RCU BELAGAVI : ಡಾ:ಬಿ.ಆರ್ ಅಂಬೇಡ್ಕರ್ 68ನೇ ಮಹಾ ಪರಿನಿರ್ವಾಣ ದಿನದಂದು, ಕುಲಪತಿಗಳು ಗೈರು; ಬಾಬಾ ಸಾಹೇಬರಿಗೆ ಅವಮಾನ.!
ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ಗೌರವಾನ್ವಿತ ಹುದ್ದೆಯಲ್ಲಿರುವ ಕುಲಪತಿಗಳಾದ ಪ್ರೊ.ಸಿ.ಎಂ. ತ್ಯಾಗರಾಜ ರವರು ಡಾಕ್ಟರ್ ಬಿಆರ್ ಅಂಬೇಡ್ಕರ್ ಪರಿನಿರ್ವಾಹಣ ದಿನದಂದು ಆಚರಣೆಗೆ ಬಾರದೆ ಸಿಂಡಿಕೇಟ್ ಮೀಟಿಂಗ್ ನಲ್ಲಿ ಭಾಗವಹಿಸಿ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ ರವರಿಗೆ ಅವಮಾನ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ವಿಶ್ವವೇ ಗೌರವಿಸುವ ವ್ಯಕ್ತಿತ್ವದ ಮಹಾನ್ ಮಾನವತಾವಾದಿ ನಮ್ಮ ಹೆಮ್ಮೆಯ ಡಾ. ಬಿ ಆರ್ ಅಂಬೇಡ್ಕರ್….
ಭಾರತದ ಬಹುಸಂಖ್ಯಾತರ ಮನಸಲ್ಲಿ ಅಚ್ಚಳಿಯದೇ ಉಳಿದಿರುವ ಬಾಬಾ ಸಾಹೇಬರ ಪರಿನಿರ್ವಾನ ದಿನದಂದು ಇಡೀ ರಾಷ್ಟ್ರವೇ ಅವರಿಗೆ ಗೌರವ ಸಲ್ಲಿಸುತ್ತಿದೆ. ಆದರೆ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ನಿರ್ಮಿಸುವ ವಿಶ್ವವಿದ್ಯಾಲಯದ ಜವಾಬ್ದಾರಿಯುತ ಸ್ಥಾನ ಹೊಂದಿರುವ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಕುಲಪತಿಯಾದ ಸಿಎಂ ತ್ಯಾಗರಾಜರವರು ಡಿಸೇಂಬರ್ 6 ರಂದು ಬೆಳಿಗ್ಗೆ ಸುಮಾರು 10:00 ಘಂಟೆಯಿಂದ 11:00 ಯ ಬಾಬಾ ಸಾಹೇಬರ ಪರಿನಿರ್ವಾನ ದಿನ ಆಚರಣೆ ಕಾರ್ಯಕ್ರಮಕ್ಕೆ ಬಾರದೆ, ಅದೇ ದಿನ ಡಿಸೆಂಬರ್ 6 ನೇ ತಾರೀಕು ಸುಮಾರು 11:00 ಘಂಟೆಯಿಂದ ಸಂಜೆ 8:00 ಘಂಟೆಗಳ ವರಿಗೆ ದಿನ ಪೂರ್ತಿ ಸಿಂಡಿಕೇಟ್ ಮೀಟಿಂಗ್ ನಲ್ಲಿ ಭಾಗಿಯಾಗಿದ್ದರು ಎಂದು ತಡವಾಗಿ ತಿಳಿದು ಬಂದಿರುತ್ತದೆ. ಈ ವಿಷಯ ತಿಳಿದ ದಲಿತ ಮುಖಂಡರು ಕುಲಪತಿ C M ತ್ಯಾಗರಾಜ್ ರವರನ್ನು ಪ್ರಶ್ನಿಸಿದಾಗ ತನಗೆ ಆರೋಗ್ಯ ಸಮಸ್ಯೆ ಇತ್ತು ಎಂದು ಹೇಳುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.
ಡಾಕ್ಟರ್ ಬಿ ಆರ್ ಅಂಬೇಡ್ಕರ್ ಮಹಾ ಪರಿ ನಿರ್ವಾಣ ದಿನ ಆಚರಣೆಯಲ್ಲಿ ಪಾಲ್ಗೊಂಡು ತಮ್ಮ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಮಾದರಿಯಾಗಬೇಕಿದ್ದ ಕುಲಪತಿಗಳು ಆಚರಣೆಯಲ್ಲಿ ಪಾಲ್ಗೊಳ್ಳದೆ ಸಂವಿಧಾನ ಶಿಲ್ಪಿಗೆ ಅವಮಾಣಿಸಿ ಇದೀಗ ಪೇಚಿಗೆ ಸಿಲುಕಿದ್ದಾರೆ.
ಆದ್ದರಿಂದ ಸರಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಈ ಕೂಡಲೇ ಎಚ್ಚೆತ್ತುಕೊಂಡು ಬಾಬಾ ಸಾಹೇಬರಿಗೆ ಅವಮಾನಿಸಿದ ಕುಲಪತಿಗಳ ಮೇಲೆ ಸೂಕ್ತ ಕಾನೂನಿನ ಕ್ರಮ ಜರುಗಿಸಬೇಕೆಂದು ಸಮಸ್ತ ಬಾಬಾ ಸಾಹೇಬರ ಅನುಯಾಯಿಗಳ, ದಲಿತ ಮುಖಂಡರ ಒತ್ತಾಯವಾಗಿದೆ.
ಜರ್ನಲಿಸ್ಟ್: ಚಂದ್ರು ತಳವಾರ