ಕುಡಿಯುವ ನೀರಿಗಾಗಿ ಜನರ ಪರದಾಟ, ನಿರ್ಲಕ್ಷ್ಯ ತೋರಿದ ಅಧಿಕಾರಿಗಳು
ಗದಗ ಜಿಲ್ಲೆ ರೋಣ ತಾಲೂಕಿನ ಜಕ್ಕಲಿ ಗ್ರಾಮದಲ್ಲಿ ಬೇಸಿಗೆ ಆರಂಭದ ಹಿನ್ನೆಲೆಯಲ್ಲಿ ನೀರಿಗೆ ಹಾಹಾಕಾರ ಶುರುವಾಗಿದೆ.ಕಳೆದ 15 ದಿನಗಳಿಂದ ಕುಡಿಯುವ ನೀರಿಲ್ಲದೆ ಗ್ರಾಮಸ್ಥರು ಸಿಟ್ಟಿಗೆದ್ದು,ಗ್ರಾಮಸ್ಥರು ಗ್ರಾಮ ಪಂಚಾಯತಿಗೆ ಬಿಂದಿಗೆ ಹಿಡಿದು ಮತ್ತಿಗೆ ಹಾಕಿದ ಘಟನೆ ನಡೆಯಿತು.
ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಜನ ಪರದಾಡುವ ಪರಸ್ಥಿತಿ ನಿರ್ಮಾಣವಾಗಿದೆ ಅಧಿಕಾರಿಗಳು ಹಾಗೂ ಜನಪ್ರತಿನಿದಿಗಳು ಬೇಜವಾಬ್ದಾರಿ ಆಡಳಿತ ಎದ್ದು ಕಾಣುತ್ತಿದೆ.ಜನರ ಗೋಳು ಕೇಳುವವರು ಇಲ್ಲದಂತಾಗಿದೆ. ಅಧಿಕಾರಿಗಳು ಹಾಗೂ ಪ್ರತಿನಿದಿಗಳು ಜನರ ಜೀವನದ ಜೊತೆ ಚಲ್ಲಾಟ ಆಡುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ 5 ನೇ ವಾರ್ಡಿನ ನಿವಾಸಿ ಕುಬೇರಪ್ಪ ಕೊಡಗಾನೂರ ಮಾತನಾಡಿ, ನಮ್ಮ ವಾರ್ಡಿನಲ್ಲಿ ಕಳೆದ ಆರು ತಿಂಗಳಿಂದ ಕುಡಿಯುವ ನೀರಿಗಾಗಿ ಕಠಿಣ ಪರಸ್ಥಿತಿ ನಿರ್ಮಾಣವಾಗಿದೆ ಚರಂಡಿ ಸ್ವಚ್ಛತೆ ಇಲ್ಲದೆ ಅನಾರೋಗ್ಯದಿಂದ ಸೋತು ಬೆಂದು ಹೋಗುವಂತ ಜೀವನ ನಮ್ಮದಾಗಿದೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರು ಸಹ ಉಡಾಪೆ ಉತ್ತರ ನೀಡುತ್ತಾ ಬಂದಿದ್ದು ನಮ್ಮ ಕಾಲೋನಿಯ ಮುಖ್ಯ ರಸ್ತೆ ಬದಿ ಪೈಪ್ ಸೋರುಕೆಯ ಗುಂಡಿ ತೆಗೆದು 15 ದಿನವಾದರೂ ಆ ಗುಂಡಿ ಪೈಪ್ ಕೂಡ ಸರಿ ಹೋಗುತ್ತಿಲ್ಲ. ಗುಂಡಿಯು ಮುಚ್ಚದೆ ಇರುವುದರಿಂದ ಆ ಗುಂಡಿಯಲ್ಲಿ ವಯೋ ವೃದ್ಧರು ಹಾಗೂ ಚಿಕ್ಕಮಕ್ಕಳು ಬೀಳುವ ಆತಂಕದಲ್ಲಿ ಇದ್ದಾರೆ.ನೀರಿನ ಸಮಸ್ಯೆ ಬಗೆಹರಿಸುವವರೆಗೂ ಉಘ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಗ್ರಾಮದಲ್ಲಿ ಚುನಾಯಿತ ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ಸಾಕಷ್ಟು ಬಾರಿ ಗಮನಕ್ಕೆ ಸಹ ಹಾರಿಕೆ ಉತ್ತರ ನೀಡುತ್ತಿದ್ದಾರೆ.ಗ್ರಾಮದ ಜನರಿಗೆ ಕುಡಿಯುವ ನೀರಿಲ್ಲ ಅವರು ಯಾವ ಕೆಲಸ ಮಾಡಿ ಊರು ಉದ್ದಾರ ಮಾಡುತ್ತಾರೋ ? ಅವರಿಗೆ ಗೊತ್ತು ಎಂದು ನೊಂದ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಸದಸ್ಯರಿಗೆ ಹಿಡಿ ಶಾಪ ಹಾಕಿ ತಮ್ಮ ಅಳಲು ತೋಡಿಕೊಂಡು ಪಂಚಾಯಿತಿ ಮುಂದೆ ಪ್ರತಿಭಟನೆ ಮಾಡುವ ಮೂಲಕ ನೀರು ಬಿಡಿ ನೀರು ಬಿಡಿ ಎಂದು ಘೋಷಣೆ ಕೂಗಿದರು.
ಪ್ರತಿಭಟನೆ ವೇಳೆ ಸ್ಥಳಕ್ಕೆ ಆಗಮಿಸಿದ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಎಸ್. ಎಸ್. ರಿತ್ತಿ ಅವರಿಗೆ ಜನರು ಆಕ್ರೋಶ ವ್ಯಕ್ತಪಡಿಸಿ ತೀವ್ರ ತರಾಟೆ ತೆಗೆದುಕೊಂಡರು. ನಿನಗೆ ಅಭಿವೃದ್ಧಿ ಮಾಡಲು ಆಗದಿದ್ದರೆ ರಾಜೀನಾಮೆ ಕೊಡಿ ಎಂದು ತರಾಟೆಗೆ ತೆಗೆದುಕೊಂಡು ಬೇಜವಾಬ್ದಾರಿತನದ ಆಡಳಿತ ಜನರ ಜೀವನದಲ್ಲಿ ಚೆಲ್ಲಾಟವಾಡಬೇಡ ಎಂದು ಆಗ್ರಹಿಸಿದರು.
ಇದೆ ವೇಳೆ ಮಾತನಾಡಿದ ಮೌಲುಸಾಬ ನದಾಫ್, ಇತ್ತಿಚ್ಚಿಗೆ ಮಾಡಿದ ಜಲಜೀವನ್ ಮಷಿನ್ ಕಾಮಗಾರಿ ಕಳಪೆ ಮಟ್ಟದ ಕಾಮಗಾರಿಯಾಗಿ ಕಂಡು ಬರುತ್ತಿದೆ ಆ ಯೋಜನೆಯು ಕೂಡ ಗ್ರಾಮಕ್ಕೆ ನಿರಾಸೆ ನಿರಾಸೆಯನ್ನು ಉಂಟು ಮಾಡಿದೆ ಸಂಪೂರ್ಣವಾಗಿ ಹೇಳಬೇಕೆಂದರೆ ನಮ್ಮ ಗ್ರಾಮದಲ್ಲಿ ದುರ್ಬಿನ ಆಕಿ ನೋಡಿದರು ನಮ್ಮ ಗ್ರಾಮದಲ್ಲಿ ಅಭಿವೃದ್ಧಿ ಇಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದ ಸಮಸ್ಯೆಗಾಗಿ ಸಾರ್ವಜನಿಕರು ಪಂಚಾಯಿತಿ ಅಧ್ಯಕ್ಷೆ.ಗಂಗವ್ವ ಜಂಗಣ್ಣವರ ಹಾಗೂ ಸದಸ್ಯರಿಗೆ . ದೂರವಾಹಿನಿ ಮೂಲಕ ಕರೆ ಮಾಡಿದ್ರೆ ಮದುವೆ ಮುಂಜಿ ಹಬ್ಬಗಳಿಗೆ ಬಂದಿದ್ದೇನೆ ಎಂಬ ಸಾರ್ವಜನಿಕರಿಗೆ ಉಡಾಪೆ ಉತ್ತರ ನೀಡುತ್ತಾರೆ ಅಭಿವೃದ್ಧಿ ಮಾಡುವಂತ ಜನಪ್ರತಿನಿದಿಗಳು ಗ್ರಾಮದ ಅಭಿವೃದ್ಧಿ ಕಡೆ ಗಮನ ಕೊಡದೆ ತಮ್ಮ ತಮ್ಮ ಮನೆ ಮತ್ತು ವ್ಯಯಕ್ತಿಕ ಅಭಿವೃದ್ಧಿ ಕಡೆ ಗಮನ ಇದೆ ವಿನಹ ಗ್ರಾಮದ ಅಭಿವೃದ್ಧಿಕಡೆ ಗಮನವಿಲ್ಲವೆಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ ಈ ಬೇಜವಾಬ್ದಾರಿ ಆಡಳಿತವನ್ನು ಗಮನಿಸಿ ಚುನಾವಣೆ ಆಯೋಗವು ಮರು ಚುನಾವಣೆ ಮಾಡಬೇಕೆಂದು ಗ್ರಾಮಸ್ಥರ ಬೇಸರ ವ್ಯಕ್ತಪಡೆಸುತ್ತಿದ್ದಾರೆ
ಜಕ್ಕಲಿ ಗ್ರಾಮದ ಸಮಸ್ಯೆಯನ್ನು ನಾಲ್ಕು ಐದು ಬಾರಿ ಪತ್ರಿಕಾ ಮಾಧ್ಯಮಗಳಲ್ಲಿ ಪ್ರಕಟ ಮಾಡಿದರು ಸಹ ಸಂಬಂಧಪಟ್ಟ ಅಧಿಕಾರಿ ಇತ್ತಿಚ್ಚಿಗೆ ವರ್ಗಾವಣೆ ಯಾದ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರವಿ. ಎ. ಏನ್. ಹಾಗೂ ಈಗಿರುವ ಅಧಿಕಾರಿ ಶ್ಯಾಸುಂದರ್ ಇನಾಮದಾರ ಹಾಗೂ ಜಿಲ್ಲಾ ಪಂಚಾಯಿತಿ ಸಿ ಓ ಅವರ ಗಮನಕ್ಕೆ ತಂದರು ಸಹ ಕ್ಯಾರೇ ಎನ್ನುತ್ತಿಲ್ಲ.. ಜಕ್ಕಲಿ ಗ್ರಾಮದ ಸುವ್ಯವಸ್ಥೆ ಇನ್ನು ಯಾವಮಟ್ಟಕ್ಕೆ ಹೋಗುವದೋ ಎಂದು ಕುತೂಹಲ ಉಂಟು ಮಾಡಿದೆ.
ಇದೇ ಸಂದರ್ಭದಲ್ಲಿ ಫಾತೀಮಾ ಬಾಲೇಸಾಬನವರ, ಬಸವ್ವ ಕೊಡಗಾನೂರ, ಸಜನಾ ಜಕ್ಕಲಿ, ಯಲ್ಲಮ್ಮ ಡಂಬಳ, ಮಾಬಮ್ಮ ಕಳಕಾಪೂರ, ಮಮತಮ್ಮ ಬಾಲೇಸಾಬನವರ, ಖಾಶಿಂಬಿ ಜಾಲಿಹಾಳ, ದಾವಲಮ್ಮ ಗಡಾದ, ಮಮ್ಮ ಸಲೀಂ ಜಕ್ಕಲಿ,
ಕುಬೇರಪ್ಪ ಕೊಡಗಾನೂರ, ಇಸ್ಮಾಯಿಲ್ ಗಡಾದ, ಹನುಮಂತ ಕೊಡಗಾನೂರ, ಮೌಲುಸಾಬ ನದಾಫ್, ಆನಂದ ಬಾರಕೇರ, ಯಲ್ಲಪ್ಪ ಮುಕಣ್ಣವರ, ಯಮನೂರ ಮಾದರ, ಯಲ್ಲಪ್ಪ ಬಾರಕೇರ, ರಾಜಾಸಾಬ್ ನಮಾಜಿ, ಬಾಬು ಯಲಬುರ್ಗಿ ಸೇರಿದಂತೆ ಇತರರು ಹಾಜರಿದ್ದರು.