ಸುರಕ್ಷತೆ ಮರೆತು ರಾಜ್ಯ ಹೆದ್ದಾರಿ ರಸ್ತೆ ಸುಧಾರಣೆ ಕಾಮಗಾರಿ ಮಾಡುತ್ತಿರುವ ಲೋಕೋಪಯೋಗಿ ಅಧಿಕಾರಿಗಳು…!
ಹೆಚ್ಚಿದ ಅಪಘಾತ ಸಂಖ್ಯೆ. ಹೌದು ರಾಯಬಾಗ ತಾಲೂಕಿನ ಮಂಟೂರ ಕ್ರಾಸ್ ಸಮೀಪ ನಿಪ್ಪಾಣಿ ಮುಧೋಳ ರಾಜ್ಯ ಹೆದ್ದಾರಿ (SH 18) ರಲ್ಲಿ ರಸ್ತೆ ವೃತ್ತ ಸುಧಾರಣೆ ಕಾಮಗಾರಿಯಲ್ಲಿ ಗುತ್ತಿಗೆದಾರನೊಬ್ಬ ಸುರಕ್ಷತೆ ಫಲಕಗಳನ್ನ ಹಾಕದೆ ಪೇಚಿಗೆ ಸಿಲುಕಿದ್ದಾನೆ. ಇನ್ನು ರಸ್ತೆ ಸುರಕ್ಷತೆ ಕಾಮಗಾರಿ ಅಳವಡಿಸದೆ ಇರುವದರಿಂದ ಅನೇಕ ಬೈಕ್ ಸವಾರರು ಅಪಘಾತದಲ್ಲಿ ಗಂಭಿರ ಗಾಯ ಮಾಡಿಕೊಳ್ಳುವ ಘಟನೆ ಹೆಚ್ಚಾಗಿವೆ. ಹೀಗಾಗಿ ಇಂದು ನಸುಕಿನ ಜಾವ ಬೈಕ ಸವಾರರು ಅಪಘಾತಕ್ಕಿಡಾಗಿ ಓರ್ವನ ಸ್ಥಿತಿ ಚಿಂತಾಜನಕವಾಗಿದೆ. ಹಾಗೂ ಇನ್ನೊರ್ವ ಯುವಕನಿಗೆ ಕೈ ತೆಲೆಗೆ ಗಂಭಿರ ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂತಹ ಬೇಜವಾಬ್ದಾರಿ ಗುತ್ತಿಗೆದಾರ ಹಾಗೂ ಇಂಜಿನಿಯರಗಳ ಮೇಲೆ ಸ್ಥಳೀಯರು ಮಾಧ್ಯಮದ ಮುಂದೆ ಕಿಡಿಕಾರಿದ್ದಾರೆ. ಇನ್ನು ಇಂತಹ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಿ ಮೇಲಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡು ಜೀವ ಹಾನಿ ಕಡೆ ಗಮನ ಹರಿಸಿ ತಪ್ಪಿತಸ್ತ ಗುತ್ತಿಗೆದಾರನ ವಿರುದ್ದ ಕ್ರಮಕೈಗೊಳ್ಳಬೇಕಿದೆ.
ಇನ್ನು ಸ್ಥಳೀಯರು ರಸ್ತೆ ಸುರಕ್ಷತೆ ಬಗ್ಗೆ ಇಂಜಿನಿಯರ್ ಗೆ ಹಾಗೂ ಗುತ್ತಿಗೆದಾರನಿಗೆ ಚಿಮಾರಿ ಹಾಕಿದ್ದಾರೆ.
ಜರ್ನಲಿಸ್ಟ್: ಚಂದ್ರು ತಳವಾರ


