ರಾಯಬಾಗ: ಸೇತುವೆ ಕಾಮಗಾರಿ ಕ್ಯೂರಿಂಗಗೆ ಮೊಲ್ಯಾಸಿಸ್ ಉಪಯೊಗಿಸುತ್ತಿರುವ PWD ಇಲಾಖೆ…!
ಹೌದು ವೀಕ್ಷಕರೇ, ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಕಂಕಣವಾಡಿಗೆ ಹೋಗುವ ರಸ್ತೆಯ ಸೆತುವೆ ಕಾಮಗಾರಿ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ನಿರ್ಲಕ್ಷತನದಿಂದ, ಸೆತುವೆ ಕಾಮಗಾರಿಯು ಕಾರ್ಖಾನೆ ಮೊಲ್ಯಾಸಿಸ್ (ಮಳ್ಳಿ) ನಿರಿನಲ್ಲಿ ಮಿಂದೆದ್ದು ಹೋಗುತ್ತಿದೆ.
ಅಷ್ಟಕ್ಕು ಕಾರ್ಖಾನೆಯ ಕೆಟ್ಟು ಹೋದ (ಮಳ್ಳಿ) ಮೊಲ್ಯಾಸಿಸ್ ನಿರನ್ನು ಯಾಕೆ ಉಪಯೋಗಿಸುತ್ತಿದ್ದೀರಿ… ಇದು ಕಳಪೆ ಕಾಮಗಾರಿ ಎಂದು ಗುತ್ತಿಗೆದಾರನನ್ನು ಪ್ರಶ್ನಿಸಿದ್ದಕ್ಕೆ, ಗುತ್ತಿಗೆದಾರ ಯಾವ ರೀತಿ ಬಡ ಬಡಿಸಿದ್ದಾನೆ ನೀವೇ ನೋಡಿ..!
“ಗುತ್ತಿಗೆದಾರ ತಪ್ಪೊಪ್ಪಿಕೊಂಡ ವಿಡಿಯೋ ಆಧಾರಿತ ಮಾಹಿತಿಗಳು ಲಭ್ಯ ಇವೆ.”
ಸೆತುವೆ ಕಾಮಗಾರಿ ಮಾಡುವಾಗ ಒಳ್ಳೆ ನೀರನ್ನು ಉಪಯೋಗಿಸಬೇಕಿತ್ತು.
ಆದರೆ ಇಲ್ಲಿ ಕಾರ್ಖಾನೆಯ ಮೊಲ್ಯಾಸಿಸ್ ತ್ಯಾಜ್ಯ ಡ್ರೈನೇಜ್ ವಾಟರನ್ನು ಉಪಯೋಗಿಸುತ್ತಿರುವುದು ನಾಚಿಕೆಗೇಡಿನ ಸಂಗತಿ.
ಇದು ನಿಯಮ ಬಾಹಿರವಾದರೂ ಗುತ್ತಿಗೆದಾರರು ಸಮರ್ಥಿಸಿಕೊಳ್ಳುತ್ತಿದ್ದಾರೆ.
ಈ ಗುತ್ತಿಗೆದಾರ ಪಂಚಮಿಗೆ ಹೋಗಿದ್ದನಂತೆ, ಆಗ ಈತನ ಅನುಪಸ್ಥಿತಿಯಲ್ಲಿ ರೈತರು ಮಳ್ಳಿ ನಿರು ಹರಿಸಿದ್ದಾರೆ ಎಂದು ಸಮೀಪದ ರೈತರ ಮೇಲೆ ಗುತ್ತಿಗೆದಾರ ಆರೋಪ ಮಾಡುತ್ತಿದ್ದಾರೆ.
ಹಾಗಾದರೆ ಇಷ್ಟು ಇದುವರೆಗೆ ಯಾಕೆ ಮೊಲ್ಯಾಸಿಸನ್ನು ಉಪಯೋಗಿಸಿದ…?
ಮಳ್ಳಿ ಮಳ್ಳಿ ಮಂಚಕ್ಕೆ ಎಷ್ಟು ಕಾಲು ಎಂದರೆ, 6.3 ಎನ್ನುವ ಹಾಗೆ ಇಷ್ಟೊಂದು ಕಳಪೆ ಕಾಮಗಾರಿ ನಡೆದರು ಸಂಬಂಧಪಟ್ಟ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಮನೋವಡ್ಡರ ಮತ್ತು ಕಿರಿಯ ಎಂಜಿನಿಯರ್ ಕಂಡರೂ ಕಾಣದಂತೆ, ಹಾರಿಕೆ ಉತ್ತರವನ್ನು ನೀಡುತ್ತಾರೆ.
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅವರ ಗಮನಕ್ಕೆ ತಂದರು ಯಾವುದೇ ಪ್ರಯೋಜನವಿಲ್ಲ.
ಮಳೆ ನೀರು ಅಂತ ಸಮರ್ಥಿಸಿ ಗುತ್ತಿಗೆದಾರನಿಗೆ ಸಾತ್ ಕೊಡುವ ಕೆಲಸಕ್ಕೆ ಕೈ ಹಾಕಿದ್ದಾರೆ.
ಸಾರ್ವಜನಿಕರು ಸೇತುವೆ ಕಾಮಗಾರಿ ನಡೆದ ಸ್ಥಳದಲ್ಲಿ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸುಮಾರು ೧ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಡೆದ ಕಾಮಗಾರಿಯು ಕಾರ್ಖಾನೆಯ ಕೆಟ್ಟ ನೀರಿನಿಂದ ಪ್ರಾರಂಭದ ಹಂತದಲ್ಲಿ ಕಳಪೆ ಆಗುತ್ತಿರುವುದು ಕಂಡುಬಂದಿದೆ.
ಮಳ್ಳಿ ನಿರು ತೆಗೆಯುವವರೆಗೆ ಸೆತುವೆ ಕಾಮಗಾರಿಯನ್ನು ಕೂಡಲೇ ನಿಲ್ಲಿಸಬೇಕು.
ಮತ್ತು ಗುತ್ತಿಗೆದಾರನ ಬಿಲ್ ತಡೆಹಿಡಿದು ಆತನ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರ ಒತ್ತಾಯವಾಗಿದೆ.
ಜರ್ನಲಿಸ್ಟ್: ಚಂದ್ರು ತಳವಾರ