ಚಿಕ್ಕೋಡಿ: ಕುತುಹಲ ಮೂಡಿಸುತ್ತಿರುವ ಶಂಭು ಕಲ್ಲೋಳಿಕರ ನಡೆ, ದಿನದಿಂದ ದಿನಕ್ಕೆ ರಾಜಕೀಯ ವಿದ್ಯಮಾನಗಳ ಚರ್ಚೆ.!
ಲೊಕಸಭಾ ಚುನಾವಣಾ ಸಮೀಪಿಸುತ್ತಿದ್ದಂತೆ ದಿನದಿಂದ ದಿನಕ್ಕೆ ಹೆಚ್ಚುತ್ತಿರು ಚುನಾವಣಾ ಕಾವೂ….
ಇತ್ತ ಬಿಜೆಪಿಯಿಂದ ಅಣ್ಣಾಸಾಹೇಬ ಜೊಲ್ಲೆ ಸ್ಪರ್ದಿಯಲ್ಲಿದ್ದರೆ, ಕಾಂಗ್ರೇಸ್ ನಿಂದ ಪ್ರಿಯಾಂಕಾ ಸತೀಶ ಜಾರಕಿಹೊಳಿ ಸ್ಪರ್ಧಿಸಲಿದ್ದಾರೆ.
ಈ ಹಿಂದೆ ವಿಧಾನಸಭೆ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿ ಗೆಲುವಿನ ಸನಿಹದಲ್ಲಿ ಪರಾಜಿತ ಗೊಂಡಿದ್ದ ಹಿರಿಯ ನಿವೃತ್ತ ಐಎಎಸ್ ಅಧಿಕಾರಿ ಶಂಭು ಕಲೋಳಿಕರ ರವರು ಮತ್ತೆ ಈ ಭಾರಿ ಅಭಿಮಾನಿಗಳ ಅಪೇಕ್ಷ ಮೇರಿಗೆ ಲೋಕಸಭಾ ರಣಕಣಕ್ಕೆ ಇಳಿಯುವ ಸಾಧ್ಯತೆ ಇದ್ದು.
ಅನೇಕ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಯುತ್ತಿದೆ, ಹೀಗಾಗಿ ಅನೇಕ ಹಿರಿಯ ರಾಜಕೀಯ ಮುಖಂಡುರಗಳು ಕಲ್ಲೋಳಿ ಕರ ಬೆನ್ನೆಲುಬಾಗಿ ನಿಂತು ಚಿಕ್ಕೋಡಿ ಲೋಕಸಭಾ ಚುನಾವಣೆ ತ್ರಿಕೋನ ಸ್ಪರ್ದಿಗಳಾಗುತ್ತಾರೆಯೆ ಕಾದು ನೋಡಬೇಕಿದೆ.
ಇನ್ನೂ ಐ ಎ ಎಸ್ ನಿವ್ರತ್ತ ಅಧಿಕಾರಿ ಕಲ್ಲೋಳಿಕರ್ ಲೋಕಸಭಾ ರಾಜಕೀಯ ಅಖಾಡದಲ್ಲಿ ಎನೋ ಹೊಸ ಸಂಚಲನ ಮೂಡಿಸಲು ಹಾಗೂ ಅಭಿವ್ರದ್ದಿಯತ್ತ ಗಾಳಿ ಬಿಸಲು ಹರಸಾಹಸ ಮಾಡುತ್ತಿದ್ದಾರೆ.
ಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ನಿಮಿತ್ಯ, ನಿಪ್ಪಾಣಿ ಸೇರಿದಂತೆ ಅನೇಕ ಗ್ರಾಮಗಳಿಗೆ ಭೇಟಿ ನೀಡಿ ರಾಜಕೀಯ ವಿದ್ಯಮಾನ ಕುರಿತು ಶಂಭು ಕಲ್ಲೋಳಿಕರ ಅವರು ಚರ್ಚೆ ನಡೆಸಿದ್ದರು. ಅದರಂತೆ ಶಂಭು ಕಲ್ಲೋಳಿಕರ್ ಮುಂದಿನ ನಡೆ ಆಶ್ಚರ್ಯಕರವಾಗಿರಲಿದೆ.
ಅದು ಅನೇಕ ಪ್ರತಿಸ್ಪರ್ದಿಗಳಿಗೆ ಈಗಾಗಲೇ, ಎದೆ ನಡುಕ ಹುಟ್ಟಿಸುತ್ತಿದೆ.
ಇನ್ನು ಇಂದಿನ ಸಭೆಯಲ್ಲಿ ಅಶೋಕ ಅಸೋದೆ ದಲಿತ ಮುಖಂಡರು ನಿಪ್ಪಾನಿ. ಹಾಗು ಪ್ರವೀಣ ಸೌಂದಲ್ಗೆಕರ್, ರಾಜು ಮೇಸ್ತ್ರಿ, ರಮೇಶ್ ಕಾಂಬಳೆ, ಪ್ರವೀಣ್ ಕಾಂಬಳೆ, ಕಿರಣ ಕಾಂಬಳೆ, ಬಡೇ ಸಾಹೇಬ್ ತೋರಟ್, ಜಗದೀಶ್ ಹೆಗಡೆ, ಪ್ರತಾಪ್ ಮೆತಾನೆ, ದೀಪಕ ಮೈಶಾಳೆ ಉಪಸ್ಥಿತರಿದ್ದರು.