ರಾಯಬಾಗ; ಕುಡಕ ಬಾಯಿ ಬೋಡಕ, ಅರೆ ಹುಚ್ಚನ ವಿರುದ್ಧ ಸಿಡಿದೆದ್ದ ದಲಿತರು ಉಗ್ರ ಪ್ರತಿಭಟನೆಗೆ ಕರೆ, ಇವುಂದೆನ್ ಬಾಯೊ ಬೊಂಬಾಯೊ.!
ಬೆಳಗಾವಿ: ಡಿಸಿಎಫ್ಓ ಶಿವಾನಂದ ನಾಯಿಕ ಒಬ್ಬ ಅಧಿಕಾರಿ ಆಗಿ ಸಾರ್ವಜನಿಕ ವಲಯದಲ್ಲಿ ಯಾರ ಜೊತೆ ಹೇಗೆ ಮಾತನಾಡಬೇಕು, ಹೇಗೆ ವರ್ತಿಸಬೇಕು ಎಂಬ ಕಾಮನ್ ಸೆನ್ಸ್ ಈತನಿಗೆ ಇಲ್ಲ. ರಾಯಭಾಗ ಕ್ಷೇತ್ರದ ಶಾಸಕ ದುರ್ಯೋಧನ ಐಹೊಳೆ ಅವರು ಕಟ್ಟಡದ ವಿಷಯವಾಗಿ ಫೋನ್ ಸಂಭಾಷಣೆಯಲ್ಲಿ ಅತಿ ನಮ್ರತೆಯಿಂದ ಮಾತನಾಡುತ್ತಿರುವಾಗಲೇ DCFO ಶಿವಾನಂದ ನಾಯಿಕ ಆಗಲೇ ತನ್ನ ಒಡಕು ಬಾಯಿಂದ, ತನ್ನ ಕೆಡಕಾದ ಮಾತುಗಳನ್ನು ಶುರು ಹಚ್ಚಿಕೊಂಡು ಬಿಡುತ್ತಾನೆ.
ಈ ಕುಡುಕ, ಅರೆ ಹುಚ್ಚ ಅಧಿಕಾರಿ, ಸತತ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾದ ಶಾಸಕರ ಜೊತೆ ಯಾವ ರೀತಿ ಮಾತನಾಡುತ್ತಿದ್ದೇನೆ ಎಂಬ ಪರಿಜ್ಞಾನವಿಲ್ಲದೆ, ದನ ಕಾಯುವರಂತೆ ಅವಾಜ್ ಹಾಕಿ ದಲಿತರ ಕೆಂಗಣ್ಣಿಗೆ ಗುರಿಯಾಗಿದ್ದಾನೆ.
ಇನ್ನು ಈತ ಕ್ಷೇತ್ರದ ಶಾಸಕನಿಗೆ ಈ ರೀತಿಯಾಗಿ ಅವಾಜ್ ಹಾಕುತ್ತಾನೆ ಎಂದರೆ, ಇನ್ನು ಸಾಮಾನ್ಯ ಜನರ ಗತಿ ಎನು..? ಇತ ಅಧಿಕಾರಿ ಅನ್ನೋಕೆ ನಾಚಿಕೆ ಆಗುತ್ತಿದೆ. ಎಂದು ದಲಿತ ಮುಖಂಡರು ರಾಯಬಾಗದಲ್ಲಿ ಆಕ್ರೋಶ ವ್ಯಕ್ತಪಡಿಸಿರುತ್ತಾರೆ. ಅದು ಏನೇ ಆಗಿರಲಿ, ಕಾಂಗ್ರೆಸ್ ಪಕ್ಷಕ್ಕೆ ಏನಾದ್ರೂ ಮಾನ ಮರ್ಯಾದೆ ಇದ್ರೆ ಇಂತಹ ನೀಚ ಮನಸ್ಥಿತಿ ಉಳ್ಳ ಅಧಿಕಾರಿಯನ್ನು ತಕ್ಷಣ ನೀರಿಲ್ಲದ ಜಾಗಕ್ಕೆ ಎತ್ತಂಗಡಿ ಮಾಡಬೇಕು, ಎಂದು ದೀನ ದಲಿತ ಸಮಾಜದ ಮುಖಂಡರು ಸರ್ಕಾರಕ್ಕೆ ಒತ್ತಾಯ ಪಡಿಸಿದರು.
ಇಲ್ಲ ಅಂದ್ರೆ ಮುಂದಿನ ದಿನಗಳಲ್ಲಿ ಈ ದಗಲಬಾಜಿ ಅಧಿಕಾರಿ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ಕೊಟ್ಟರು.
ಪಟ್ಟಣದಲ್ಲಿ ಅರಣ್ಯ ಇಲಾಖೆಯ ತಾಲೂಕ ಕಚೇರಿ ಕಟ್ಟಡಕ್ಕಾಗಿ 2022 23ನೇ ಸಾಲಿನಲ್ಲಿ ಅರಣ್ಯ ಇಲಾಖೆಯ ವತಿಯಿಂದ ಲಿಂಕ್ ಡಾಕ್ಯುಮೆಂಟ್ ಹೆಡ್ ದಿಂದ ಸುಮಾರು 26 ಲಕ್ಷ 30 ಸಾವಿರ ಮಂಜುರಾಗಿದ್ದು ಕಚೇರಿಯ ಕಟ್ಟಡವನ್ನು ಸ್ಥಗಿತಗೊಂಡಿದ್ದು ಅದಕ್ಕೆ ಅನುಮತಿ ನೀಡಬೇಕು ಎಂದು ರಾಯಭಾಗ ಶಾಸಕ ದುರ್ಯೋಧನ ಐಹೊಳೆ ಅವರು ವಿನಂತಿ ಮಾಡಿಕೊಂಡರು ಸಹ ಏಕವಚನದಲ್ಲಿ ಮಾತನಾಡಿದ ಗೋಕಾಕ ಅರಣ್ಯ ಇಲಾಖೆ ಅಧಿಕಾರಿಯ ವಿರುದ್ಧ ಇಂದು ರಾಯಬಾಗ ಪಟ್ಟಣದ ಪಿಡಬ್ಲ್ಯೂಡಿ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ನಾಳೆ ಅರಣ್ಯ ಇಲಾಖೆ ಅಧಿಕಾರಿ ಶಿವಾನಂದ್ ನಾಯಕವಾಡಿ ಅವರ ವಿರುದ್ಧ ದಿನಾಂಕ 10.1 2024 ರಂದು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆಯನ್ನು ಮಾಡಲಾಗುವುದೆಂದು ಪತ್ರಿಕಾ ಪ್ರಕಟ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಆದಿ ಜಾಂಬವ ಯುವಸೇನಾ ಘಟಕದ ಅಧ್ಯಕ್ಷ ರವಿ ಹಕ್ಯಾಗೋಳ ಕರ್ನಾಟಕ ಮಾದಿಗ ಮಹಾಸಭಾ ಬೆಳಗಾವಿ ಜಿಲ್ಲಾಧ್ಯಕ್ಷ ವಿನಯ ನಿಧಿ ಕಮಲ ಸಂಜು ಮೈಶಾಳೆ ರಾಜು ಮೈಶಾಳೆ, ಉದಯ ರೆಡ್ಡಿ ಸಚಿನ್ ದೇವಕುಳೆ ರಾಕೇಶ್ ಅವಳೇ ರವಿ ದೇವರಮನೆ ರಿತೇಶ್ ಅವಳೇ ಹನುಮಂತ ಭಜಂತ್ರಿ ಪ್ರೇಮ ಸಾನೆ ಸೇರದಂತೆ ಇನ್ನು ಅನೇಕ ದಲಿತ ಮುಖಂಡರು ಶಾಸಕ ದುರ್ಯೋಧನ ಅವರು ಅಭಿಮಾನಿಗಳು ಉಪಸ್ಥಿತರಿದ್ದರು.