ರಾಯಬಾಗ: ಅಪಹರಣವಾದ ಬಾಲಕಿ ನಿಸ್ಕಶ್ಮಿ ಮಡಿವಾಳ; ಸಹೋದರನಿಂದಲೇ ಕೆನಾಲಕ್ಕೆ ಎಸೆದಿರುವ ಶಂಕೆ..!
ಹೌದು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಸಮೀಪದ ನಿಪನಾಳ ಗ್ರಾಮದಲ್ಲಿ ಕಳೆದ ದಿನಗಳ ಹಿಂದಷ್ಟೇ, 19/05/ ರಂದು ಸಂಜೆ 7:30 ಕ್ಕೆ ನಿಸ್ಕಶ್ಮಿ ಹೊನ್ನಯ್ಯ್ ಮಡಿವಾಳ ಎಂಬ ಪುಟ್ಟ ಬಾಲಕಿ ಅಪಹರಣ ವಾಗಿದ್ದಾಳೆ. ಎಂಬ ದೂರು ದಾಖಲಾಗಿತ್ತು. ಐದು ವರ್ಷದ ಬಾಲಕಿ ನಿಸ್ಕಶ್ಮಿ ಹುಡುಕಾಟದಲ್ಲಿದ್ದ ಕುಟುಂಬ, ಗ್ರಾಮದಲ್ಲಿನ ಸಿಸಿ ಕ್ಯಾಮೆರಾ ಮೊರೆ ಹೋಗಿ ಪರಿಶೀಲನೆ ಮಾಡಿದ್ದಾರೆ.
ಬಾಲಕಿ ತನ್ನ ಸಹೋದರ ರಾಜುನ ಜೊತೆಗೆ ಹಿಂಬಾಲಿಸಿಕೊಂಡು ಹೋಗುವ ದೃಶ್ಯಾವಳಿ ಸಿಸಿ ಟಿವಿ ಯಲ್ಲಿ ಸೆರಿಯಾಗಿದೆ. ಈ ಕುರಿತು ರಾಯಬಾಗ ಪೊಲೀಸರು ತನಿಖೆ ನಡೆಸಿ ಕೀಚಕ ಸಹೋದರ ರಾಜುನನ್ನ ಬಂಧಿಸಿ ಕೃತ್ಯ ನಡೆಸಿದ ಸ್ಥಳಕ್ಕೆ ಪಂಚನಾಮ ಮಾಡಲು ಕರೆ ತಂದು ಪರಿಶೀಲನೆ ನಡೆಸಿದ್ದಾರೆ.
ಪೊಲೀಸರ್ ತನಿಖೆ ವೇಳೆಯಲ್ಲಿ ಬಾಲಕಿಯನ್ನು ಇಲ್ಲೇ ಕರೆದುಕೊಂಡು ಬಂದಿದ್ದೆ ಎಂದು ಘಟಪ್ರಬಾ ಎಡದಂಡೆ ಕಾಲುವೆ ಕೆನಾಲಗೆ ಕರೆದುಕೊಂಡು ಹೋಗಿದ್ದೆ, ಅಷ್ಟರಲ್ಲಿ ಅವಳೇ ಆಕಡೆ ಕಿನಾಲ್ ಜಿಗಿದಳು ಎಂದು ಸುಳ್ಳು ಕಥೆ ಕಟ್ಟಿ ಪೊಲೀಸರ ದಾರಿ ತಪ್ಪಿಸುತ್ತಿದ್ದಾನೆ. ಹೀಗಾಗಿ ಒಟ್ಟಿನಲ್ಲಿ ಕೃತ್ಯ ನಡೆದ ಬಗ್ಗೆ ಮಾಹಿತಿ ನೀಡಿದ ಸಹೋದರ ರಾಜುನನ್ನ ಹೆಚ್ಚಿನ ತನಿಖೆಗೆ ರಾಯಬಾಗ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಸಹೋದರ ರಾಜು (ಪಿ ಯು ಸಿ) ಓದುತಿದ್ದ. ಅಪಹರಣದ ಬಗ್ಗೆ ಹಾಗೆ ಕೊಲೆಯಾದ ಬಗ್ಗೆ ಪೊಲೀಸ್ ಮೂಲಗಳಿಂದ ಇನ್ನಷ್ಟು, ಮಾಹಿತಿ ತಿಳಿದು ಬರಬೇಕಿದೆ.
ಜರ್ನಲಿಸ್ಟ್:- ಚಂದ್ರು ತಳವಾರ