ರಾಯಬಾಗ ಧ್ವಜಾರೋಹಣ ಮಾಡದೆ ರಾಷ್ಟ್ರ ಗೌರವಕ್ಕೆ ಅ ಗೌರವ ತೋರಿದ ಅಂಗನವಾಡಿ ಕಾರ್ಯಕರ್ತೆ
ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಮಂಟೂರ ಗ್ರಾಮದ ಬಡಿಗೇರ ಓಣಿಯ ಅಂಗನವಾಡಿ ಕೇಂದ್ರದಲ್ಲಿ ಸುಸ್ಸರ್ಜಿತವಾದ ಅಂಗನವಾಡಿ ಕಟ್ಟಡವಿದ್ದು ಕಟ್ಟಡದ ಮುಂಭಾಗದಲ್ಲಿ 15ನೇ ಹಣಕಾಸಿನ ಯೋಜನೆಯಡಿಯಲ್ಲಿ ಎರಡು ವರ್ಷಗಳ ಹಿಂದೆಯೇ ಧ್ವಜಾರೋಹಣ ಮಾಡುವುದಕ್ಕಾಗಿ ಜೆಂಡಾ ಕಟ್ಟಿಯನ್ನು ಕೂಡ ಕಟ್ಟಿಸಲಾಗಿದೆ. ಆದರೆ ಅಲ್ಲಿನ ಅಂಗನವಾಡಿ ಮಕ್ಕಳ ದುರ್ದೈವವೇನೋ ಗೊತ್ತಿಲ್ಲ. ಅಲ್ಲಿನ ಅಂಗನವಾಡಿ ಕಾರ್ಯಕರ್ತೆಯಾದ ಲಕ್ಷ್ಮಿ ಶಿವಾನಂದ ಪಾಟೀಲ ಧ್ವಜಾರೋಹನ ಮಾಡದೆ ಸರಕಾರದ ಆದೇಶವನ್ನು ಉಲ್ಲಂಘಿಸಿರುತ್ತಾರೆ.
ಅಷ್ಟೇ ಅಲ್ಲದೆ ದೇಶಕ್ಕೆ ಅಪಮಾನ ಮಾಡಿರುತ್ತಾರೆ.
ಈಗಾಗಲೇ ಇವರ ಪತಿ ಗ್ರಾಮ ಪಂಚಾಯತಿ ಸದಸ್ಯರು ಹಾಗು ಬಸವೇಶ್ವರ ಪಿಕೆಪಿಎಸ್ ಸಂಸ್ಥೆಯ ಅಧ್ಯಕ್ಷರು ಆಗಿರುತ್ತಾರೆ. ಗ್ರಾಮದಲ್ಲಿ ಮಾದರಿಯಾಗಬೇಕಿದ್ದ ಅಂಗನವಾಡಿ ಕಾರ್ಯಕರ್ತೆ ಧ್ವಜಾರೋಹಣ ಮಾಡದೆ ರಾಜ್ಯ ರಾಷ್ಟ್ರ ಗೌರವಕ್ಕೆ ಅಗೌರವ ತೋರಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ.
ಆದಕಾರಣ ಸರಕಾರ ಮತ್ತು ಮೇಲಾಧಿಕಾರಿಗಳು ಯಾವುದೇ ಮುಲಾಜಿಲ್ಲದೆ ಇಂತಹ ನೌಕರಸ್ಥರನ್ನು ಕೆಲಸದಿಂದ ಕಿತ್ತೆಸೆಯಬೇಕೆಂಬುದು ಸ್ಥಳೀಯ ಪ್ರಜ್ಞಾವಂತರ ಅಭಿಪ್ರಾಯವಾಗಿದೆ.


