ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಶಿರಗಾವ್ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ.2 ಸ್ಥಾಪನೆಗೊಂಡ ವರ್ಷ ದಿನಾಂಕ 11.07. 1951 ರಲ್ಲಿ ಸ್ಥಾಪನೆ.
ಶ್ರೀಯುತ ಸಂಸ್ಥಾಪಕರಾದ
ಸತ್ಯಪ್ಪ ಎಸ್.ಮುನ್ನೋಳಿ ಇವರ ನೇತೃತ್ವದಲ್ಲಿ. ಸಂಘವು 1951 ರಲ್ಲಿ ಸ್ಥಾಪನೆಗೊಂಡಿತು
ಸುಮಾರು ಇಲ್ಲಿಯವರೆಗೆ ಸಂಘವು ಸುಧೀರ್ಘ 73 ವರ್ಷ ಕಳೆದಿದೆ.
ಪ್ರತಿ ಐದು ವರ್ಷಕ್ಕೊಮ್ಮೆ ಚುನಾವಣೆ ನಡೆದಿದೆ .
ಆದರೆ ಈ 2024ರ ವರ್ಷದ ಚುನಾವಣೆ ಅವಿರೋಧ ಆಯ್ಕೆಯಾಗಿದೆ. ಅಂದರೆ ಅದು ಇತಿಹಾಸವೇ ಸರಿ.
ಹೌದು ವೀಕ್ಷಕರೇ…
ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 11 ಜನ ನಿರ್ದೇಶಕರ ಅವಿರೋಧ ಆಯ್ಕೆಯಾಗಿ.
ಸಂಘದ ಅಧ್ಯಕ್ಷ ಅವಿರೋಧ ಆಯ್ಕೆ.
ನಂತರ ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಯಿತು.
ದಿನಾಂಕ 11.11.2024 ರಂದು ಸಂಘದ ಚುನಾವಣೆಯ ನಡೆದ ಪ್ರಕ್ರಿಯೆಯಲ್ಲಿ. ಮಾಜಿ ಸಂಸದರಾದ ರಮೇಶಣ್ಣ ವಿಶ್ವನಾಥ್ ಕತ್ತಿ ಅವರ ಮಾರ್ಗದರ್ಶನದಲ್ಲಿ. ಶಿರಗಾವ್ ಗ್ರಾಮದ ಮುಖಂಡರಾದ.
ಶ್ರೀ ರವೀಂದ್ರ ಹಿಡಕಲ್
ಶ್ರೀ ಬಸವರಾಜ ಗಟಿಗನ್ನವರ್
ಶ್ರೀ ರಾಜು ಬಿರಾದರ್ ಪಾಟೀಲ್
ಶ್ರೀ ಮಲ್ಲಿಕಾರ್ಜುನ್ ತೆರಣಿ
ಶ್ರೀ ಸುರೇಶ್ ತರಣಿ… ಹಾಗೂ ಇನ್ನುಳಿದ ಸಿರಿಗಾವ್ ಗ್ರಾಮದ ಪ್ರಮುಖರೆಲ್ಲರೂ ಕೂಡಿಕೊಂಡು.
ಎಲ್ಲ ನಿರ್ದೇಶಕರ ಆಯ್ಕೆ ಮಾಡುವಲ್ಲಿ ಯಶಸ್ವಿಯಾಗಿದ್ದರು.
ಆದರೆ…..
ದಿನಾಂಕ್ 21.11. 2024 ರಂದು
ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ನಡಯಿತು.
ಈ ಚುನಾವಣೆಯಲ್ಲಿ ಅಧ್ಯಕ್ಷರ ಅವಿರೋಧ ಆಯ್ಕೆಗೊಂಡರೆ.
ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಬೇಕಾದ ಪ್ರಸಂಗ ಸೃಷ್ಟಿಯಾಯಿತು.
ಉಪಾಧ್ಯಕ್ಷರ ಸ್ಥಾನಕ್ಕೆ ನಾಮ ಪತ್ರಿಕೆಗಳು
1 ಪ್ರಶಾಂತ್ ಸಿದ್ದಪ್ಪ ನಾಗನೂರಿ
2 ಕಸ್ತೂರಿ ಗಣಪತಿ ತೇರಣಿ
ಇಬ್ಬರ ನಡುವೆ ಚುನಾವಣೆ ನಡೆಯಿತು
ನಂತರ ಫಲಿತಾಂಶ.
8. ಬಹು ಮತಗಳನ್ನು ಪಡೆದುಕೊಂಡು
ಶ್ರೀ ಪ್ರಶಾಂತ್ ಸಿದ್ದಪ್ಪ ನಾಗನೂರಿ. ಜಯಶಾಲಿಯಾಗಿ.
ಸಂಘದ ಉಪಾಧ್ಯಕ್ಷರ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಘದ ಅಧ್ಯಕ್ಷ ಆನಂದ್ ಸೋಮಣ್ಣವರ್ ನಮ್ಮನ್ನು ಅವಿರದ ಆಯ್ಕೆಗೆ ಶ್ರಮಿಸಿದ ತಮ್ಮೆಲ್ಲರಿಗೂ ಧನ್ಯವಾದಗಳು ತಿಳಿಸಿದರು
ಉಪಾಧ್ಯಕ್ಷರಾದ…
ಪ್ರಶಾಂತ್ ಸಿದ್ದಪ್ಪ ನಾಗನೂರಿ ಮಾತನಾಡಿ ಉಪಾಧ್ಯಕ್ಷರ ಸ್ಥಾನಕ್ಕೆ ಆಯ್ಕೆ ಮಾಡಿದ ನನ್ನ ನಿರ್ದೇಶಕರಿಗೆ ನನ್ನ ಅಭಿನಂದನೆಗಳನ್ನ ಸಲ್ಲಿಸುತ್ತೇನೆ.
ಐದು ವರ್ಷಗಳ ಪ್ರಾಮಾಣಿಕ ಸೇವೆ ಮಾಡಿ ಸಂಘದ ಹಾಗೂ ರೈತರ ಪರ ಏಳಿಗೆಗಾಗಿ ಶ್ರಮಿಸುತ್ತೇನೆ ಎಂದು ಹೇಳಿದರು. ಹಾಗೂ ಗ್ರಾಮದ ಗುರುಹಿರಿಯರಿಗೆ ಕೂಡ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.