ರಾಯಭಾಗ ksrtc; ಬಸ್ ಚಾಲಕ, ಮತ್ತು ನಿರ್ವಾಹಕನ ನಿರ್ಲಕ್ಷ ಧೋರಣೆಯಿಂದ ಚಲಿಸುತ್ತಿರುವ ಬಸ್ಸಿನಿಂದ ಕೆಳಗೆ ಬಿದ್ದ ವಿದ್ಯಾರ್ಥಿ ಪ್ರಾಣಾಪಾಯದಿಂದ ಪಾರು.!
ಬೆಳಗಾವಿ ಜಿಲ್ಲೆ ರಾಯಬಾಗ ಪಟ್ಟಣದಲ್ಲಿ ಸರಿಯಾದ ಸಮಯಕ್ಕೆ ಬಸ್ ಸೌಲಭ್ಯ ಇಲ್ಲದ ಕಾರಣ ಹಳ್ಳಿಗಳಿಂದ ಪಟ್ಟಣಕ್ಕೆ ಬಂದು ಓದುವ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಭಾರಿ ಸಮಸ್ಯೆಯಾಗಿದೆ. ದಿನೇ ದಿನೇ ಬಸ್ ಸಮಸ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ, ಸಮಯಕ್ಕೆ ಸರಿಯಾಗಿ ಬಸ್ ಬರುವುದಿಲ್ಲ ಅಂತ ತಿಳಿದು ಇಂದು ವಿದ್ಯಾರ್ಥಿಗಳು ಬಸ್ಸಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪ್ರಯಾಣಿಕರು ತುಂಬಿದ್ದ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು.
ಆದರೆ ksrtc ಬಸ್ ಚಾಲಕ ಮತ್ತು ನಿರ್ವಾಹಕನ ಬೇಜವಾಬ್ದಾರಿ ತನದಿಂದ ವಿದ್ಯಾರ್ಥಿ ಓರ್ವ ಬಸ್ಸಿನಿಂದ ಕೆಳಗೆ ಬಿದ್ದು ಕೈಗೆ ಪೆಟ್ಟಾಗಿ ಪ್ರಾಣಪಾಯದಿಂದ ಪಾರಾಗಿರುತ್ತಾನೆ.
ಇದಕ್ಕೆಲ್ಲ ಮುಖ್ಯ ಕಾರಣ ಚಾಲಕ ಮತ್ತು ನಿರ್ವಾಹಕನ ಬೇಜವಾಬ್ದಾರಿತನ, ಮತ್ತು ಡಿಪೋ ಮ್ಯಾನೇಜರ್ ದಿನಕ್ಕೊಂದು ಸುಳ್ಳು ಹೇಳಿ ಸರಿಯಾದ ಸಮಯಕ್ಕೆ ಬಸ್ ಬಿಡದೆ ಇರುವುದು ಮುಖ್ಯ ಕಾರಣ ಎಂದು ಡಿಪೋ ಮ್ಯಾನೇಜರ್ ವಿರುದ್ಧ ವಿದ್ಯಾರ್ಥಿಗಳು ಕೆಲ ಹೊತ್ತು ಪ್ರತಿಭಟಿಸಿ ಮ್ಯಾನೇಜರ್ ವಿರುದ್ಧ ದಿಕ್ಕಾರ ಕೂಗಿದರು.
ಅಷ್ಟೇ ಅಲ್ಲದೆ ವಿದ್ಯಾರ್ಥಿಗಳು ಸ್ಥಳಿಯ ಪೊಲೀಸರಿಗೂ ಕೂಡ ವಿಷಯ ತಿಳಿಸಿ ತಮ್ಮ ಅಳಲನ್ನು ತೋಡಿಕೊಂಡರು.
ತದನಂತರ ಯಾಕೆ ಪ್ರತಿಭಟಿಸುತ್ತಿದ್ದೀರಿ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ವಿದ್ಯಾರ್ಥಿಗಳು ಈಗಾಗಲೇ ಡಿಪೋ ಮ್ಯಾನೇಜರ್ ಗೆ ಸಾಕಷ್ಟು ಬಾರಿ ಸರಿಯಾದ ಸಮಯಕ್ಕೆ ಬಸ್ ಬಿಡಲು ಮನವಿ ಕೊಟ್ಟರು ಕೂಡ ಮ್ಯಾನೇಜರ್ ಕ್ಯಾರೆ ಅನ್ನುತ್ತಿಲ್ಲ ಎಂದು ವಿದ್ಯಾರ್ಥಿಗಳು, ಡಿಪೋ ಮ್ಯಾನೇಜರ್ ಗೆ ಹಿಡಿ ಶಾಪ ಹಾಕಿದ್ದಾರೆ.
ಆದ್ದರಿಂದ ಸರಕಾರ ಮತ್ತು ಮೇಲಾಧಿಕಾರಿಗಳು ಡಿಪೋ ಮ್ಯಾನೇಜರ್ ಮೇಲೆ, ಮತ್ತು ಬ್ರೇಕ್ ಹಾಕದೆ ಬಸ್ ಓಡಿಸುವ ಬಸ್ ಚಾಲಕ ಮತ್ತು ವಿದ್ಯಾರ್ಥಿಗಳನ್ನು ಬಾಗಿಲಿನಲ್ಲಿ ನಿಲ್ಲಿಸುವ ಬೇಜವಾಬ್ದಾರಿ ನಿರ್ವಾಹಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ವಿದ್ಯಾರ್ಥಿಗಳ ಒತ್ತಾಯವಾಗಿದೆ.
ಜರ್ನಲಿಸ್ಟ್:- ಚಂದ್ರು ತಳವಾರ