ವೈರಿಗಳ ದುರಹಂಕಾರಕ್ಕೆ ತಿರುಗೇಟು ನೀಡಲು ಸೆಡ್ಡು ಹೊಡೆದ ಶಂಭು ಕಲ್ಲೋಳಿಕರ್.!
ಚಿಕ್ಕೋಡಿ: ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳ ಜೊತೆ ಪಕ್ಷೇತರ ಅಭ್ಯರ್ಥಿಯಾಗಿ ಕಲ್ಲೋಳಿಕರ್ ನಾಮಪತ್ರ ಸಲ್ಲಿಕೆ
ಹೌದು ವೀಕ್ಷಕರೇ, ಚಿಕ್ಕೋಡಿ ಲೋಕಸಭಾ ಕದನದಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಪಕ್ಷೇತರ ಅಭ್ಯರ್ಥಿಯದ್ದೆ ತಲೆನೋವು ಆಗಿಬಿಟ್ಟಿದೆ.
ಇತ್ತ ಕಾಂಗ್ರೆಸ್ ನಿಂದ ಪ್ರಿಯಾಂಕಾ ಜಾರಕಿಹೊಳಿ ಕಣದಲ್ಲಿ ಇದ್ದರೆ, ಬಿಜೆಪಿಯಿಂದ ಅಣ್ಣಾಸಾಹೇಬ ಜೊಲ್ಲೆ ಕೂಡ ಪ್ರತಿಸ್ಪರ್ದಿಯಾಗಿದ್ದು, ಸ್ವತಂತ್ರ ಪಕ್ಷದಿಂದ ಶಂಭು ಕಲ್ಲೋಳ್ಕರ್ ನಾನೇನು ಯಾವ ಪಕ್ಷಕ್ಕೂ ಕಡಿಮೆ ಇಲ್ಲ ಎಂಬಂತೆ, ತೊಡೆತಟ್ಟಿ ನಿಂತಿರುವುದು ಇಬ್ಬರ ಜಗಳ ಮೂರನೆಯವನಿಗೆ ಲಾಭ ಎನ್ನುವಂತಿದೆ.
ಇನ್ನು ದಿನದಿಂದ ದಿನಕ್ಕೆ ಚುನಾವಣೆ ಕಾವು ಹೆಚ್ಚುತ್ತಿದ್ದಂತೆ ಶಂಭು ಪಡೆಗೆ ಅಸಂಖ್ಯಾತ ಜನಬೇಂಬಲ ವ್ಯಕ್ತವಾಗುತ್ತಿದೆ. ಹಾಗೆ ಪಕ್ಷೇತರ ಅಭ್ಯರ್ಥಿಯಾದ ಕಲ್ಲೋಳಿಕರ್ ಕಾರ್ಯಕರ್ತರಿಗೆ, ಕೆಲವು ಸ್ವಯಂಘೋಷಿತ ನಾಯಕರಿಂದ ಆಶೆ ಆಮಿಷಗಳನ್ನು ಒಡ್ಡುವುದು, ಬೆದರಿಕೆ ಹಾಕುವುದು ಕೂಡ ಕಂಡು ಬರುತ್ತಿದೆ.
ಶಂಭು ಕಲ್ಲೋಳಿಕರ್ ಅವರು ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಗೆ ಭಾರಿ ಹೊಡೆತ ನೀಡಿ ಬಹುಮತ ಪಡೆದಿದ್ದರು..
ಈಗ ವಿರೋಧಿಗಳ ಯಾವ ಕುತಂತ್ರಕ್ಕೂ ಮತದಾರರು ಒಳಪಡಬಾರದು ಎಂದು ಎಚ್ಚರಿಸಿದ್ದಲ್ಲದೇ, ಕುಟುಂಬ ರಾಜಕೀಯವನ್ನು ಧಿಕ್ಕರಿಸಬೇಕು ಎಂದು ಮನವಿ ಮಾಡಿದರು.
ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೆ ಇಲ್ಲಿ ಯಾರನ್ನು ಡಿಕ್ಟೇಟರ್ ಆಗಲು ಬಿಡುವುದಿಲ್ಲ. ಚುನಾವಣೆಯಲ್ಲಿ ಭರ್ಜರಿ ಆಗಿ ಗೆಲುವು ಸಾಧಿಸಿ ಚಿಕ್ಕೋಡಿ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆಂದು ಮತದಾರರಿಗೆ ಭರವಸೆ ನೀಡಿದರು.
ವರದಿ: ಚಂದ್ರು ತಳವಾರ ಟಿವಿ3 ನ್ಯೂಸ್ ಕನ್ನಡ ಚಿಕ್ಕೋಡಿ