ಕೈ ಕೊಟ್ಟ ಕಾಂಗ್ರೆಸ್ಸಿಗೆ ಬಿಸಿ ಮುಟ್ಟಿಸಲು ಮುಂದಾದ ಶಂಭು ಕಲ್ಲೋಳಿಕರ!
ರಾಯಬಾಗ:ಕೈ ಕೊಟ್ಟ ಕಾಂಗ್ರೆಸ್ಸಿಗೆ ಬಿಸಿ ಮುಟ್ಟಿಸಲು ಮುಂದಾದ ಶಂಭು ಕಲ್ಲೋಳಿಕರ. ಕೈ ಟಿಕೇಟ್ ತಪ್ಪಿಸಿದ ಕಾಂಗ್ರೇಸ್ ಗೆ ಬಿಸಿ ಮುಟ್ಟಿಸಲು ಬಂಡಾಯ ಅಭ್ಯರ್ಥಿಯಾದ ಶಂಭು ಕಲ್ಲೋಳ್ಕರ್ ಹೌದು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನಲ್ಲಿ ಹಲವೂ ದಿನಗಳಿಂದ ಶಂಭು ಕಲ್ಲೊಳಿಕರ್ ಕಾಂಗ್ರೆಸ್ ಅಭ್ಯರ್ಥಿ ಎಂದು ಅಬ್ಬರದ ಪ್ರಚಾರ ಕೂಡಾ ನಡೆಸಿದ್ದರು.ಆದರೆ ರಾಜ್ಯದ ಕಾಂಗ್ರೆಸ್ ನಾಯಕರು ಕಲ್ಲೋಳ್ಕರ ಗೆ ಟಿಕೇಟ ಕೈಕೊಟ್ಟಿದ್ದರಿಂದ ಕಲ್ಲೋಳ್ಕರ ಅಪಾರ ಪ್ರಮಾಣದ ಅಭಿಮಾನಿಗಳು ಕಣ್ಣೀರು ಹಾಕಿದ ಘಟನೆಗಳು ನಡೆದವು.
ಹೀಗಾಗಿ ಇದನ್ನೆಲ್ಲ ನೋಡಿದ ಅಭಿಮಾನಿಗಳು ಇಂದು ರಾಯಬಾಗ ತಾಲೂಕಿನಲ್ಲಿ ಕಲ್ಲೋಳ್ಕರ ಅಭಿಮಾನಿಗಳಿಂದ ಅದ್ದೂರಿಯಾದ ಸಭೆ ನಡೆಸಿ,ಪಕ್ಷೇತರರಾಗಿ ಸ್ಪರ್ದಿಸಲು ಜನಾಭಿಪ್ರಾಯ ಕೊಟ್ಟರು.ಈ ಹಿನ್ನಲೆ ಬ್ರಹತ್ತ ಅಭಿಮಾನಿ ಬಳಗದ ಜೊತೆ ಸಭೆ ನಡೆಸಿ ಮತದಾರರ ಸಲಹೆ ಕೇಳಿದರು. ಈ ಸಂದರ್ಬದಲ್ಲಿ ಮಾತನಾಡಿದ ಕಲ್ಲೋಳ್ಕರ ಅಭಿಮಾನಿಗಳು ಕಾಂಗ್ರೆಸ್ ಟಿಕೆಟ್ ಸಿಕ್ಕಿದ್ರೆ ಕೇವಲ ೩೫ ಸಾವಿರ ಮತಗಳ ಅಂತರದಿಂದ ಚುನಾವಣೆಯಲ್ಲಿ ಚುಕ್ಕಾಣಿ ಹಿಡಿಯುತ್ತಿದ್ದೆವು ಈಗ ಟಿಕೆಟ್ ಕ್ಯಾನ್ಸಲ್ ಆಗಿದ್ದಕ್ಕೆ ೫೦ ಸಾವಿರ ಮತಗಳ ಅಂತರದಿಂದ ಗೆದ್ದು ಬರುತ್ತಾರೆ ಎಂದು ಮಾತನಾಡಿದರು.
ರಾಯಬಾಗ ವಿಧಾನ ಸಭೆ ಮತಕ್ಷೇತ್ರ ಅಭಿವೃದ್ಧಿಗೆ ಹಿಂದುಳಿದ ಮತಕ್ಷೇತ್ರವಾಗಿದೆ.ಹಾಗಾಗಿ ನಮ್ಮಂತ ದಕ್ಷ ಅಭ್ಯರ್ಥಿಗಳಿಗೆ ಟಿಕೇಟ್ ತಪ್ಪಿಸುವದು ಅವರ ಹುಣ್ಣಾರವಾಗಿದೆ. ತಾಲೂಕಿನಲ್ಲಿ ಭಯದ ವಾತಾವರಣ ಮೂಡಿಸಿದೆ ನೀವೆಲ್ಲರೂ ನಮಗೆ ಹೈಕಮಾಂಡ ಕ್ಕಿಂತ ಹೆಚ್ಚಿನವರು ನೀವೆ ನನಗೆ ಹೈಕಮಾಂಡ ಮತದಾರರ ಪ್ರಭುಗಳೆ ನಮಗೆ ಹೈಕಮಾಂಡ. ನಿಮ್ಮೆಲ್ಲಾ ಆಶೀರ್ವಾದ ನಮಗೆ ಬೇಕೆಂದು ಸಭೆಯನ್ನುದ್ದೆಶಿಸಿ ಮಾತನಾಡಿದ ಶಂಭು ಕಲ್ಲೋಳ್ಕರ್.

ಈ ಸಂದರ್ಬದಲ್ಲಿ ಪ್ರತಿಜ್ನಾ ವೀದಿ ಮಾಡಿ ಮೊಬೈಲ್ ಟಾರ್ಚ ಬೀಡುವ ಮೂಲಕ ಶಂಭು ಕಲ್ಲೋಳ್ಕರ ಅವರಿಗೆ ಮತದಾರರು ಸಾಥ ನೀಡಿದರು.
ಸಾವಿರಾರೂ ಸಂಖ್ಯೆಯಲ್ಲಿ ಶಂಭು ಕಲ್ಲೋಳಿಕರ ಅಭಿಮಾನಿಗಳ ದಂಡೆ ಹರಿದುಬಂದಿತ್ತು. ಕಾರ್ಯಕ್ರಮದುದ್ದಕ್ಕೂ ಯಾವುದೇ ಮೂಲೆಯಲ್ಲಿ ಕೇಳಿದರು ಹರ,ಹರ,ಶಂಭು,ಘರ್,ಘರ್ ಶಂಭು ಎಂಬ ಕೂಗು ಕೇಳಿ ಬರುತ್ತಿತ್ತು.ವರದಿ:-ಚಂದ್ರು ತಳವಾರ


