ಆಶಾ ಜ್ಯೋತಿ ಎಸ್.ಸಿ. ಎಸ್ ಟಿ.ಮಹಿಳಾ ಅಭಿವೃದ್ಧಿ ಕೇಂದ್ರ(ರಿ) ಬೆಳಗಾವಿ ಸಂಸ್ಥೆಗೆ ರಾಜ್ಯೋತ್ಸವ ಪ್ರಶಸ್ತಿ ಗರಿ..
ಬೆಳಗಾವಿ ೦೨- ಬೆಳಗಾವಿ ಆಶಾ ಜ್ಯೋತಿ ಎಸ್ಸಿ. ಎಸ್ಟಿ. ಮಹಿಳಾ ಅಭಿವೃದ್ಧಿ ಸಂಸ್ಥೆಗೆ ಈ ಬಾರಿಯ ಜಿಲ್ಲಾ ಮಟ್ಟದ ಸೇವಾ ಸಂಸ್ಥೆ ವಿಭಾಗದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ಸಾಮಾಜಿಕ ಕ್ಷೇತ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗಾಗಿ ೧೯೯೬-೯೭ ರಲ್ಲಿ ಸ್ಥಾಪಿಸಿದ, ಆಶಾಜ್ಯೋತಿ ಮಹಿಳಾ ಅಭಿವೃದ್ಧಿ ಸಂಸ್ಥೆಯು ಕಳೆದ ೨೮ ವರ್ಷಗಳಿಂದ ಮಹಿಳೆಯರಿಗೆ ಹಾಗೂ ಮಕ್ಕಳಿಗಾಗಿ ಶಿಕ್ಷಣ, ಆರೋಗ್ಯ ಮತ್ತು ವೃತ್ತಿಪರ ತರಬೇತಿ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದು, ಕೈಮಗ್ಗ ಹಾಗೂ ಜವಳಿ ಇಲಾಖೆ, ಬೆಳಗಾವಿಯ ಪ್ರಶಿಕ್ಷಣಾರ್ಥಿಗಳಿಗೆ ನವೀನ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ನೀಡುತ್ತಾ ಬಂದಿದೆ. ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಪಂಚಾಯತ್ ವತಿಯಿಂದ ವಿವಿಧ ವೃತ್ತಿಪರ ತರಬೇತಿ ಕಾರ್ಯಕ್ರಮವನ್ನು ಮಾಡುತ್ತಾ ಬಂದಿದೆ, ಸನ್ ೧೯೯೭-೯೮ ನೇ ಸಾಲಿನಲ್ಲಿ ವಿಶ್ವ ಯೋಜನೆ ಅಡಿಯಲ್ಲಿ ಉಲ್ಲನ್ ಶ್ವೇತ ಮತ್ತು ಟೈಲರಿಂಗ್ ತರಬೇತಿ ಕಾರ್ಯಕ್ರಮವನ್ನು ನಡೆಸಿದೆ. ಸನ್ ೧೯೯೮-೯೯ ನೇ ಸಾಲಿನಲ್ಲಿ ಟ್ರೆಸ್ಂ ಯೋಜನೆಯಡಿ ಉಲನ್ ಸ್ವೆಟರ್ ಮತ್ತು ಟೇಲರಿಂಗ್ ತರಬೇತಿ ಕಾರ್ಯಕ್ರಮವನ್ನು ನಡೆಸಿದೆ. ಮೊಟ್ಟಮೊದಲು ಬಾರಿ ೨೦೦೫-೦೬ನೇ ಸಾಲಿನಲ್ಲಿ ಬೆಳಗಾವಿ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ೫೦ ಕೈದಿಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಮೂರು ತಿಂಗಳು ಕಾಲ ಟೇಲರಿಂಗ ಮತ್ತು ಫ್ಯಾಷನ್ ಡಿಸೈನಿಂಗ್ ತರಬೇತಿಯನ್ನು ಸಂಸ್ಥೆಯಿಂದ ನೀಡಿಲಾಗಿದೆ.
ಚಿಕ್ಕೋಡಿ ತಾಲೂಕಿನಲ್ಲಿ ಮಹಿಳಾ ಸಾಂತ್ವನ ಸಹಾಯವಾಣಿ ಕೇಂದ್ರ ಹಾಗೂ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಸ್ಥೆಯಿಂದ ಆಶಾಜ್ಯೋತಿ ಬಾಲ ಕಾರ್ಮಿಕ ಶಾಲೆಯನ್ನು ನಡೆಸಲಾಗಿದೆ. ನಬಾರ್ಡ್ ಯೋಜನೆಯಡಿ ಬೆಳಗಾವಿ ಜಿಲ್ಲೆಯ ಬೆಳಗಾವಿ, ಬೈಲಹೊಂಗಲ ಮತ್ತು ಚಿಕ್ಕೋಡಿ ತಾಲೂಕುಗಳಲ್ಲಿ ಸ್ವಸಹಾಯ ಸಂಘಗಳ ರಚನೆ ಮತ್ತು ಬ್ಯಾಂಕ್ ಜೋಡಣೆ ಕಾರ್ಯಕ್ರಮವನ್ನು ನಡೆಸಲಾಗಿದೆ.
ಇನ್ನು ಸರ್ವಶಿಕ್ಷಣ ಅಭಿಯಾನದಡಿ ಬೆಳಗಾವಿ ಹಾಗೂ ಅಥಣಿ ತಾಲೂಕುಗಳಲ್ಲಿ ಆಶಾಕಿರಣ ವಸತಿ ಶಾಲೆಗಳನ್ನು ನಡೆಸಲಾಗಿದೆ. ಅದು ಅಲ್ಲದೆ ಬೆಳಗಾವಿಯಲ್ಲಿ ೫೦ ಗೃಹ ಆಧಾರಿಣ ಕೇಂದ್ರಗಳನ್ನು ಸಹ ನಡೆಸಿದ್ದೇವೆ. ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಮುರಾರ್ಜಿ ದೇಸಾಯಿ ವಸತಿ ಯುತಿ ಶಾಲೆಗಳಿಗೆ ಆಶಾಜ್ಯೋತಿ ಎಸ್.ಸಿ. ಎಸ್ ಟಿ. ಮಹಿಳಾ ಅಭಿವೃದ್ಧಿ ಸಂಸ್ಥೆಯಿಂದ ಸಮವಸ್ತ್ರಗಳು ಹಾಗೂ ಸ್ವೇಟರಗಳನ್ನು ವಿತರಿಸಲಾಗಿದೆ. ಪೌರಾಡಳಿತ ಇಲಾಖೆ ಸಹಯೋಗದಲ್ಲಿ ಸಿಂಡಿಕೇಟ್ ಲೀಡ್ ಬ್ಯಾಂಕಿನ ಆದೇಶನುಸಾರ ಬೆಳಗಾವಿ ನಗರದಲ್ಲಿ ೫೮ ವಾರ್ಡುಗಳಲ್ಲಿ ಬರುವ ರಾಷ್ಟ್ರೀಕೃತ ೭೦ ಬ್ಯಾಂಕಗಳ ಶೇ. ೧೦೦ ರಷ್ಟು ಫೈನಾನ್ಸಸಿಯಲ್ ಕನಕ್ಲೂಜನ್ ಸಮೀಕ್ಷೆ ಕಾರ್ಯಕ್ರಮವನ್ನು ನೆರವೇರಿಸಿದ್ದೇವೆ. ಸಂಸ್ಥೆಯು ಭಾರತೀಯ ಜೀವ ವಿಮಾ ನಿಗಮದಿಂದ ಮೈಕ್ರೂ ಇನ್ಸೂರೆನ್ಸ್ ಪಾಲಸಿಗಾಗಿ “ಜೀವನ ಮಧುರ” ಯೋಜನೆಯಿಂದ ಸ್ವಸಹಾಯ ಸಂಘಗಳಿಗೆ, ಕಡು ಬಡವ ಮತ್ತು ಹಿಂದುಳಿದ ವರ್ಗಗಳ ಕುಟುಂಬಗಳಿಗೆ ಆರ್ಥಿಕ ನೆರವು ನೀಡಿದೆ.
ಸಂಸ್ಥೆಯು ಸ್ವರ್ಣ ಜಯಂತಿ ಶಹರಿ ರೋಜಗಾರ್ ಯೋಜನೆಯಡಿ ಬೆಳಗಾವಿ ಜಿಲ್ಲೆಯಾದ್ಯಂತ ವಿವಿಧ ರೀತಿಯ ತರಬೇತಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಜರುಗಿಸಿದೆ.
ಸಂಸ್ಥೆಯು ಹೊರ ಜಿಲ್ಲೆಯಾದ ಗದಗ ಜಿಲ್ಲೆಯ ರೋಣ ತಾಲೂಕಿನಲ್ಲಿ ೩ ವರ್ಷಗಳ ಕಾಲ ಮೊಬೈಲ್ ಹೆಲ್ತ್ ಕ್ಲಿನಿಕ್ ಸಂಚಾರಿ ವಾಹನವನ್ನು ನಡೆಸಿದೆ. ಮಹಿಳಾ ಮತ್ತು ಮಕ್ಕಳ ಸಬಲೀಕರಣಕ್ಕಾಗಿ ವಿವಿಧ ಮಹಿಳಾ ತರಬೇತಿಗಳಾದ ಲಂಬಾಣಿ ವೇಷಗಳ ತಯಾರಿಕೆ, ಹೊಲಿಗೆ ಹಾಗು ಜರಿ ಎಂಬ್ರಾಯ್ಡರಿ, ಜ್ಯೂಟ್ ಬ್ಯಾಗ ತಯಾರಿಕೆ, ಫ್ಯಾಷನ್ ಡಿಸೈನಿಂಗ್ ಹಾಗೂ ಕಂಪ್ಯೂಟರ್ ತರಬೇತಿಗಳನ್ನು ನೀಡಿ, ಮಹಿಳಾ ಸಬಲೀಕರಣಕ್ಕೆ ನೆರವಾಗಿದೆ.
ಇನ್ನು ಮಹಿಳಾ ಮತ್ತು ಮಕ್ಕಳ ವಿಷಯಗಳ ಜಾಗೃತಿ ಹಾಗೂ ತಿಳುವಳಿಕೆ ಮೂಡಿಸುವ ನಿಟ್ಟಿನಲ್ಲಿ ಶಿಕ್ಷಣ, ಆರೋಗ್ಯ ತಿಳುವಳಿಕೆ ಕಾರ್ಯಕ್ರಮ, ಮಹಿಳೆಯರ ಮೇಲೆ ನಡೆಯತ್ತಿರುವ ದೌರ್ಜನ್ಯ, ವರದಕ್ಷಿಣೆ, ಅತ್ಯಾಚಾರ ತಡೆಗಟ್ಟುವಿಕೆಯ ಬಗ್ಗೆ ಹಲುವಾರು ಗ್ರಾಮಗಳಲ್ಲಿ ಜಾಥಾ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಆರೋಗ್ಯ ಕ್ಷೇತ್ರದಲ್ಲಿ ಏಡ್ಸ್, ಪಲ್ಸ್ ಪೋಲಿಯೋ, ಬಾಲ್ಯ ವಿವಾಹ ಪದ್ದತಿ, ಭ್ರೂಣ ಹತ್ಯೆಗಳು, ಪೌಷ್ಠಿಕ ಆಹಾರ ಮತ್ತು ಸ್ವಚ್ಛತೆ ಬಗ್ಗೆಯು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಸಾಕ್ಷರತಾ, ಬಾಲ ಕಾರ್ಮಿಕ ನಿರ್ಮೂಲನೆ , ಹಾಗೂ ಕಾರ್ಮಿಕ ಮಹಿಳೆಯರಿಗೆ ವಿವಿಧ ಉತ್ಪಾದನಾ ತರಬೇತಿ ನೀಡುವ ದೇವರೊಂದಿಗೆ ಪೌರ ಕಾರ್ಮಿಕ ಪದ್ದತಿ, ಕೃಷಿಕರಿಗೆ ಸಾವಯವ ಕೃಷಿ ಪದ್ದತಿ, ಅಸ್ತ್ರ ಒಲೆ ಸ್ಥಾಪಿಸುವಲ್ಲಿ ತಿಳುವಳಿಕೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
೨೮ ವರ್ಷಗಳ ತನ್ನ ಸಾರ್ಥಕ ಸೇವೆಯಲ್ಲಿ ಬೃಹದ್ದಾಕಾರವಾಗಿ ಬೆಳೆದಿದ್ದು ಲಕ್ಷಾಂತರ ಮಹಿಳೆಯರು ಸಂಸ್ಥೆಯ ಪಾಲುದಾರರಾಗಿ ಸಂಸ್ಥೆಯ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. ಇದರೊಟ್ಟಿಗೆ ನಿರಾಶ್ರಿತ ಮಕ್ಕಳು, ಮಹಿಳೆಯರು ಕಡು ಬಡವರು ಹಾಗೂ ವಯೋವೃದ್ಧರಿಗೆ ಉಚಿತವಾಗಿ ಆಶ್ರಯ ನೀಡಿ, ಇವರುಗಳ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಯೋಜನೆಯನ್ನು ರೂಪಿಸಲಾಗಿದೆ.
ಇವೆಲ್ಲದರೊಂದಿಗೆ ಬೆಳಗಾವಿ ಮಹಾನಗರದಲ್ಲಿ ಪ್ರಪ್ರಥಮವಾಗಿ ಆಶಾಕಿರಣ ಬುದ್ದಿಮಾಂದ್ಯ ಮಕ್ಕಳ ವಸತಿಯುತ ವಿಶೇಷ ಶಾಲೆಯನ್ನು ತೆರೆದು, ಅವರ ಸರ್ವಾಂಗಿನ ಅಭಿವೃದ್ಧಿಗಾಗಿ ನುರಿತ ಅನುಭವಿಕ ಸಿಬ್ಬಂದಿಯೊಂದಿಗೆ ಸಕಲ ಸೌಲಭ್ಯಗಳನ್ನು ಒಳಗೊಂಡ ಸುಸಜ್ಜಿತ ಸ್ವಂತ ಕಟ್ಟಡದಲ್ಲಿ ನಡೆಸುತ್ತಿರುವದು ಹೆಮ್ಮೆಯ ವಿಷಯವಾಗಿದೆ.
ಇದರ ಸಂಸ್ಥಾಪಕ ಅಧ್ಯಕ್ಷರು ಹಾಗೂ ಮೂರು ಬಾರಿ ನಗರ ಸೇವಕರಾಗಿ ಪ್ರಾಮಾಣಿಕ ಸೇವೇಗೈದ ನಿಕಟಪೂರ್ವ ನಗರ ಸೇವಕರಾದ ಶ್ರೀಮತಿ ಜಯಶ್ರೀ ಮಾಳಗಿ ಅವರು ಪರಿಶ್ರಮ ಹಾಗೂ ವಿಕಲಚೇತನರ ಹಾಗೂ ಮಹಿಳೆಯರ ಬಗ್ಗೆ ಇರುವ ಕಳಕಳಿ ವಿಶಾಲವಾದದ್ದು. ಇವರು ಅನನ್ಯ ಸೇವೆಗೆ ಈಗಾಗಲೇ ಹಲುವಾರು ತಾಲೂಕಾ ಮಟ್ಟದ ಜಿಲ್ಲಾ ಮಟ್ಟದ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ಸಂಸ್ಥೆ ಪಡೆದುಕೊಂಡಿದೆ. ಮಹಿಳೆಯರ ಸಬಲೀಕರಣಕ್ಕಾಗಿ ಶ್ರಮಿಸಿದ ಶ್ರೀಮತಿ ಜಯಶ್ರೀ ಮಾಳಗಿ ಅವರ ಪ್ರಾಮಾಣಿಕ ಸೇವೆಗೆ ಸಂಸ್ಥೆಗೆ ರಾಜ್ಯ ಮಟ್ಟದ “ಕಿತ್ತೂರ ರಾಣಿ ಚೆನ್ನಮ್ಮ ಪ್ರಶಸ್ತಿ” ಪಡೆದುಕೊಂಡಿದೆ.
ಇಂತಹ ಪ್ರಾಮಾಣಿಕ ಸೇವೆಯನ್ನು ಪರಿಗಣಿಸಿ, ಸಂಸ್ಥೆಗೆ ೨೦೨೪ ನೇ ಸಾಲಿನ ೬೯ ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕೊಡಮಾಡುವ “ಕನ್ನಡ ರಾಜ್ಯೋತ್ಸವ ಪ್ರಶಸ್ತಿ” ಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕರ್ನಾಟಕ ಸರ್ಕಾರ ಲೋಕೋಪಯೋಗಿ ಸಚಿವರಾದ ಮಾನ್ಯ ಶ್ರೀ ಸತೀಶ್ ಜಾರಕಿಹೊಳಿ ಸರ್, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ನಗರ ಪೊಲೀಸ್ ಆಯುಕ್ತರು ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಿದ ಸಮಾರಂಭದಲ್ಲಿ ನೀಡಿ ಗೌರವಿಸಿದರು. ಸಂಸ್ಥೆ ಪ್ರಶಸ್ತಿ ಗೌರವಕ್ಕೆ ಪಾತ್ರರಾಗುವಲ್ಲಿ ಶ್ರಮಿಸಿದ ಸಂಸ್ಥಾಪಕ ಅಧ್ಯಕ್ಷರು ಹಾಗೂ ಕಾರ್ಯಾಧ್ಯಕ್ಷರಾದ ಜಯಶ್ರೀ ಮಾಳಗಿ ಅವರನ್ನು ಅಧ್ಯಕ್ಷರಾದ ಅಶೋಕಕುಮಾರ ಪಿ. ಮಾಳಗಿ, ಉಪಾಧ್ಯಕ್ಷರಾದ ಹರ್ಷಿತಾ ಮಾಳಗಿ, ನಿರ್ದೇಶಕರಾದ ಅನೀಲಕುಮಾರ ಪಿ. ಮಾಳಗಿ, ಸುರೇಖಾ ಎ. ಮಾಳಗಿ, ಜ್ಯೋತಿಲಕ್ಷ್ಮೀ ಎಸ್. ಪೂಜಾರ, ಶ್ರೀಧರ ಎಸ್. ಪೂಜಾರ ಹಾಗೂ ಆಡಳಿತ ಮಂಡಳಿ ಸಲ್ಲಾಗಾರ ಸದಸ್ಯರಾದ ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯ ವಿಶ್ರಾಂತ ಉಪ ನಿರ್ದೇಶಕರಾದ ಆರ್. ಬಿ. ಬನಶಂಕರಿ, ಶಿಕ್ಷಕರಾದ ಸುವರ್ಣ, ಶಿವಾನಂದ, ಪ್ರಕಾಶ್ ಹಾಗೂ Counsellor : ಪಲ್ಲವಿ peeraji
ಸಮಾಜ ಸೇವಾ ಕಾರ್ಯಕರ್ತರು
ಸಹ್ಯಾದ್ರಿ holloli
Shridevi ಗಡೆದ
ಸಮಸ್ತ ಸಿಬ್ಬಂದಿವರ್ಗವರು ಅಭಿನಂದಿಸಿದ್ದಾರೆ.
ಜರ್ನಲಿಸ್ಟ್: ಚಂದ್ರು ತಳವಾರ