ದಲಿತ ಮುಖಂಡ ದುರ್ಗಪ್ಪನಿಗೆ ಕಿಚಕ ಪಾಪಿ ಕೃಷ್ಣಾ ಗುದಗೊಪ್ಪನಿಂದ ಜೀವ ಬೆದರಿಕೆ…!
ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಕಿಟದಾಳ ಗ್ರಾಮದಲ್ಲಿ ಜಾತಿ ನಿಂದನೆ ಕೊಲೆ ಆರೋಪ ಕೇಳಿ ಬಂದಿದೆ.
ಅಟಗಲ್ ಗ್ರಾಮದ ಕನ್ನಡ ಶಾಲೆಯಲ್ಲಿ ಎಸ್.ಡಿ.ಎಂ.ಸಿ ಕಮಿಟಿ ರಚನೆ ಮಾಡಬೇಕಾಗಿತ್ತು.
ಇ ನಿಟ್ಟಿನಲ್ಲಿ ಸೇರಿದ್ದ ಸಭೆಯಲ್ಲಿ ದುರ್ಗಪ್ಪ ಮಾದರ ಎಂಬ ದಲಿತ ಮುಖಂಡನಿಗೆ, ಮೇಲ್ಜಾತಿಯ ಮೂರು ಬಿಟ್ಟು ನಿಂತ ಕೃಷ್ಣಾ ಗುದಗೋಪ್ಪ, ಹಾಗು ಆತನ ಸಹಚರರು ಜಾತಿ ನಿಂದನೆ ಹಾಗು ಕೊಲೆ ಬೆದರಿಕೆ ಹಾಕಿರುವ ಕುರಿತು ಅವರುಗಳ ವಿರುದ್ಧ ಸವದತ್ತಿ ಪೊಲೀಸ್ ಠಾಣೆಯಲ್ಲಿ ದುರ್ಗಪ್ಪ ಮಾದರ ಪ್ರಕರಣ ದಾಖಲಿಸಿದ್ದಾರೆ.
ಬಾಯಿತೆರೆದರೆ ಸಾಕು ಬೆಂಕಿ ಕೆಂಡದಂತ ಮಾತು,
ಸಮಾಜದ ಸ್ವಾಸ್ತ್ಯ ಹಾಳು ಮಾಡುವುದೆ ಇ ಮನೆಹಾಳರ ಕಾಯಕವಾಗಿದೆ.
ದುರ್ಗಪ್ಪ ಮಾದರ ಸಮಾಜ ಸೇವಕನಾಗಿದ್ದು, ಸಾಕಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬಂದಿರುವ ದುರ್ಗಪ್ಪ ಮಾದರ ತನ್ನ ಊರಿನ
ಶಾಲೆಯ ಅಭಿವೃದ್ಧಿ ಹಿತ ದೃಷ್ಟಿಯಿಂದ ಕಮಿಟಿ ರಚನೆ ಆಗಬೇಕೆಂದು ಪಟ್ಟು ಹಿಡಿದಾಗ ಅದನ್ನು ಸಹಿಸಲಾಗದೆ, ಮೇಲ್ವರ್ಗದ ಕೃಷ್ಣಾ ಮತ್ತು ಆತನ ಬೆಂಬಲಿಗರು ಜಾತಿ ಎತ್ತಿ ಬೈದು ಹಲ್ಲೆಗೆ ಯತ್ನಿಸಿ ನಿನ್ನ ಕುಟುಂಬ ಸಮೇತ ಕಡಿದು ಗೋಣಿ ಚೀಲದಲ್ಲಿ ತುಂಬಿ ಹಳ್ಳ ಕ್ಕೆ ಎಸೆಯುತ್ತೇವೆಂದು ಬೆದರಿಕೆ ಹಾಕಿದ್ದಾರೆ ಎಂದು ದುರ್ಗಪ್ಪಾ ಆರೋಪಿಸಿದ್ದಾರೆ.
ಜಾತಿ ನಿಂದನೆ, ಮತ್ತು ಕೊಲೆ ಬೆದರಿಕೆ ಹಾಕಿದ ಆರೋಪಿಗಳನ್ನು ಪೊಲೀಸರು ಕೂಡಲೆ ಬಂದಿಸಿ ಜೈಲಿಗಟ್ಟಬೇಕೆಂದು ದಲಿತ ಮುಖಂಡ ಸತೀಶ್ ಹರಿಜನ ಅಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ, ದಲಿತ ಸಂಘರ್ಷ ಸಮಿತಿ ,ರಿ, ಕರ್ನಾಟಕ ಅಣ್ಣಯ್ಯ ಬಣ ಲಕ್ಕಪ್ಪ ಕೆಳಗಡೆ, ರಾಜ ಸಂಘಟನಾ ಸಂಚಾಲಕರು, ಆನಂದ್ ತಾಯವಗೋಳ,ಜಿಲ್ಲಾ ಅಧ್ಯಕ್ಷರು ಬೆಳಗಾವಿ ಅಣ್ಣಯ್ಯ ಬಣ, ದಲಿತ ಮುಖಂಡರು, ವಿಠಲ ಸಣ್ಣಕ್ಕಿ ಗೋಕಾಕ್, ಸತೀಶ್ ಹರಿಜನ್ ದಲಿತ ಮುಖಂಡರು, ಗೋಕಾಕ್, ಬಬಲೆಪ್ಪ ಮಾದರ ಗೋಕಾಕ, ಸುಂದರವ ಕಟ್ಟಿಮನಿ, ದೊಡ್ಡವ್ವ ತಳಗೇರಿ, ಸತ್ಯಪ್ಪ ಮೇಸ್ತ್ರಿ, ಬಸು ಬಿ ತಳವಾರ್, ಅಣ್ಣಯ್ಯ ಬಣ, ರಾಜು ಕೊಲ ಕನ್ನಡ ಸೈನ್ಯ ಜಿಲ್ಲಾಧ್ಯಕ್ಷರು ಬೆಳಗಾವಿ, ಚಿನ್ನು ಬೆಳಗಾವಿ ದಲಿತ ಮುಖಂಡರು, ಸೂರಜ್ ಜಾಲಗಾರ ಸಮಾಜ ಸೇವಕರು ಬೆಳಗಾವಿ, ಎಲ್ಲಾ ದಲಿತ ಪರ ಸಂಘಟನೆ ತಪ್ಪಿತಸ್ತರನ್ನು ಬಂದಿಸಲು ಒತ್ತಾಯಿಸಿದರು. ಅದರಂತೆ ಸಿಪಿಐ ಸಾಹೇಬರು ಸವದತ್ತಿ ಆರೋಪಿಯಾಗಿರುವ ಕೃಷ್ಣಾ ಗುದುಗೋಪ್ಪನನ್ನು ಕೂಡಲೆ ಬಂದಿಸುವ ಭರವಸೆ ಕೂಡಾ ಕೊಟ್ಟಿರುತ್ತಾರೆ.
ಜರ್ನಲಿಸ್ಟ್: ಚಂದ್ರು ತಳವಾರ