ಹುಕ್ಕೇರಿ: ಪೋಲಿಸರಿಂದ ಪಥಸಂಚಲನ. ಮೇ 10ರಂದು ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಿಗದಿಯಾಗಿದೆ. ವ್ಯವಸ್ಥಿತ ಹಾಗೂ ಶಾಂತಿಯುತ ಮತದಾನಕ್ಕಾಗಿ ಚುನಾವಣಾ ಆಯೋಗವು ಬಿಗಿ ಭದ್ರತೆಗಾಗಿ ಪ್ಯಾರಾ ಮಿಲಿಟರಿ ತುಕಡಿಗಳು, ಪೊಲೀಸರು, ಹೋಂ ಗಾರ್ಡ್ಗಳನ್ನು ಬಳಸಿಕೊಳ್ಳಲು ಸಿದ್ದತೆ ಮಾಡಿಕೊಂಡಿದೆ. ಚುನಾವಣೆಯ ಭದ್ರತೆಗಾಗಿ ಬಂದಿರುವ ಮಿಲಿಟರಿಯ ಪಡಯು ಹುಕ್ಕೇರಿ ಪಠ್ಠಣದಲ್ಲಿ ರೂಟ್ ಮಾರ್ಚ ಮಾಡಿದರು.ಪೋಲಿಸರಿಗೆ ಹಾಗೂ ಮಿಲಿಟರಿ ಪಡೆಯವರಿಗೆ ಗೌರವ ಪೂರ್ವಕವಾಗಿ ಕೈ ಮುಗಿದು ಸ್ವಾಗತಿಸಿದರು.
ಚುನಾವಣೆಗೆ ರಾಜಕೀಯ ಪಕ್ಷಗಳು ತಯಾರಿಯಲ್ಲಿ ತೊಡಗಿದ್ದರೆ. ಪ್ರಜಾತಂತ್ರದ ಹಬ್ಬವನ್ನು ಸುಗಮ, ಶಾಂತಿಯುತವಾಗಿ ನಡೆಸಲು ಚುನಾವಣಾ ಆಯೋಗವು ಸಹ ಸಿದ್ದತೆ ಮಾಡಿಕೊಂಡಿದೆ.
ಚುನಾವಣೆಯಲ್ಲಿ ಭದ್ರತೆಗಾಗಿ ಪ್ಯಾರಾ ಮಿಲಿಟರಿ ತುಕಡಿಗಳು ಅಣೆಯಾಗಿವೆ.
ತಲಾ 90 ಜನರನ್ನು ಹೊಂದಿರುವ ಪ್ಯಾರಾ ಮಿಲಿಟರಿ ಪಡೆಗಳು ಈಗಾಗಲೇ ಹುಕ್ಕೇರಿ ಮತಕ್ಷೇತ್ರಕ್ಕೆ ಬಂದಿವೆ. ಇನ್ನೂ ಪಠ್ಠಣದಲ್ಲಿ ಪಥ ಸಂಚಲನ ಮಾಡಿದರು. ನೂರಾರು ಭದ್ರತಾ ಸಿಬ್ಬಂದಿ ಸಶಸ್ತ್ರಗಳೊಂದಿಗೆ ಪ್ರಮುಖ ಬೀದಿಯಲ್ಲಿ ಸಂಚರಿಸಿದರು. ಹುಕ್ಕೇರಿ ಬಸ್ ನಿಲ್ದಾಣದ ಮುಂದಿನಿಂದ ಆರಂಭವಾದ ಪಥ ಸಂಚಲನವು ನಗರದ ಪ್ರಮುಖ ಓನಿಗಳಲ್ಲಿ ಪೇಠೆ ಒನಿ ಬಸ್ತವಾಡ ಗಲ್ಲಿ ಗುರುಶಾಂತೇಶ್ವರ ಮಠ ಹಳ್ಳದಕೇರಿ ಕುಂಬಾರ ಒನಿ ನಾಯಿಕ ಗಲ್ಲಿ ಹಳೆ ಬಸ್ ನಿಲ್ದಾಣ.ಹೀಗೆ ಪಥ ಸಂಚಲನ ಮಾಡಿ ಸಾರ್ವಜನಿಕರಲ್ಲಿ ಜಾಗ್ರತಿ ಮೂಡಿಸಿದರು.
ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿಗಳಾದ ಎಸ್ ಬಿ ಇಂಗಳೆ ಹಾಗೂ ಚುನಾವಣಾಧಿಕರಿಗಳು ಹಾಗೂ ಹುಕ್ಕೇರಿ ಪೋಲಿಸ್ ಠಾಣೆಯ ಇನ್ಸ್ಪೆಕ್ಟರ್ ಮಹಮ್ಮದ ರಫಿಕ ತಹಸೀಲ್ದಾರ ಉಪಸ್ಥಿತರಿದ್ದರು. ಪಥಸಂಚಲನ ಮುಗಿದ ನಂತರ ಮಿಲಿಟರಿ ಪಡೆಯ ಕಮಾಂಡಂಟ ಅವರಿಗೆ ಹುಕ್ಕೇರಿ ಸಿಪಿಐ ತಹಸೀಲ್ದಾರವರು ಹೂಗೂಚ್ಚ ನೀಡಿದರು.ವರದಿ:ಚಂದ್ರು ತಳವಾರ


