Raibag PWD: ಮರು ಢಾಂಬರಿಕರಣಕ್ಕೆ ನೋಟಿಸ್ ನೀಡಿದ, ರಿಸ್ಪಾನ್ಸ ನೀಡದ ಗುತ್ತಿಗೆದಾರ, ಹದಗೆಟ್ಟು ಹೋದ ರಸ್ತೆ
ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ PWD ಇಲಾಖೆಯ ದುರಂತ ಕಥೆ ಇದು. ಬೂದ್ಯಾಳ ಕ್ರಾಸ್ ದಿಂದ ದೇವನ ಕಟ್ಟಿ ಗ್ರಾಮದ ವರೆಗಿನ ರಸ್ತೆ ಡಾಂಬರಿ ಹಾಕಿದ ಐದಾರು ತಿಂಗಳಲ್ಲಿ ಅಲ್ಲಲ್ಲಿ ಬಿರುಕು ಬಿಟ್ಟು ಹರಕಲು ಮುರಕಾದ ಹಂತಕ್ಕೆ ತಲುಪಿದ್ದ ಕಳಪೆ ಕಾಮಗಾರಿಯ ನಿಜ ಬಣ್ಣವನ್ನು ಟಿವಿ3 ಸುದ್ದಿ ವಾಹಿನಿಯು ಇದಿಗ ಬಟಾ ಬಯಲು ಮಾಡುತ್ತಿದೆ.
ಕೋಟ್ಯಂತರ ರೂ.ಖರ್ಚು ಮಾಡಿ ನಿರ್ಮಿಸಿದ ರಸ್ತೆ ಕೆಲವು ತಿಂಗಳಲ್ಲಿಯೆ ಬಿರುಕು ಬಿಡುವ ಹಂತದಲ್ಲಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕಾಮಗಾರಿ ನಡೆದು ಕೆಲವೆ ತಿಂಗಳಲ್ಲಿ ರಸ್ತೆಯ ನಿಜ ಸ್ಥಿತಿ ಬೆಳಕಿಗೆ ಬಂದಿದೆ. ಬೂದಿಹಾಳ ಕ್ರಾಸನಿಂದ ದೇವನ ಕಟ್ಟಿಗೆ ಹೋಗುವ ರಸ್ತೆ ಬಳಿಯಿಂದ ಅಲ್ಲಲ್ಲಿ ಡಾಂಬರಿ ತಳಮಟ್ಟದಿಂದ ಕಿತ್ತೋಗಿದೆ.
ಇದರಿಂದ ದ್ವಿ-ಚಕ್ರ ವಾಹನ ಸಂಚಾರದ ವೇಳೆ ಸ್ಕಿಡ್ ಆಗುವ ಆತಂಕ ಮೂಡಿದೆ. ಒಟ್ಟಿನಲ್ಲಿ ಕೋಟ್ಯಾಂತರ ರೂ. ವೆಚ್ಚ ಭರಿಸಿದ್ದು ಕಲ್ಲಿನ ಮೇಲೆ ನೀರು ಹೊಯ್ದಂತಹ ಕಥೆಯಂತಾಗಿದೆ. ಈಗ ಸ್ವತಃ ಇಂಜಿನಿಯರ್ ಗಳಿಗೆ, ಗುತ್ತಿಗೆದಾರ ಸಿಗುತ್ತಿಲ್ಲ. ನೋಟಿಸ್ ಕೊಟ್ಟರೂ ಕೂಡ ರೆಸ್ಪಾನ್ಸ್ ಮಾಡುತ್ತಿಲ್ಲ. ಎಂದು ಈಗಿನ ಇಂಜಿನಿಯರ್ ಸಿ ಎಸ್ ಕಾಂಬ್ಳೆ ಗೋಳು ತೋಡಿಕೊಂಡಿದ್ದಾರೆ. ಅಂದ್ರೆ ಏನರ್ಥ ಇದಕ್ಕೆಲ್ಲ ಹೊಣೆಗಾರರು ಯಾರು..? ಈ ಹಿಂದಿನ ಇಂಜಿನಿಯರ ಅನ್ವರ್ ಮುಲ್ಲಾ ಇನ್ನು ಒಂದು ಲೇಯರ್ ಕಾಮಗಾರಿ ಬಾಕಿ ಇದೆ ಎಂದು ಹಾರಿಕೆ ಉತ್ತರ ಕೊಡುತ್ತಿದ್ದಾರೆ.
ಎಂದು ಸಮಜಾಯಿಸಿ ಹಾರಿಕೆ ಉತ್ತರ ಕೊಡುತ್ತಿದ್ದು ಅವರಿಗೆ ಈ ಕಾಮಗಾರಿಯಲ್ಲಿ ಬಹುಪಾಲು ಸೇರಿರುವ ಸಾಧ್ಯತೆ ಇದೆ. ಸರಕಾರದ ದುಡ್ಡನ್ನ ಕೊಳ್ಳೆ ಹೊಡೆದವರು, ಮತ್ತೆ ಸರಕಾರಕ್ಕೆ ದುಡ್ಡು ಬರನಾ ಮಾಡಲೇಬೇಕು. ತೀರಾ ನಾದುರಸ್ತಿ ಯಲ್ಲಿದ್ದ ರಸ್ತೆ ದಶಕಗಳ ಬಳಿಕ ಮರು ಡಾಂಬರೀಕರಣಗೊಂಡಾಗ ರಸ್ತೆ ಫಲಾನುಭವಿಗಳು ಸಮಸ್ಯೆಗೆ ಮುಕ್ತಿ ಸಿಕ್ಕಿತು ಎಂದು ಭಾವಿಸಿದ್ದರು.
ಆದರೆ ಇದು ಕೆಲವೆ ತಿಂಗಳಲ್ಲಿ ಸುಳ್ಳಾಗಿದೆ. PWD ಇಂಜಿನಿಯರ್ ಗಳು ಮಾತ್ರ ಕೆಲಸ ಮುಗಿದಿಲ್ಲ, ಎಂದು ಉತ್ತರಿಸುತ್ತಾರೆ ಬಿಟ್ಟರೆ ಅವರಿಗೆ ಬೇರೇನು ಗೊತ್ತಿಲ್ಲ.
ಲೋಕಾಯುಕ್ತಕ್ಕೆ ದೂರು ಪ್ರತಿಭಟನೆಯ ಎಚ್ಚರಿಕೆ
ಕಳಪೆ ಕಾಮಗಾರಿ ಹಿನ್ನೆಲೆಯಲ್ಲಿ ಸಾರ್ವಜನಿಕರ ತೆರಿಗೆ ಹಣ ಪೋಲಾಗಿದ್ದು ಹೀಗಾಗಿ ಸಮಗ್ರ ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಲು ಸ್ಥಳೀಯ ಪತ್ರಕರ್ತ ಚಂದ್ರು ತಳವಾರ ನಿರ್ಧರಿಸಿದ್ದಾರೆ. ತತ್ಕ್ಷಣ ಕಾಮಗಾರಿ ನಿರ್ವಹಣೆಯ ಇಲಾಖೆಯ ಅಧಿಕಾರಿಗಳನ್ನು, ಗುತ್ತಿಗೆದಾರನನ್ನು ಕರೆಯಿಸಿ ರಸ್ತೆ ಕಾಮಗಾರಿ ಮರು ನಿರ್ಮಾಣಕ್ಕೆ ಕ್ರಮ ಕೈಗೊಳ್ಳ ಬೇಕು. ಇಲ್ಲದಿದ್ದರೆ ಸಂಬಂಧಿಸಿ ಇಲಾಖೆ ಮುಂಭಾಗ ಪ್ರತಿ ಭಟನೆ ನಡೆಸುವ ಎಚ್ಚರಿಕೆ ಕಾಮಗಾರಿಯಲ್ಲಿ ಕಮಿಷನ್ ವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾಗುತ್ತಿದೆ.
ಹಾಗೆಯೇ ಕಳಪೆ ಢಾಂಬರಿಕರಣ ಮಾಡಿ ಸರಕಾರದ ಹಣ ದುರುಪಯೋಗ ಪಡಿಸಿಕೊಂಡ ಗುತ್ತಿಗೆದಾರನನ್ನ ಕಪ್ಪು ಪಟ್ಟಿಗೆ ಸೇರಿಸಿ ಸಮಾಜದ ಸ್ವಾಸ್ಥ ಕಾಪಾಡುವಲ್ಲಿ ಮೇಲಾಧಿಕಾರಿಗಳು ಮುಂದಾಗಬೇಕಿದೆ ಇಂತಹ ಅನೇಕ ಢಾಂಬರಿಗಳು ತಾಲೂಕಿನಲ್ಲಿ ಹದಗೆಟ್ಟು ನಿಂತಿವೆ.
ಲೊಕೊಪಯೋಗಿ ಹಾಗೂ ಜಿಲ್ಲಾಉಸ್ತುವಾರಿ ಸಚಿವರಾದ ಶ್ರೀ ಸತೀಶ ಜಾರಕಿಹೋಳಿಯವರ ಜಿಲ್ಲೆಯಲ್ಲಿ ನಡೆಯುತ್ತಿರುವ ಕಳಪೆ ಮಟ್ಟದ ರಸ್ತೆ ಇದಾಗಿದೆ.
ಜರ್ನಲಿಸ್ಟ್: ಚಂದ್ರು ತಳವಾರ