ಹುಬ್ಬಳ್ಳಿ: ದಕ್ಷ ಪೊಲೀಸ್ ಅಧಿಕಾರಿ ಮಹಮ್ಮದರಫೀಕ್ ತಹಸೀಲ್ದಾರ ಇವರಿಗೆ ರಾಷ್ಟ್ರಪತಿ ಸೇವಾ ಪದಕ
ಹೌದು ರಾಜ್ಯದಲ್ಲಿ 22 ಜನ ಪೊಲೀಸ್ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕಕ್ಕೆ ಭಾಜನರಾಗಿದ್ದಾರೆ. ಇನ್ನೂ ಹುಬ್ಬಳ್ಳಿ ಧಾರವಾಡ ನಗರದ ವಿದ್ಯಾಗಿರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮಹಮ್ಮದರಫೀಕ್ ತಹಸೀಲ್ದಾರ ಇವರಿಗೂ ಕೂಡ ಲಭಿಸಿದೆ.
ಗಣರಾಜ್ಯೋತ್ಸವದ ಅಂಗವಾಗಿ ನೀಡುವ ಈ ರಾಷ್ಟಪತಿ ಪದಕವನ್ನ ಅವರು ಇಲಾಖೆಯಲ್ಲಿ ಮಾಡುವ ಪರಿಶ್ರಮ ಕೆಲಸ ಸೇವೆಯನ್ನ ಪರಿಗಣಿಸಿ ಈ ಪ್ರಶಸ್ತಿ ಪದಕವನ್ನು ನೀಡುತ್ತಾರೆ. ಇನ್ನೂ ಬೆಳಗಾವಿ ಹುಬ್ಬಳ್ಳಿ ಧಾರವಾಡ ಇನ್ನೂ ಅನೇಕ ಪೊಲೀಸ್ ಠಾಣೆಗಳಲ್ಲಿ ದಕ್ಷ ಹಾಗೂ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿ, ಇಲಾಖೆಯಲ್ಲಿಸಿಬ್ಬಂದಿಗಳ ಜೊತೆ ಅಚ್ಚುಕಟ್ಟಾಗಿ ಹಾಗೂ ಸೌಜನ್ಯವಾಗಿ, ಸಾರ್ವಜನಿಕರ ಜೊತೆ ಬೆರೆತು ಸಮರ್ಪಕ ಸೇವೆ ಸಲ್ಲಿಸಿದ ಹಾಗೂ,ಅನೇಕ ದರೋಡೆ, ಕಳ್ಳರ ಗ್ಯಾಂಗ,ಕೊಲೆ,ಸುಲಿಗೆ, ಇನ್ನು ಅನೇಕ ಪ್ರಕರಣಗಳಲ್ಲಿ ಆರೋಪಿಗಳು ಶಿಕ್ಷೆಗೆ ಗುರಿಯಾಗಿದ್ದಾರೆ,ಅನೇಕ ಗುಂಡಾ ರೌಡಿಶೀಟರಗಳ ಬೆವರೀಳಿಸಿದ ಕೀರ್ತಿ ಈ ಇನ್ಸ್ಪೆಕ್ಟರ್ ರಫೀಕ ಅವರಿಗೆ ಸಲ್ಲುತ್ತದೆ.
ಇನ್ನೂ ಕಾನೂನು ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಹಗಲಿರುಳು ಕಠಿಣ ಕರ್ತವ್ಯ ನಿರ್ವಹಿಸಿ,ದೇಶದ ಎಲ್ಲಾ ಮೂಲೆಗಳಲ್ಲಿ ಹಗಲು ರಾತ್ರಿ ಎನ್ನದೆ ಆರೋಪಿಗಳ ಜಾಲ ಪತ್ತೇಗೆ ಸೇವೆ ಸಲ್ಲಿಸಿದ ಇನ್ಸ್ಪೆಕ್ಟರ್,ಪೊಲೀಸ್ ಇಲಾಖೆಯಲ್ಲಿ ರಾಜ್ಯಕ್ಕೆ ಮಾದರಿಯಾಗಿದ್ದಾರೆ.
ಇನ್ಸ್ಪೆಕ್ಟರ್ ತಹಸೀಲ್ದಾರ ಇವರ ಸೇವೆ ಗುರುತಿಸಿ ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕಕ್ಕೆ ಭಾಜನರಾಗಿದ್ದಾರೆ.ಈ ಪ್ರಶಸ್ತಿಗೆ ಕರ್ತವ್ಯ ನಿರ್ವಹಿಸಿದ ನಿಮಗೆ ಇಲಾಖೆಯ ಎಲ್ಲ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದಾರೆ.
ಜರ್ನಲಿಸ್ಟ್: ಚಂದ್ರು ತಳವಾರ್


