ಘಟಪ್ರಭಾ: ಲೋಳಸೂರ ಗ್ರಾಮದ ನಾಯಿಕವಾಡಿ ದಾಬಾದಲ್ಲಿ ಅಕ್ರಮವಾಗಿ ಮಧ್ಯ (ಸಾರಾಯಿ) ಮಾರಾಟ..!
ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಲೋಳಸೂರು ಗ್ರಾಮದಲ್ಲಿ ಬೆನಚನಮರಡಿ ಅಜ್ಜನ ಸಹಕಾರದೊಂದಿಗೆ ಗಣಪತಿ ಕದಂಬ ಎಂಬ ನಾಯಕವಾಡಿ ದಾಬಾ ಮಾಲೀಕನಿಂದ, ನಾಯಿಕವಾಡಿ ದಾಬಾದಲ್ಲಿ ಹಗಲು ರಾತ್ರಿ ಎನ್ನದೆ, ರಾಜಾ ರೋಷವಾಗಿ ಅಕ್ರಮ ಮಧ್ಯ ಮಾರಾಟ ಮಾಡುತ್ತಿದ್ದು, ಇದಕ್ಕೆಲ್ಲ *ಗೋಕಾಕ ಅಬಕಾರಿ ಇಲಾಖೆ* ಯ ಅಧಿಕಾರಿಗಳು ಇವರು ಕೊಡೊ ಬಿಡಿಗಾಷಿಗೆ ಇವರ ಕೈಗೊಂಬೆಗಳಾದಂತೆ ಕಾಣಿಸುತ್ತಿದೆ.
ಅಷ್ಟಕ್ಕೂ ಗಣಪತಿ ಕದಮ್ ಎಂಬ ಈ ದಾಬಾ ಮಾಲಿಕ ಯಾರಿಗೂ ಗೊತ್ತಾಗದ ಹಾಗೆ ತನ್ನ ಚಾಣಾಕ್ಷ ಬುದ್ಧಿ ಉಪಯೋಗಿಸಿ ದಾಬಾದ ಹಿಂದಿನ ಬಾಜು ಈ ಬೆನಚನ ಮರಡಿ ಅಜ್ಜನ ಕೈಯಿಂದ ತನ್ನ ದಾಬಾದಿಂದಲೇ (ಒಳಗಡೆಯಿಂದ ಸಣ್ಣ ಕಿಟಕಿಯ) ಮುಖಾಂತರ, ಅಲ್ಲಿನ ಗ್ರಾಹಕರಿಗೆ ಯಾವ ಬ್ರ್ಯಾಂಡ್ ಬೇಕೊ ಅದೇ ಬ್ರಾಂಡ್ ತರಿಸಿಕೊಡುತ್ತಾನೆ. ಯಾವುದೆ ಮಧ್ಯದ ಬಾಟಲ್ ತೆಗೆದುಕೊಂಡರು ಈ ಬೆನಚನಮರಡಿ ಅಜ್ಜ ದುಬಾರಿ ಹಣ ವಸೂಲಿ ಮಾಡಿ ಗ್ರಾಹಕರಿಗೆ ಮೋಸ ಮಾಡುತ್ತಾನೆ.
ಹಾಗಾದ್ರೆ ದುಬಾರಿ ಬೆಲೆಗೆ ಅಕ್ರಮ ಮಧ್ಯ ಮಾರುವುದನ್ನು ನೋಡಿದ್ರೆ, ಈ ಬೆನಚನಮರಡಿ ಅಜ್ಜನಿಗೆ ಇಲ್ಲಿನ *ಅಬಕಾರಿ ಮತ್ತು ಪೊಲೀಸ್ ಅಧಿಕಾರಿ* ಗಳು ಈತನಿಗೆ ಸಾತ್ ಕೊಡುತ್ತಿದ್ದಾರಾ? ಎಂಬ ಪ್ರಶ್ನೆಯು ನಮ್ಮನ್ನು ಕಾಡಿತ್ತು.
ಅಷ್ಟಕ್ಕೂ ಬೆನಚನಮರಡಿ ಅಜ್ಜನನ್ನು ವಿಚಾರಿಸಿದಾಗ , ಈ ಅಜ್ಜ ಹೀಗೆ ಹೇಳುತ್ತಾನೆ, ನೀವು ಕೂಡ ಕೇಳಿ, ತಿಂಗಳು ಮುಗಿದರೆ ಸಾಕು ಯಾವ ಯಾವ ಅಧಿಕಾರಿಗಳಿಗೆ ಎಷ್ಟೆಷ್ಟು ಕೊಡಬೇಕು, ಒಂದು ವೇಳೆ ಕೊಡದೆ ಹೋದರೆ ಅಬಕಾರಿ ಇಲಾಖೆಯ ಅಧಿಕಾರಿಗಳು ರೇಡ್ ಮಾಡುತ್ತಾರೆ. ಎಂದು ಅಲ್ಲಿನ ಮಧ್ಯ ಮಾರಾಟಗಾರ ಬೆನಚನಮರಡಿ ಅಜ್ಜ ಪತ್ರಕರ್ತರ ಮುಂದೆ ಬಡಬಡಿಸಿದ್ದಾನೆ.
ಗೋಕಾಕನಲ್ಲಿ ಈ ರೀತಿ ಸಾಕಷ್ಟು ಕಾನೂನು ಬಾಹಿರ ಚಟುವಟಿಕೆಗಳು ನಡೆದರು ಕೂಡ ಕ್ಯಾರೆ ಎನ್ನುವುದಿಲ್ಲ.
ಅಂದ್ರೆ ಅಬಕಾರಿ ಇಲಾಖೆಯ ಅಧಿಕಾರಿಗಳು ಮತ್ತು ಪೋಲಿಸ್ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮ ಮಾಡುವುದಿಲ್ಲ. ಇಷ್ಟಕ್ಕೂ ಇಂತಹ ಅಧಿಕಾರಿಗಳೇ, ಇಂತಹ ಕಾನೂನು ಬಾಹಿರ ಚಟುವಟಿಕೆಗಳಿಗೆ ಸಾತ್ ಕೊಡುತ್ತಿದ್ದಾರಾ ?ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕಾಡತೊಡಗಿದೆ.
ಅದು ಏನೇ ಆಗಿರಲಿ ಸರಕಾರ ಮತ್ತು ಮೇಲಾಧಿಕಾರಿಗಳು ಈ ಸುದ್ದಿಯನ್ನು ಗಮನಿಸಿ ತಕ್ಷಣ ಎಚ್ಚೆತ್ತು, ಇಂತಹ ಕಾನೂನು ಬಾಹಿರ ಚಟುವಟಿಕೆಗಳಿಗೆ ಬ್ರೇಕ್ ಹಾಕ್ತಾರಾ ಎಂದು ಕಾಯ್ದು ನೋಡಬೇಕಾಗಿದೆ.
ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ ವೀಕ್ಷಿಸಿ ಟಿವಿ3 ಕನ್ನಡ ನ್ಯೂಸ್
ಜರ್ನಲಿಸ್ಟ್ಚ: ಚಂದ್ರು ತಳವಾರ