ರಾಯಬಾಗ್ ಬ್ರೇಕಿಂಗ್
ಫೈನಾನ್ಸ್ ಕಿರುಕುಳ ತಾಳಲಾರದೆ ಅಳಗವಾಡಿ ರೈತ ವಿಷ ಸೇವಿಸಿ ಆತ್ಮಹತ್ಯೆ
ಆಯ್.ಡಿ.ಎಪ್.ಸಿ.ಬ್ಯಾಂಕ್ ಹಾಗೂ ಅಪ್ಯಾಕ್ ಫೈನಾನ್ಸ್ ರಬಕವಿ, ವೇಡಿಟರ್ ಫೈನಾನ್ಸ್ ಚಿಕ್ಕೋಡಿ ಇವರೆಲ್ಲರ ಕಿರುಕುಳ ತಾಳಲಾರದೆ ರೈತ ಆತ್ಮಹತ್ಯೆ
ರಾಯಬಾಗ ತಾಲೂಕಿನ ಅಳಗವಾಡಿ ಗ್ರಾಮದ ರೈತ
ಶಿವನಪ್ಪ ರಾವಜಪ್ಪ ಧರ್ಮಟ್ಟಿ
ಸಾ.ಅಳಗವಾಡಿ ವಯಸ್ಸು66 ಈತ ಯಾವುದೇ ವಿಷಕಾರಿ ಔಷಧ ಸೇವಿಸಿದ್ದು ಹೆಚ್ಚಿನ ಚಿಕಿತ್ಸೆಗಾಗಿ ರಾಯಬಾಗ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು
ಚಿಕಿತ್ಸೆ ಫಲಕಾರಿ ಆಗದೆ ಆಸ್ಪತ್ರೆಯಲ್ಲಿ ಕೊನೆ ಉಸಿರು ಎಳೆದಿದ್ದಾನೆ.
ಇವನ ಹೆಂಡತಿಯಾದ ಶಾರವ್ವ ಇವಳಿಗೆ ಕ್ಯಾನ್ಸರ್ ಆಗಿರುವ ಕಾರಣ ಸುಮಾರು ಮೂರು ವರ್ಷಗಳಿಂದ ಮೀರಜ್ ಮಹಾತ್ಮ ಗಾಂಧಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು ಚಿಕಿತ್ಸೆ ಪಡೆಯುತ್ತಿದ್ದು ಆಸ್ಪತ್ರೆಯ ಖರ್ಚಿಗಾಗಿ ಮಾಡಿರುವ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿರುಕೊಂಡಿರುವ ಅಳಗವಾಡಿ ಗ್ರಾಮದ ರೈತ.
ಈತನಿಗೆ ಹೆಂಡತಿ ಹಾಗೂ 2 ಗಂಡು ಮಕ್ಕಳು ಮತ್ತು 1ಹೆಣ್ಣು ಮಗಳು ಇವರನ್ನೆಲ್ಲ ಬಿಟ್ಟು ಅಗಲಿದ್ದಾನೆ.
ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.