ರಾಯಬಾಗ: ಕೇರ್ಲೆಸ್ ಕಾರ್ಯನಿರ್ವಾಹಕ ಅಧಿಕಾರಿ.!
ಹೌದು, ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನಲ್ಲಿ ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವಿಠ್ಠಲ ಚಂದರಗಿ ಮಾಡುವ ಕೆಲಸಕ್ಕೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.
ಇಒ ಆಗಿ ಜನರ ಸೇವೆಯಲ್ಲಿ ಕಾರ್ಯನಿರ್ವಹಿಸಬೇಕಾದ ವಿಠ್ಠಲ ಚಂದರಗಿ
ತನ್ನ ಹಮ್ಮಿನ ಮಾತಿನಿಂದ ಸರ್ಕಾರಿ ಹುದ್ದೆ ಮರೆತು ರಾಜ್ಯದಲ್ಲಿ ಸರ್ಕಾರಿ ಇಲಾಖೆ ಹುದ್ದೆಯಲ್ಲಿ ತನ್ನದೇ ರಾಜ್ಯಭಾರ ಮಾಡಿಕೊಂಡು ಶತಮೊಂಡ್ತನದ ವರ್ತನೆ ಮಾಡುತ್ತಿದ್ದಾನೆ.
ಹಿಗಾಗಿ ಅಲ್ಲಿರುವ ಅನೇಕ ಕಾಮಗಾರಿಗಳು ಕೂಡಾ ನೆನೆಗುದಿಗೆ ಬಿದ್ದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ.
ಇವರು ಅಧಿಕಾರ ವಹಿಸಿಕೊಂಡ ದಿನದಿಂದಲೂ ಕೂಡ ಬೇಜವಾಬ್ದಾರಿ ತನದಿಂದ ಕಾರ್ಯನಿರ್ವಹಿಸುತ್ತಿರುವದು ಕಂಡುಬಂದಿದೆ. ಅ-19 ರಂದು ಮಂಟೂರ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ ದಳವಾಯಿ ಅಮಾನತು ಆಗಿರುತ್ತಾರೆ.
ಆದರೆ ಇದುವರೆಗೆ ಮಂಜುನಾಥ ದಳವಾಯಿ ಸ್ಥಾನಕ್ಕೆ ಅಧಿಕೃತವಾಗಿ ಯಾರನ್ನು ನೇಮಿಸಿರುವುದಿಲ್ಲ. ಮತ್ತು ರಿಲೀವ್ ಕೂಡ ಮಾಡದೆ ಅವರದ್ದೇ ತಂಬ ಮತ್ತು ಡೊಂಗಲ್ ಇದ್ದು ಇದುವರೆಗೆ ಡಿಲಿಟ್ ಆಗದೇ ಇರುವುದು ಬಾರಿ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.
ಅಷ್ಟೇ ಅಲ್ಲ ತಾಲೂಕಿನ ಕೆಲವು ಪಂಚಾಯಿತಿಗಳ ಮಾಹಿತಿಯನ್ನು ಪತ್ರಕರ್ತರು ಮತ್ತು ಸಮಾಜ ಸೇವಕರು, ತಾಲೂಕ ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೆ ತೆಗೆದುಕೊಂಡು ಹೋದರೆ ಕ್ಯಾರೆ ಎನ್ನುವುದಿಲ್ಲ.
ಮಾತೆತ್ತಿದರೆ ಸಾಕು, ಚೀಪ್ ಆಫೀಸರ್ ಕಡೆ ಹೋಗಿ ಎಂದು ಉಡಾಫೆ ಉತ್ತರ ಕೊಡುತ್ತಾರೆ. ಮತ್ತು ಪಂಚಾಯಿತಿಯಲ್ಲಿ ನಡೆಯುವ ಕಾನೂನು ಬಾಹಿರ ಚಟುವಟಿಕೆಗಳನ್ನು ತಿಳಿಸಿದರೆ ಡೋಂಟ್ ಕೇರ್ ಎನ್ನುತ್ತಾರೆ.
ಇವೆಲ್ಲ ಮಾಹಿತಿಗಳನ್ನು ಜಿಲ್ಲಾ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ತಿಳಿಸಿದಾಗ ಮಾಹಿತಿ ಸರಿ ಇದೆ ಎಂದು ಮನಗಂಡು ಅವರ ಮೇಲೆ ಕ್ರಮ ಕೈಗೊಳ್ಳುವದಾಗಿ ಭರವಸೆ ನೀಡಿರುತ್ತಾರೆ.
ತಾಲೂಕ ಕಾರ್ಯನಿರ್ವಾಹಕ ಅಧಿಕಾರಿಗಳು ಅಧಿಕಾರವಹಿಸಿಕೊಂಡ ಕೆಲವೇ ದಿನಗಳಲ್ಲಿ ಬೇಜವಾಬ್ದಾರಿ ಅಧಿಕಾರಿ ಎಂದು ಕರೆಸಿಕೊಳ್ಳುತ್ತಿರುವುದು ಸಾರ್ವಜನಿಕ ವಲಯದಲ್ಲಿ ಬಾರಿ ಚರ್ಚೆಗೆ ಗ್ರಾಸವಾಗಿದೆ.
ಸರಕಾರ ಮತ್ತು ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಎಚ್ಚೆತ್ತು ಇಂತಹ ಬೇ ಜವಾಬ್ದಾರಿ ಅಧಿಕಾರಿಯ ಮೇಲೆ ಶಿಸ್ತು ಕ್ರಮ ಜರುಗಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಒಟ್ಟಿನಲ್ಲಿ ಶೇಕ ಮಹಮ್ಮದನ ಲೆಕ್ಕಾಚಾರದಲ್ಲಿ ಈ ಇಒ ಕೆಲಸ ಮಾಡುತ್ತಿದ್ದಾನೆ.
ಜೋಡಟ್ಟಿಯ ಕೆಲವು ನಕಲಿ ಬಿಲ್ ಕುರಿತು ತಿಳಿಸಲು ಹೋದಾಗ ಶಿವಾನಂದ ಪಾಟೀಲ ಎಂಬುವರಿಗೆ ಕೇಸ್ ಹಾಕಿಸ್ತೀನಿ ಎಂದು ಅವಾಜ್ ಹಾಕಿರುತ್ತಾನೆ.
ಪತ್ರಕರ್ತರಿಗೆ ಫೋನಿನಲ್ಲಿ ಮಾತ್ರ ಸಬ್ಯಾ ತರಹ ಕೂಲಾಗಿ ಮಾತನಾಡುತ್ತಾನೆ. ಆಫೀಸ್ ಗೆ ಹೋಗಿ ಮಾತನಾಡಿಸಿದರೆ ಅವಾಜ್ ಹಾಕುತ್ತಾನೆ ಆಸಾಮಿ.!
ಒಂದೆ ಇಲಾಖೆಯಲ್ಲಿ ಜವಾಬ್ದಾರಿಯುತವಾಗಿ ಕೆಲಸ ಮಾಡದ ಅಧಿಕಾರಿಗೆ ಮತ್ತೊಂದು ಮಗದೊಂದು ತಾಲೂಕ ಪಂಚಾಯಿತಿ ಚಾರ್ಜ್ ಕೊಟ್ಟಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.
ಆದ್ದರಿಂದ ಸರ್ಕಾರ ಈ ಕೂಡಲೇ ಎಚ್ಚೆತ್ತು, ತಪ್ಪಿತಸ್ಥ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಬೇಕೆಂದು ಸಾರ್ವಜನಿಕರ ಒತ್ತಾಯವಾಗಿದೆ.
ಹೆಚ್ಚಿನ ಮಾಹಿತಿಯೊಂದಿಗೆ ಮುಂದಿನ ಸಂಚಿಕೆಯಲ್ಲಿ ಶೀಘ್ರದಲ್ಲಿ ನಿಮ್ಮ ಮುಂದೆ ಬರುತ್ತೇವೆ,.
ವರದಿ: ಚಂದ್ರು ತಳವಾರ


