ರಾಯಬಾಗ: ಸರಾಯಿ ಕುಡಿದ ನಶೆಯಲ್ಲಿ ವಾಹನ ಚಲಾಯಿಸಿ ಅಪಘಾತ ಪಡಿಸಿ ಭಾರಿ ಗಾಯ ಪಡಿಸಿದ ಆರೋಪಿತನ ಬಂಧನ
-ಇದು ಜಿಲ್ಲೆಯಲ್ಲಿ ಪ್ರಥಮ ಪ್ರಕರಣ
ಕುಡಿದು ವಾಹನ ಸವಾರ ಮಾಡುವರಿಗಿದು ಉದಾಹರಣೆ-
ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಹಾರೂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ದಿನಾಂಕ: 20.01.2026 ರಂದು ಬೆಳಗ್ಗೆ 8-15 ಗಂಟೆಯ ಸಮಯದಲ್ಲಿ ಆರೋಪಿ ರಾಜೇಂದ್ರ ಅಪ್ಪಾಸಾಬ ದನದಮನಿ ವಯಾ: 38 ವರ್ಷ ಜಾತಿ ಹಿಂದೂ ಬೇಡರ ಉದ್ಯೋಗ: ಡ್ರೈವರ್ ಸಾ; ಬಡಚಿ ತಾ: ಅಥಣಿ ಜಿ: ಬೆಳಗಾವಿ ಈತನಿಗೆ ಸರಾಯಿ ಕುಡಿದ ವಾಹನ ಚಲಾವಣೆ ಮಾಡಿದರೆ ಅಪಘಾತಾಗಿ ಭಾರಿ ಗಾಯಗಳು ಆಗುತ್ತವೆ.
ಅಂತಾ ಗೊತ್ತಿದ್ದರೂ ಕೂಡಾ ಈತನು ಸರಾಯಿ ಕುಡಿದ ನಶೆಯಲ್ಲಿ ತನ್ನ ಬುಲೇರೋ ಪಿಕ್ ಆಫ್ ಗೂಡ್ಸ್ ವಾಹವನವನ್ನು ದುಡುಕಿನಿಂದಾ, ನಿಷ್ಠಾಳಜಿತನದಿಂದಾ, ಮಾನವ ಜೀವಕ್ಕೆ ಅಪಾಯವಾಗುವ, ರೀತಿಯಲ್ಲಿ ಹಾರೂಗೇರಿ ಪಟ್ಟಣ ಹದ್ದಿಯ ಸಂಗೋಳ್ಳಿ ರಾಯಣ್ಣ ಸರ್ಕಲ್ ಅಥಣಿ-ಗೋಕಾಕ ರಸ್ತೆ ಮೇಲೆ ಹಿಡಕಲ್ ಕಡೆಯಿಂದಾ ನಡೆಸಿಕೊಂಡು ಬಂದು ಅಲ್ಲಿ ರಾಯಬಾಗ ಕಡೆಗೆ ಹೋಗಲು ಟಿವಿಎಸ್ ಜ್ಯೂಪಿಟರ್ ಸ್ಕೂಟರ್ ಮೇಲೆ ನಿಂತಿದ್ದ ಎಲ್.ಎಲ್.ಬಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಗಳಾದ ಶ್ರೀದೇವಿ ಗಂಡ ಜೋತಿಬಾ ಖಟಾವಕರ ಸಾ: ರಬಕವಿ ಜಿ: ಬಾಗಲಕೋಟ ಮತ್ತು ಪೂನಂ ಸಿದ್ದಲಿಂಗಪ್ಪಾ ಕಾಂಬಳೆ ಸಾ: ಶೇಗುಣಶಿ ಇವರಿಗೆ ಅಪಘಾತ ಪಡಿಸಿ ಭಾರಿಗಾಯ ಪಡಿಸಿರುತ್ತಾನೆ.
ಇನ್ನು ಇದರಿಂದ ಸದರಿ ಆರೋಪಿತನ ವಿರುದ್ದ ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ: 21/2026 ಕಲಂ 110, 281, 125(ಬಿ) ಬಿ.ಎನ್.ಎಸ್-2023 ನೇದ್ದರಡಿಯಲ್ಲಿ ಕೇಸು ದಾಖಲಾಗಿದ್ದು ಸದರಿ ಆರೋಪಿತನಿಗೆ ಮೇಲ್ಕಂಡ ಪ್ರಕರಣದಲ್ಲಿ ದಸ್ತಗೀರ ಮಾಡಿ ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು ಇರುತ್ತದೆ.
ಸೂಚನೆ:- ಭಾರತೀಯ ನ್ಯಾಯ ಸಂಹಿತೆ 2023 ಕಲಂ 110 ನೇದ್ದರಡಿಯಲ್ಲಿ ಯಾವುದೇ ವ್ಯಕ್ತಿಯು ಕುಡಿದು ವಾಹನ ಚಲಾಯಿಸಿ ಗಾಯಪಡಿಸಿದರೆ (ಅಪರಾಧಿಕ ನರಹತ್ಯೆ ಮಾಡಲು ಪ್ರಯತ್ನ) 7 ವರ್ಷದವರೆಗೆ ಕಾರಾಗೃಹ ಶಿಕ್ಷೆ ವಿಧಿಸಬಹುದಾಗಿದೆ.
ಎಂದು ಪೋಲಿಸ್ ಪ್ರಕಟಣೆಯಲ್ಲಿ ತಿಳಿಸುತ್ತಾರೆ.


