ಮತದಾರರ ಓಲೈಕೆಯತ್ತ ಶಂಭು ಕಲ್ಲೋಳಿಕರ್ ಚಿತ್ತ.! ರಾಜ್ಯದಲ್ಲಿ ಮೇ 10ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವು ದಿನಗಳು ಮಾತ್ರ ಬಾಕಿ ಉಳಿದಿದ್ದು, ಮತದಾರರನ್ನು ಓಲೈಸಲು ರಾಜಕೀಯ ನಾಯಕರು ಕ್ಷೇತ್ರದಾದ್ಯಂತ ಇನ್ನಿಲ್ಲದ ಕಸರತ್ತುಗಳನ್ನು ಮಾಡುತ್ತಾ ಪ್ರಚಾರ ಕಾರ್ಯ ತೀವ್ರಗೊಳಿಸಿದ್ದಾರೆ. ಮೂರು ಪಕ್ಷಗಳಿ ಷಡ್ಡು ಹೊಡೆದು ಪಕ್ಷೇತರ ಅಭ್ಯರ್ಥಿಯಾಗಿ ಆಟೋರಿಕ್ಷಾ ಗುರುತು ಹೊಂದಿ ಕನಕಳಿದಿರುವ ಶಂಭು ಕಲ್ಲೋಳಿಕರ ಆರ್ಭಟ ಎಲ್ಲ ರಾಜಕೀಯ ಪಕ್ಷಗಳಿಗಿಂತಲೂ ಜೋರಾಗಿದೆ.
ಸಮಯ ಸರಿಯಾಗಿ ಉಪಯೋಗಿಸಿಕೊಳ್ಳುತ್ತಿರುವ ಶಂಭು ಕಲೋಳಿಕರ ಕ್ಷೇತ್ರದ ಸರ್ವಾಂಗಿನ ಅಭಿವೃದ್ಧಿಗೆ ನನಗೆ ಅವಕಾಶ ಮಾಡಿಕೊಡಿ ಎಂದು ಪ್ರತಿ ಹಳ್ಳಿಗಳಿಗೆ ಪ್ರತಿ ಮನೆಮನೆಗಳಿಗೆ ತೆರಳಿ ಮತದಾರರ ಮನವಲಿಸುವಲ್ಲಿ ಯಶಸ್ಸು ಕಾಣುತ್ತಿದ್ದಾರೆ.
ಮತ್ತು ಶಂಭು ಕಲ್ಲೋಳ್ಕಾರ್ ಪ್ರಚಾರಕ್ಕೆ ಮತದಾರ ಪ್ರಭುಗಳು ಭೇಷ್ ಎನ್ನುತ್ತಿದ್ದಾರೆ.
ಎಲ್ಲ ರಾಜಕೀಯ ಪಕ್ಷಗಳಿಗೆ ಪಕ್ಷೇತರ ಅಭ್ಯರ್ಥಿಯಾದ ಶಂಭು ಕಲ್ಲೋಳಿಕರ್ ತಲೆ ನೋವಾಗಿ ಪರಿಣಮಿಸಿದ್ದಾರೆ.
ನಿಪನಾಳ,ಮಂಟೂರ, ಬೆಂಡವಾಡ, ಮೆಕಳಿ, ನಂದಿಕುರಳಿ,ಮಾವಿನ ಹೊಂಡ,ಗ್ರಾಮಗಳಲ್ಲಿ ಎಲ್ಲಿ ನೋಡಿದರೂ ಅಲ್ಲಿ ಅಬ್ಬರದ ಪ್ರಚಾರಕ್ಕೆ ಮತದಾರರು ಹರ ಹರ ಶಂಭು ಘರ್ ಘರ್ ಶಂಭು ಎಂದು ಜಯಗೋಷ ಹಾಕುತ್ತಾ ಸ್ವಯಿಚ್ಛೆಯಿಂದ ಪ್ರಚಾರ ನಡೆಸುತ್ತಿರುವುದು ಕಂಡುಬಂದಿತು.
ಈ ಸಂದರ್ಭದಲ್ಲಿ ಯುವ ನಾಯಕ ದುಳಗೌಡ ಪಾಟೀಲ, ವಕೀಲರಾದ ಮಹೇಶ ತವಸಿ,ನಾಗಪ್ಪಾ ಮ್ಯಾಗಡಿ ಮಲ್ಲಿಕ ನದಾಫ,ಬಾಳು ಪಡತರಿ,ಜಿತೇಂದ್ರ ಮರಿಯಪ್ಪಗೋಳ, ಕಲ್ಲಪ್ಪ ಹಾರೂಗೇರಿ, ಬಿಎನ್ ಬಂಡಗಾರ,ಸತ್ಯಪ್ಪ ಜಿಡ್ಡಿಮನಿ, ಮಹಮ್ಮದ ನದಾಫ ಬಿರುಸಿನ ಪ್ರಚಾರಕ್ಕೆ ಸಾತ್ ನೀಡಿದರು.ವರದಿ:-ಚಂದ್ರು ತಳವಾರ


