ಸಿದ್ದಿ ಜನಾಂಗದ ಬದುಕನ್ನು ಉನ್ನತೀಕರಿಸುವಂತೆ ಮುಖ್ಯಮಂತ್ರಿಗಳಿಗೆ ಸಮಾಜ್ ಸೇವಕ ಜ್ಯೋತಿಬಾ ಬೆಂಡಿಗೆರಿ ಇವರಿಂದ ಮನವಿ
ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಭುರುಣಕಿ ಗೋಧೋಳಿ
ತಾವರಗಟ್ಟಿ ಗ್ರಾಮಗಳು ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿಯೂ ಸಹ ಅಪರೂಪದ ಸಿದ್ದಿ ಜನಾಂಗದವರು ವಾಸುತಿದ್ದಾರೆ ಈ ಸಿದ್ದಿ ಜನಾಂಗದವರಲ್ಲಿ ದೈಹಿಕ ಕ್ಷಮತೆ ಅಪಾರ ಪ್ರಮಾಣದಲ್ಲಿ ಇದ್ದು ಅಥ್ಲೆಟಿಕ್ಸ್ ಕ್ರೀಡೆಗಳಲ್ಲಿ ಈ ಸಿದ್ದಿ ಜನಾಂಗದವರು ಭಾಗವಹಿಸಿ ಸಾಕಷ್ಟು ಪದಕಗಳು ಹಾಗೂ ಕೀರ್ತಿ ತಂದಿರುತ್ತಾರೆ ಆದರೆ ಸಿದ್ದಿ ಜನಾಂಗದವರು ಕ್ರೀಡೆಯಲ್ಲಿ ಅಪಾರ ಆಸಕ್ತಿ ಹೊಂದಿದ್ರು ಸಹ ಬಡತನ ಹಾಗೂ ನಮ್ಮ ತಾಲೂಕಿನಲ್ಲಿ ಯಾವುದೇ ಕ್ರೀಡಾ ವಸತಿ ಶಾಲೆ ಇಲ್ಲದಿರುವುದರಿಂದ ಸಿದ್ದಿ ಜನಾಂಗದವರು ಸ್ಪರ್ಧಾತ್ಮಕ ಕ್ರೀಡೆಗಳಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಲು ವಂಚಿತರಾಗಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ ಅದರಿಂದ ನಮ್ಮ ಖಾನಾಪುರ ತಾಲೂಕಿನ ವ್ಯಾಪ್ತಿಯಲ್ಲಿ ಹೊಸದಾಗಿ ಕ್ರೀಡಾ ವಸತಿ ಶಾಲೆಯನ್ನು ನಿರ್ಮಿಸಿದಲ್ಲಿ ಈ ಸಿದ್ದಿ ಜನಾಂಗದ ಕ್ರೀಡಾಪಟುಗಳು ಇತರ ಕ್ರೀಡಾಪಟುಗಳು ತಮ್ಮ ಪ್ರತಿಭೆ ಮತ್ತು ಸಾಧನೆಯಿಂದ ನಮ್ಮ ತಾಲೂಕಿನ ಬೆಳಗಾವಿ ಜಿಲ್ಲೆ, ರಾಜ್ಯ ಮಟ್ಟದಲ್ಲಿಕೀರ್ತಿ ತರುತ್ತಾರೆ ಎಂಬ ಭರವಸೆ ಇರುತ್ತದೆ ಅಲ್ಲದೆ ಸದರಿ ಸಿದ್ದಿ ಜನಾಂಗಕ್ಕೆ ಪಕ್ಕದ ಹಳಿಯಾಳ ತಾಲೂಕಿನಲ್ಲಿ ಪ್ರತಿ ತಿಂಗಳು ಸರ್ಕಾರದಿಂದ ಪೌಷ್ಟಿಕ ಆಹಾರ ಕೀಟ ವಿತರಣೆ ಮಾಡುತ್ತಿದ್ದಾರೆ ಮತ್ತು ಅವರಿಗೆ ಎಸ್ಟಿ(ST )ಮೀಸಲು ಬರುತ್ತಾ ಇದೆ ಆದರೆ ನಮ್ಮ ಖಾನಾಪುರ ತಾಲೂಕಿನಲ್ಲಿ ಇವರನ್ನು ಎಸ್ ಟಿ ಮೀಸಲಾತಿಗೆ ಪರಿಗಣಿಸುತ್ತಿಲ್ಲ ಇದರಿಂದ ನಮ್ಮ ತಾಲೂಕಿನ ಸಿದ್ದಿ ಜನಾಂಗದವರು ಸರಕಾರದ ವಿವಿಧ ಯೋಜನೆಗಳಿಂದ ವಂಚಿತರಾಗಿರುತ್ತಾರೆ ಅದರಿಂದ ಮಾನ್ಯ ಮುಖ್ಯಮಂತ್ರಿಗಳಲ್ಲಿ ಮತ್ತು ಸಂಬಂಧಪಟ್ಟ ಸಚಿವರಲ್ಲಿ ಈ ವಿಷಯದ ಕುರಿತು ಖುದ್ದಾಗು ಖುದ್ದಾಗಿ ಆಸಕ್ತಿ ವಹಿಸಿ ನಮ್ಮ ಖಾನಾಪುರ್ ತಾಲೂಕಿನ ವ್ಯಾಪ್ತಿಯಲ್ಲಿ ಸರ್ಕಾರದ ವತಿಯಿಂದ ಕ್ರೀಡಾ ವಸತಿ ಶಾಲೆಯನ್ನು ಮಂಜೂರಾತಿ ಮಾಡಿಕೊಡಬೇಕೆಂದು ಮತ್ತು ಈ ಸಿದ್ದಿ ಜನಾಂಗದವರಿಗೆ ST ಪ್ರಮಾಣ ಪತ್ರ ಮತ್ತು ಪ್ರತಿ ತಿಂಗಳು ಪೌಷ್ಟಿಕ ಆಹಾರ ಕೀಟ ವಿತರಣೆ ಆಗಬೇಕೆಂದು ಸಮಾಜ ಸೇವಕ ಜ್ಯೋತಿಬಾ ಬೆಂಡಿಗೇರಿ ಇವರು ವಿನಂತಿಸಿದ್ದಾರೆ.