ಗಾಝಾ, ನ.3: ಇಸ್ರೇಲಿನ ದಾಳಿಯಲ್ಲಿ ಪೆಲೆಸ್ತೀನ್ ಟಿವಿಯ ಪತ್ರಕರ್ತ ಮುಹಮ್ಮದ್ ಅಬು ಹತಾಬ್ ಮತ್ತು ಕುಟುಂಬ ಕೊಲ್ಲಲ್ಪಟ್ಟಿರುವ ಘಟನೆಯನ್ನು ಫೆಲೆಸ್ತೀನಿನ ಸುದ್ದಿ ಏಜೆನ್ಸಿ ವಫಾ ಖಂಡಿಸಿದೆ. ಅಬೂ ಹತಾಬ್ ಮತ್ತು ಕುಟುಂಬದ ಕೊಲೆ ಉದ್ದೇಶಪೂರ್ವಕವಾಗಿ ನಡೆದಿದೆ ಎಂದು ಫೆಲೆಸ್ತೀನ್ ಅಥಾರಿಟಿಯ ಟಿವಿ ಚ್ಯಾನಲ್ ಫೆಲೆಸ್ತೀನಿ ಟಿವಿ ಹೇಳಿದೆ.
ಖಾನ್ ಯೂನಿಸ್ನ ತನ್ನ ಅಪಾರ್ಟ್ಮೆಂಟಿಗೆ ಅಬೂ ಹತಾಬ್ ಬಂದು ತಲುಪಿದ ನಂತರ ವಾಯು ದಾಳಿ ಮಾಡಿದ್ದು ದಾಳಿಯಲ್ಲಿ ಅಬೂ ಹತಾಬ್ ಮತ್ತು ಕುಟುಂಬ ಸದಸ್ಯರು ಕೊಲ್ಲಲ್ಪಟ್ಟಿದ್ದರು.
ಫೆಲೆಸ್ತೀನ್ ಜನತೆಯ ಸಂಕಷ್ಟಗಳನ್ನು ತಿಳಿಸುವುದರಿಂದ ಅತಿಕ್ರಮಣ ಶಕ್ತಿಗಳ ಅಪರಾಧ ಕೃತ್ಯ ಹೊರತರುವುದನ್ನು ತಡೆಯಲು ಇಸ್ರೇಲ್ ದಾಳಿ ಹೀಗೆ ಪತ್ರಕರ್ತನ ಮನೆಗೆ ದಾಳಿ ಮಾಡಿದ್ದೆಂದು ಫೆಲಸ್ತೀನ್ ಟಿವಿ ಬೆಟ್ಟು ಮಾಡಿತು.
ಇದು ಪ್ಯಾಲೆಸ್ತೀನ್ ಪತ್ರಕರ್ತರನ್ನು ಭಯಭೀತಗೊಳಿಸುವ ರಕ್ತಸಿಕ್ತ ಸಂದೇಶವಾಗಿದೆ. ಪತ್ರಕರ್ತರ ವಿರುದ್ಧ ಆಕ್ರಮಣಕಾರಿ ಆಡಳಿತವು ಎಷ್ಟೇ ಕ್ರೂರವಾಗಿರಲಿ, ನಾವು ಕರ್ತವ್ಯದಿಂದ ಹಿಂದೆ ಸರಿಯುವುದಿಲ್ಲ ಎಂದು ಪ್ಯಾಲೆಸ್ತೀನ್ ಟಿವಿ ಹೇಳಿದೆ.
ಇಸ್ರೇಲ್ ದಾಳಿಯಲ್ಲಿ ಅಬು ಹತಾಬ್ ಸೇರಿದಂತೆ 11 ಜನರು ಸಾವನ್ನಪ್ಪಿದ್ದಾರೆ. ಅಕ್ಟೋಬರ್ 7 ರಂದು ಇಸ್ರೇಲಿ ಆಕ್ರಮಣವು ಪ್ರಾರಂಭವಾದಾಗಿನಿಂದ 27 ಪ್ಯಾಲೆಸ್ತೀನ್ ಪತ್ರಕರ್ತರು ಮತ್ತು ಮಾಧ್ಯಮ ಕಾರ್ಯಕರ್ತರು ಕೊಲ್ಲಲ್ಪಟ್ಟಿದ್ದಾರೆ ಎಂದು ಪ್ಯಾಲೇಸ್ಟಿನಿಯನ್ ಜರ್ನಲಿಸ್ಟ್ ಯೂನಿಯನ್ ವರದಿ ಮಾಡಿದೆ.


