ಬೆಳಗಾವಿ:ಮೊರಾರ್ಜಿ ಶಾಲೆಯ ಮಕ್ಕಳ ಆಯ್ಕೆ ಪ್ರಕ್ರಿಯೆಯಲ್ಲಿ ಗೋಲ್ ಮಾಲ್ ಮಾಡಿದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಲಕ್ಷ್ಮಣ ಬಬಲಿ.!
ಹೌದು ಬೆಳಗಾವಿ ಜಿಲ್ಲೆಯಲ್ಲಿ ಸುಮಾರು ದಿನಗಳಿಂದ ನಡೆದ ಮೊರಾರ್ಜಿ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಸುಮಾರು ವಿಧ್ಯಾರ್ಥಿಗಳಿಗೆ ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಎಂಬಂತೆ ಮಾಡಿರುವ ಬಬಲಿ ವಿರುದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೊರಾರ್ಜಿ ವಸತಿ ಶಾಲೆಯು ಬಡವರ ಮಕ್ಕಳಿಗೆ ಅನೂಕೂಲವಾಗಲೆಂದು ಸರ್ಕಾರ ಸಾರಿ ದೂರಿ ಹೆಳುತ್ತಿದೆ.
ಆದರೆ ಇಲ್ಲಿ ಮೆರಿಟ ಹಂತದಲ್ಲಿ ವಿದ್ಯಾರ್ಥಿಗಳ ಭವಿಷ್ಯ ಅಡಗಿಕೊಂಡಿರುತ್ತೆ ಆದರೆ ಇಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಾದ ಲಕ್ಷ್ಮಣ ಬಬಲಿ ಇವರು ಮೆರಿಟ ಹಂತದಲ್ಲಿ ಮಕ್ಕಳ ಆಯ್ಕೆ ಪ್ರಕ್ರಿಯೆಯಲ್ಲಿ ಗೊಲ್ ಮಾಲ್ ಮಾಡಿ ಸಾಕಷ್ಟು ವಿದ್ಯಾರ್ಥಿಗಳ ಭವಿಷ್ಯಕ್ಕೆ ಚ್ಯುತಿ ತರುವ ಕೆಲಸ ಮಾಡಿದ್ದಾರೆ.
ಅಂಕಗಳ ಮೇಲೆ ವಿದ್ಯಾರ್ಥಿಗಳ ಭವಿಷ್ಯ ಇರುತ್ತದೆ ಆದರೆ ಇಲ್ಲಿ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳಿಗೂ ಕೂಡಾ ಆಯ್ಕೆ ಮಾಡಿಕೊಂಡು ತನ್ನ ಅಧಿಕಾರ ದುರುಪಯೋಗ ಪಡಿಸಿಕೊಂಡು ಸರ್ಕಾರದ ಕಣ್ಣಿಗೆ ಮಣ್ಣು ಹಾಕುವ ದಂಧೆ ರಾಜಾರೋಷವಾಗಿ ನಡೆದಿದೆ.
ವಿವರಣೆ: ಇವರು ಅಧಿಕಾರಿಗಳೋ ಅಥವಾ ರಾಜಕಾರಣಿ ಎಂದು ಸಾರ್ವಜನಿಕರಿಗೆ ಗೊಂದಲವಾಗಿದೆ,ಇನ್ನೂ ಇವರ ಹಂತದಲ್ಲಿ ಎಷ್ಟು ಜನ ಕಡಿಮೆ ಅಂಕ ಪಡೆದರು ಆಯ್ಕೆ ಹೇಗೆ ಮಾಡಿಕೊಂಡರೆಂಬ ಹಲವೂ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಇನ್ನೂ ವಿದ್ಯಾರ್ಥಿಗಳ ಊಟದ ವೋಚರ ಕಾರ್ಡನಲ್ಲಿಯೂ ಕುಡಾ ಲಕ್ಷ ಲಕ್ಷ ರೂಪಾಯಿ ಲೂಟಿ ಮಾಡಿದ ಈ ಅಧಿಕಾರಿಗೆ ಮೇಲಾಧಿಕಾರಿಗಳು ಹೆಳುವವರಿಲ್ಲ ಕೇಳುವವರಿಲ್ಲ ಹಿಗಾದರೆ ಬಡ ಮಕ್ಕಳ ಗತಿ ಏನು.? ಎಂಬಂತೆ ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೂ ಹಣ ಪಡೆದು ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳಿಗೂ ಕೂಡಾ ಇಲ್ಲಿ ಸೀಟು ಹಂಚಿಕೆ ಮಾಡುತ್ತಾರೆಂಬ ಆರೋಪಗಳು ಕೂಡಾ ಕೇಳಿ ಬರುತ್ತಿವೆ.
ಹಣ ಕೊಟ್ಟರೆ ಸಮಾಜ ಕಲ್ಯಾಣ ಇಲಾಖೆ ಹಣ ಕೊಡದಿದ್ರೆ ಇದು ಸ್ಮಶಾನ ಭೂಮಿಯಂತೆ ಇರುತ್ತೆ,ಆದರೆ ಬಬಲಿ ಮಾತ್ರ ಗೊತ್ತಿದ್ದು ಗೊತ್ತಿಲ್ಲದವನಂತೆ ಮುಗ್ದ ಮುಗ್ದನಂತೆ ತೊರಿಸಿಕೊಡುತ್ತಿದ್ದಾನೆ.
ಇನ್ನು ಈ ಸುದ್ದಿ ಗಮನಿಸಿ ಲೋಕಾಯುಕ್ತ ಅಧಿಕಾರಿಗಳು ಪರೀಶಿಲನೆ ಮಾಡಿ ಆಯ್ಕೆ ಪ್ರಕ್ರಿಯೆಯಲ್ಲಿ ಗೊಲ್ ಮಾಡಿದ ಅಧಿಕಾರಿ ಬಬಲಿ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಬೆಳಗಾವಿ ಜಿಲ್ಲೆಯ ಜನತೆ ಮಾಧ್ಯಮದ ಮುಂದೆ ಅಳಲು ತೋಡಿಕೊಂಡಿದ್ದಾರೆ.
ಈಗಾಗಲೆ ಖಾಸಗಿ ವಾಹಿನಿಯೊಂದರಲ್ಲಿ ಇವನ ಕರ್ಮಕಾಂಡ ಬಗ್ಗೆ ವಿಡಿಯೋ ಮೂಲಕ ಚಿತ್ರಿಕರಣ ಮಾಡಿ ಇವರು ಮಾಡಿದ ಗೊಲ್ ಮಾಲ್ ನೊಡಬಹುದಾಗಿದೆ. ಇನ್ನೂ ಅನೇಕ ವರದಿಗಳನ್ನ ಮುಂದಿನ ಸಂಚಿಕೆಯಲ್ಲಿ ಪ್ರಸ್ತುತ ಪಡಿಸುತ್ತೆವೆ.
ಶೀಘ್ರದಲ್ಲಿ ಬಬಲಿಯ ಇನ್ನಷ್ಟು ಕರ್ಮಕಾಂಡ ಬಯಲಿಗೆ ತರುತ್ತೇನೆ ಕಾಯ್ದು ನೋಡಿ,.
ವರದಿ ಚಂದ್ರು ತಳವಾರ