ಕಷ್ಟಪಟ್ಟು ದುಡಿದ ಹಣದಲ್ಲಿ ಹುಟ್ಟೂರಿಗೆ ಅಂಗನವಾಡಿ ಕಟ್ಟಲು ಜಾಗ ನೀಡಿರುವ ಪದ್ಮಾ
ಬೆಂಗಳೂರ:- ಓದಿದ್ದು 5ನೇ ಕ್ಲಾಸ್ ಏನಾದ್ರೂ ಸಾಧಿಸಬೇಕಂತ 18 ನೇ ವಯಸ್ಸಿನಲ್ಲಿ ಮನೆ ಬಿಟ್ಟು ಧಾರವಾಡದಲ್ಲಿ ಬಂದು ಎರಡು ವರ್ಷ ಫ್ಯಾಶನ್ ಡಿಸೈನ್ ಕೊರ್ಸ್ ಮಾಡಿ ನಂತರ ಬೆಂಗಳೂರಿಗೆ ಹೊರಟ ಪದ್ಮಾ ಬೆಂಗಳೂರಿನಲ್ಲಿ ಯಾರದು ಸಹಾಯವಿಲ್ಲದೆ 17 ವರ್ಷಗಳ ಕಾಲ ದುಡಿದು ತನ್ನ ದುಡಿಮೆಯಲ್ಲಿ ಸ್ವಂತ ಊರಿನ ಮಕ್ಕಳ ಉಜ್ವಲ ಭವಿಷ್ಯಕಾಗ್ಗಿ ಅಂಗನವಾಡಿ ಕಟ್ಟಲು ತನ್ನ ದುಡಿಮೆಯಲ್ಲಿ ಹಣವನ್ನು ತೆಗೆದುಕೊಂಡು ಹೋಗಿ ಅಂಗನವಾಡಿ ಕಟ್ಟಲು ಜಾಗವನ್ನು ನಿಡಿದ್ದಾಳೆ. ಈ ಪದ್ಮ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ವರ್ಚಗಲ್ ಗ್ರಾಮದಲ್ಲಿ ಜನಿಸಿದಳು.
ತನ್ನೂರಿಗೆ ಏನಾದರೂ ಕೊಡುಗೆ ಕೊಡಬೇಕೆಂದು ಮನಸಿನಲ್ಲಿ ಇಟ್ಟುಕೊಂಡು ಹಗಲು ರಾತ್ರಿ ಎನ್ನದೆ ದುಡಿದು ಅಂಗನವಾಡಿ ಕಟ್ಟಲು ಜಾಗವನ್ನು ಉಚಿತವಾಗಿ ನೀಡಿರುವ ಪದ್ಮಾ.
ತಾನು ಕಷ್ಟಪಟ್ಟು ಇನ್ನೊಬ್ಬರಿಗೆ ಒಳ್ಳೆಯದು ಮಾಡಕ್ಕೆ ಹೊರಟಿರುವ ಪದ್ಮನಾ ಕಥೆ ಕೇಳಿದರೆ ನಿಮ್ಮ ಕಣ್ಣಲ್ಲಿ ನೀರು ಬರುತ್ತದೆ. ಬೆಂಗಳೂರು ಎಂಬ ದೊಡ್ಡ ನಗರದಲ್ಲಿ ತಾನು ಕೆಲಸ ಮಾಡಿಕೊಂಡು ತನ್ನ ಜೀವನ ನಡೆಸುವುದು ಕಷ್ಟ. ಅಂತದ್ರಲ್ಲಿ ಸಮಾಜ ಸೇವೆ ಮಾಡಬೇಕಂತ ಹೊರಟಿರುವ ಈ ಪದ್ಮಾ ಯಾವ ರಾಜಕಾರಣಿಗಳಿಗೆ ಕಡಿಮೆ ಇಲ್ಲ. ಈ ಕಥೆ ಕೇಳ್ತಾ ಇದ್ರೆ ಒಂದು ಗಾದೆ ಮಾತು ನೆನಪಿಗೆ ಬರುತ್ತೆ “ಕೈ ಕೆಸರಾದರೆ ಬಾಯಿ ಮೊಸರು” ಎಂಬ ಗಾದೆ ಮಾತಿನಂತೆ ನಾವು ದುಡಿದರೆ ನಮಗೆ ಸಾಕಷ್ಟು ದುಡ್ಡು ಸಿಗುತ್ತೆ ಮತ್ತು ಜೀವನ ನಡೆಯುತ್ತೆ ಇನ್ನೊಬ್ಬರಿಗೂ ಕೂಡ ಹೆಲ್ಪ್ ಮಾಡಬಹುದು ಅನ್ನೋ ಮನಸ್ಥಿತಿ ಇಟ್ಟುಕೊಂಡು ಹೊರಟಿರುವ ಈ ಪದ್ಮಾ ನಿಜಕ್ಕೂ ಜನರ ಮೆಚ್ಚುಗೆ ಪಾತ್ರರಾಗಿ ಬಾಗಲಕೋಟ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್ ವಿ ತಿಮ್ಮಾಪುರ್ ಪದ್ಮಾ ಕುಟುಂಬದವರನ್ನು ಕರೆಸಿ ಸನ್ಮಾನಿಸಿ ಗೌರವಿಸಿದರು.