ಬೆಳಗಾವಿ: ವಿಶಾಲ್ ಮಾರ್ಟ್ ನಲ್ಲಿ, ಅವಧಿ ಮುಗಿದ (expired) ಉತ್ಪನ್ನಗಳ ಮಾರಾಟ.!
ಬೆಳಗಾವಿಯ ಮಹಾಂತೇಶ್ ನಗರದ ಕಣಬರಗಿ ರಸ್ತೆಯಲ್ಲಿ ಕಂಡು ಬರುವ ವಿಶಾಲ್ ಮೆಗಾ ಮಾರ್ಟ್, ಅವದಿ ಮುಗಿದ ಸ್ಟಾಕ್ ಗಳನ್ನು, ಮಾರಾಟ ಮಾಡಿ, ಇದೀಗ ಗ್ರಾಹಕರ ಕೆಂಗಣ್ಣಿಗೆ ಗುರಿಯಾಗಿದೆ. ಇನ್ನು ಮೊನ್ನೆ ಅಷ್ಟೇ, ಡಿ.೦೪.೦೩.೨೦೨೬ ರಂದು ಗ್ರಾಹಕನೋರ್ವ ವಿಶಾಲ್ ಮಾರ್ಟ್ ನಲ್ಲಿ, ದಿನಸಿ ಉತ್ಪನ್ನಗಳನ್ನು ಖರೀದಿಸಿದ್ದು, ಅವುಗಳು ಅವಧಿ ಮುಗಿದು ಹೋದ(expired) ಉತ್ಪನ್ನಗಳು ಎಂದು ಕಂಡು ಬಂದಿವೆ. ಅಷ್ಟು ಮಾತ್ರವಲ್ಲದೆ, ನಿಗದಿತ ಬೆಲೆಗಿಂತ ಹೆಚ್ಚಿನ ದರಕ್ಕೆ, ವಸ್ತು ಖರೀದಿ ಮಾಡಿದ್ದು, ಗ್ರಾಹಕನ ಆಕ್ರೋಶಕ್ಕೆ ಕಾರಣವಾಗಿದೆ.
ಕಾನೂನು ಬಾಹಿರ ಮತ್ತು ಗ್ರಾಹಕರ ಆರೋಗ್ಯಕ್ಕೆ ಹಾನಿಕರ ಮಾಡುವ ವಿಶಾಲ್ ಮಾರ್ಟ್ ನ ವ್ಯಾಪಾರ ನೀತಿಯನ್ನು ಖಂಡಿಸಿ ಗ್ರಾಹಕ ತಕ್ಷಣ ಅಲ್ಲಿನ ವ್ಯವಸ್ಥಾಪಕರ ಗಮನಕ್ಕೆ ತಂದಿರುತ್ತಾನೆ.
ಮಾಹಿತಿ ತಿಳಿದು ತಕ್ಷಣ ಎಚ್ಚೆತ್ತ, ವಿಶಾಲ್ ಮಾರ್ಟಿನ ಮೆಗಾ ಸಿಬ್ಬಂದಿಗಳು ತಪ್ಪಾಯ್ತು ಸರ್, ಕ್ಷಮಿಸಿ! ಇನ್ನೊಂದು ಸಾರಿ ಇಂತಹ ತಪ್ಪು ಮಾಡಲಾರೆವು ಎಂದು ಅಂಗಲಾಚಿ ಬೇಡಿದ್ದಾರೆ.
ಅಷ್ಟೆ ಅಲ್ಲದೆ ಗ್ರಾಹಕ ಈ ಕುರಿತು, ಆಹಾರ ಸುರಕ್ಷತೆ (FSSAI) ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಅವಧಿ ಮುಗಿದ ಉತ್ಪನ್ನಗಳ ಮಾರಾಟವು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ೨೦೦೬ ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ.
ಇನ್ನು ಆಫರ್ ಹೆಸರಿನಲ್ಲಿ ಗ್ರಾಹಕರನ್ನು ಪುಸಲಾಯಿ,, ವಂಚಿಸಿ ಜನರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿರುವ ವಿಶಾಲ್ ಮಾರ್ಟಿನ ನಡೆ ಭಯಾನಕವಾಗಿದೆ.
ಆದ್ದರಿಂದ ಸರಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಈ ಕೂಡಲೇ ಎಚ್ಚೆತ್ತು, ಆರೋಗ್ಯಕ್ಕೆ ಹಾನಿಕರ ಮತ್ತು ಜನರ ಜೇಬಿಗೆ ಕತ್ತರಿ ಹಾಕುವ ವಿಶಾಲ್ ಮೆಗಾ ಮಾರ್ಟ್ ವಿರುದ್ಧ, ಸೂಕ್ತ ಕಾನೂನಿನ ಕ್ರಮ ಜರುಗಿಸಬೇಕೆಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಯಾವುದೇ ವಸ್ತು ಖರೀದಿಸುವ ಮುನ್ನ (best before) ಅಥವಾ (expiry) ಡೇಟ್ ಪರೀಕ್ಷಿಸಿ! ಎಂಬುದು ನಮ್ಮ ಶುದ್ದಿವಾಹಿನಿಯ ಆಶಯವಾಗಿದೆ.
ಜರ್ನಲಿಸ್ಟ್: ಚಂದ್ರು ತಳವಾರ್


