನು ಘಟನೆ ಸಂಬಂಧ, ಹಕ್ಕಿಯೊಂದು ವಿಮಾನಕ್ಕೆ ಬಡಿದಿದ್ದು, ಇದರ ಪರಿಣಾಮ ಬಲ ಇಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗುತ್ತಿದೆ. ಈ ಮಧ್ಯೆ ವಿಮಾನ ಅಪಘಾತಕ್ಕೆ ಕೇವಲ ಹಕ್ಕಿ ಬಡಿತವೊಂದೆ ಕಾರಣವಲ್ಲ ಎನ್ನಲಾಗಿದೆ.