ಶಿರಾಡಾನ ಗ್ರಾಮ ಪಂಚಾಯಿತಿ ಕಟ್ಟಡ ಮಾತ್ರ ಹೈಟೆಕ್,ಆದ್ರೆ ಸಾಮಾನ್ಯ ಕೂಲಿ ಕಾರ್ಮಿಕರ ಸಮಸ್ಯೆಗಳು ಓವರ್ ಟೆಕ್….!
ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆಂದೇ ಸರ್ಕಾರ ಗ್ರಾಮ ಮಟ್ಟದಲ್ಲಿ ಗ್ರಾಮ ಪಂಚಾಯಿತಿಗಳನ್ನ ನಿರ್ಮಾಣ ಮಾಡಿದೆ. ಆದರೆ
ಶಿರಡಾನ್ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಮಾಹಿತಿ ಅಥವಾ ಸಹಾಯ ಕೇಳಲು ಹೋದರೆ ಸದಾ ಬುಸುಗುಟ್ಟುವ ಈ ಬುಸ್ ಬುಸ್ಸ್ ನಾಗಪ್ಪ ಅಲಿಯಾಸ್
ಪಿಡಿಓ ವಿ. ನಾಗರಾಜ್ ತಾನು ಮಾತ್ರ ಕೆಲ ಪಂಚಾಯಿತಿ ಸದಸ್ಯರನ್ನು ತನ್ನ ಕಪಿಮುಷ್ಠಿಯಲ್ಲಿ ಇಟ್ಟುಕೊಂಡು ಗೂಳಿ ತರ ವರ್ತನೆ ಮಾಡ್ತಾನೆ..
ಅಬ್ಬಬ್ಬಬ್ಬಾ ಈ ನಾಲಾಯಕ್ ಮಾಡಿರೋ ಹಗರಣಗಳು
ಒಂದಾ ಎರಡಾ…??
ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿ ನಕಲಿ ಜಾಬ್ ಕಾರ್ಡ್ ಸೃಷ್ಟಿಸಿ ನಿಜವಾದ ಫಲಾನುಭವಿಗಳಿಗೆ ಮೋಸ ಮಾಡಿ ಭೋಗಸ್ ಬಿಲ್ ತೆಗೆದು ಸರ್ಕಾರಕ್ಕೂ ಮತ್ತು ಸಾರ್ವಜನಿಕರಿಗೂ ಮೋಸ ಮಾಡ್ತಿದ್ದಾನೆ…. ಈ ಪಾಪಿ..
ಮಹಿಳೆಯರ ಬೈಟ್ ವಿಡಿಯೋ ಪ್ಲೇ….
ನೂತನ ಕಟ್ಟಡ ಉದ್ಘಾಟನೆಯಾಗುತ್ತಿದ್ದಂತೆ ಭ್ರಷ್ಟಾಚಾರವನ್ನ ಹೊರತಂದು ಆಕ್ರೋಶ ವ್ಯಕ್ತಪಡಿಸಿದ ಶಿರಡಾಣ ಗ್ರಾಮಸ್ಥರು..!
ಹಗರಣಗಳ ಗೂಡಾದ ಶಿರಡಾಣ ಗ್ರಾಮ ಪಂಚಾಯತಿಗೆ ಹೈಟೆಕ್ ಕಟ್ಟಡ..!
ಈ ಹೈಟೆಕ್ ಗ್ರಾಮ ಪಂಚಾಯತಿಯಲ್ಲಿ ಕುಳಿತು ಹಗರಣ ಮಾಡುತ್ತಿರುವ
ಭ್ರಷ್ಟ ಪಿಡಿಒ ವಿ. ನಾಗರಾಜ.
ಇದು,
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಶಿರಡಾನ್ ಗ್ರಾಮ ಪಂಚಾಯಿತಿ.
ಇದು ಇತ್ತೀಚೆಗೆ ನೂತನ ಕಟ್ಟಡವಾಗಿ ನಿರ್ಮಾಣಗೊಂಡಿದೆ.
ಜೊತೆಗೆ ಸಮಸ್ಯೆಗಳ ಸುರಿ ಮಾಲೆಯನ್ನು ಧರಿಸಿಕೊಂಡಂತಿದೆ.
ಈ ಹಿಂದೆ ಶಿರಾಡಾನ್ ಗ್ರಾಮ ಪಂಚಾಯತಿಯ ಮೇಲೆ ಹರಿದ ರಾಷ್ಟ್ರಧ್ವಜ ಹಾರಿಸಿ ಶಿರಡಾನ್ ಪಿಡಿಒ ವಿ ನಾಗರಾಜ್ ಬಾರಿ ಸುದ್ದಿಯಾಗಿದ್ದು ಮಾತ್ರವಲ್ಲದೆ
ಹಿಂದೊಮ್ಮೆ ಗಣಪತಿ ಮರೆಪ್ಪ ಜಾಡರ್ ಎಂಬ ಪತ್ರಕರ್ತನಿಗೆ ತನ್ನ ಹೊಲಸು ಬಾಯಿಯಿಂದ ರಾಸ್ಕಲ್ ಎಂದು ಬೈದು ಜನರಿಂದ ಛೀಮಾರಿ ಹಾಕಿಸಿಕೊಂಡಿದ್ದ ಈ ಬುದ್ಧಿಗೇಡಿ ನಾಗರಾಜ್…
ಇದರ ಕುರಿತು ಮೇಲಾ ಧಿಕಾರಿಗಳಿಗೆ ದೂರು ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ ಬಿಡಿ…ಮಾತ್ರವಲ್ಲದೇ
ಒಂದು ಕಟ್ಟಡ ಎರಡೆರಡು ಬಿಲ್,
ದನಗಳ ಷಡ್ ನಿರ್ಮಾಣ ಮಾಡದೇ ಬಿಲ್ ತೆಗೆಯುವದು, ಅಷ್ಟೆ ಅಲ್ಲ ನಿರುದ್ಯೋಗಿ ಕೂಲಿ ಕಾರ್ಮಿಕರ ಹೆಸರಲ್ಲಿ ನಕಲಿ ಬಿಲ್ ತೆಗೆದಿರುವುದು ಸ್ಥಳೀಯ ಕೂಲಿ ಕಾರ್ಮಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಪಂಚಾಯತಿ ಪಿಡಿಒ ನಾಗರಾಜ್ ಮತ್ತು ಕೆಲ ಸದಸ್ಯರು ಬೋಗಸ್ ಬಿಲ್ ತೆಗೆಯುವ ಉದ್ದೇಶದಿಂದ ಕೂಲಿ ಕಾರ್ಮಿಕರನ್ನು ಆಟಕ್ಕೆ ಉಂಟು ಲೆಕ್ಕಕ್ಕೆ ಇಲ್ಲ ಎಂಬಂತೆ 40 ಜನರನ್ನು ಮಾತ್ರ ಕೆಲಸಕ್ಕೆ ಉಪಯೋಗಿಸಿಕೊಳ್ಳುತ್ತಾರೆ.
ಮತ್ತು ಕೆಲಸಕ್ಕೆ ಬಾರದೇ ಇರುವವರ ಹೆಸರಿನಲ್ಲಿ ಬೋಗಸ್ ಬಿಲ್ ತೆಗಿಯುತ್ತಾರೆ.
ಯಾರಾದರೂ ಪ್ರಶ್ನೆ ಮಾಡಿದರೆ ಅಂತವರನ್ನ ಟಾರ್ಗೆಟ್ ಮಾಡಿ ಕೆಲಸದಿಂದ ಕೈ ಬಿಡಲು ಸೂಚಿಸುತ್ತಾನಂತೆ ಈ ಬುದ್ದಿಗೇಡಿ PDO ವಿ. ನಾಗರಾಜ….
ಇಂತಹ ದುರಹಂಕಾರಿ ಅಧಿಕಾರಿಗೆ ನಮ್ಮಂತ ಮಹಿಳಾ ಕೂಲಿ ಕಾರ್ಮಿಕರ ಶಾಪ ತಟ್ಟುತ್ತದೆ ಎಂದು ಮಹಿಳೆಯರು ಹಿಡಿ ಶಾಪ ಹಾಕಿದ್ದಾರೆ.
ನರೇಗಾ ಕಾಮಗಾರಿ ಯೋಜನೆ ಅಡಿಯಲ್ಲಿ ಕೆಲಸ ಕೊಡಬೇಕಾದರೆ ಗ್ರಾಮಸ್ಥರು ವಿಶೇಷವಾಗಿ ಮಹಿಳೆಯರು ಈ ದುಷ್ಟ ಪಿಡಿಒ ಮತ್ತು ಕೆಲವು ಕೆಲಸಕ್ಕೆ ಬಾರದ ಪಂಚಾಯಿತಿ ಸದಸ್ಯರ ಕಾಲು ಹಿಡಿದು ಬೇಡಿಕೊಳ್ಳಬೇಕಂತೆ
ಅಲ್ಲಪ್ಪ ಬುಸ್ ಬುಸ್ ನಾಗಪ್ಪ ನಿಮ್ಮ ಕಾಲು ಹಿಡಿದು ಬೇಡಿಕೊಳ್ಳೋಕೆ ಪಂಚಾಯಿತಿ ಕೆಲಸ ಎನು ನಿಮ್ಮಪ್ಪನ ಮನೆ ಕೆಲಸನಾ..? ಅಥವಾ ಪಂಚಾಯಿತಿ ಸದಸ್ಯರಪ್ಪನ ಮನೆ ಕೆಲಸಾನಾ..?? ನಾಚಿಕೆಯಾಗಲ್ವಾ ನಿನ್ ಜನ್ಮಕ್ಕೆ…
ಕೆಲಸ ಕೊಡದೆ ಬೋಗಸ್ ಬಿಲ್ ತೆಗಿತೀರಾ…ಮತ್ತು ದುಡಿಯೋರಿಗೆ ಕೆಲಸ ಕೊಡಲ್ಲ ನಕಲಿ ಜಾಬ್ ಕಾರ್ಡ್ ಸೃಷ್ಟಿ ಮಾಡಿ ಬಂದ ಹಣವನ್ನೆಲ್ಲ ನುಂಗಿ ಬಿಡ್ತೀರ…
ಇಷ್ಟೆಲ್ಲಾ ಅಕ್ರಮಗಳು ಶಿರಡಾನ್ ಪಂಚಾಯಿತಿಯಲ್ಲಿ ನಡೆದರೂ, ಪಿಡಿಓ ನ ಮೇಲೆ ಅನೇಕ ಕಂಪ್ಲೇಂಟ್ ಗಳು ಇದ್ದರೂ ಸಹ ಇದುವರೆಗೆ ಯಾವುದೇ ಕ್ರಮ ಆಗದೆ ಇರುವದು ಸಾರ್ವಜನಿಕರಲ್ಲಿ ಯಕ್ಷ ಪ್ರಶ್ನೆಯಾಗಿ ಕಾಡುತ್ತಿದೆ.
ಕ್ರಮ ಆಗೋವರೆಗೂ ನಾವು ಬಿಡೋ ಮಾತೇ ಇಲ್ಲ ಯಾಕೆಂದರೆ ನಾವು ಜನಪರ…!!!
ವರದಿ:-ಚಂದ್ರು ತಳವಾರ ಟಿವಿ3 ನ್ಯೂಸ್ ಕನ್ನಡ ಹುಕ್ಕೇರಿ


