ಚಿಕ್ಕೋಡಿ: ರೈತರ ಕಬ್ಬು ಕಟಾವಿನ ನಂತರ ಹತ್ತು ದಿನಗಳಿಂದ ಜಮೀನಿನಲ್ಲಿ ಒಣಗುತ್ತಿದೆ
ರೈತರು ಭಾರೀ ತೊಂದರೆ ಎದುರಿಸುತ್ತಿದ್ದು, ತಕ್ಷಣ ಕ್ರಮದ ಅಗತ್ಯ
ಚಿಕ್ಕೋಡಿ, 19 ಡಿಸೆಂಬರ್:ಚಿಕ್ಕೋಡಿ ತಾಲೂಕಿನ ಜಾಗನೂರು ಗ್ರಾಮದ ರೈತರು ತಮ್ಮ ಕಬ್ಬು ಕಟಾವಿನ ನಂತರ ಹತ್ತು ದಿನಗಳಿಂದ ಕಬ್ಬು ಜಮೀನಿನಲ್ಲಿ ಒಣಗುತ್ತಿರುವುದರಿಂದ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಕಬ್ಬು ಕಾರ್ಖಾನೆಗೆ ಸಾಗಿಸಲು ರೈತರಿಗೆ ನೆರೆಯವರ ತೊಂದರೆ ಎದುರಾಗಿದ್ದು, ಈ ಸಮಸ್ಯೆ ತೀವ್ರತೆಯಲ್ಲಿದೆ.
ಜಾಗನೂರು ಗ್ರಾಮದ ಕವಿತಾ ಈರಣ್ಣ ಬಂಗಿ ಇವರ ಅಕ್ಕ ಪಕ್ಕ ಜಮೀನಿನಲ್ಲಿರುವ ಸುಮಾರು ಐದುರಿಂದ ಆರು ಟನ್ ಕಬ್ಬು, ವೈಯಕ್ತಿಕ ಒಳ ಜಗಳದ ಕಾರಣದಿಂದ ಸ್ಥಳದಲ್ಲೇ ಉಳಿದಿದೆ. ಅವರ ಜಮೀನಿನ ಸರ್ವೇ ನಂಬರ್ 189 ಮತ್ತು 193 ಗಳು ಸಂಬಂಧಿತ ಸಮಸ್ಯೆಯ ಕೇಂದ್ರವಾಗಿದ್ದು, ಕಬ್ಬು ಸಾಗಿಸಲು ನೆರೆಜಮೀನು ಹೊಂದಿರುವವರು ನಿರಾಕರಿಸುತ್ತಿದ್ದಾರೆ ಎಂದು ಅವರು ದೂರಿದ್ದಾರೆ.
ಮನವಿ ಸಲ್ಲಿಕೆ:-ನೀರಸಗೊಂಡ ರೈತರು ಇಂದು ವಿವಿಧ ಪತ್ರಕರ್ತರ ಸಂಘಟನೆಗಳ ಸಹಾಯದೊಂದಿಗೆ ತಾಲೂಕಾ ದಂಡಾಧಿಕಾರಿ ಕಚೇರಿಗೆ ಭೇಟಿ ನೀಡಿ, ಸಮಸ್ಯೆ ಕುರಿತು ಮನವಿ ಸಲ್ಲಿಸಿದರು. ಕಬ್ಬು ಜಮೀನಿನಲ್ಲಿ ಹೆಚ್ಚು ದಿನ ಉಳಿಯುವುದರಿಂದ ಅದು ಒಣಗಿ ತೂಕ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದ್ದು, ಇದರಿಂದ ರೈತರಿಗೆ ಆರ್ಥಿಕ ನಷ್ಟವಾಗುವ ಸಾಧ್ಯತೆ ಇದೆ.
ಪ್ರಶ್ನೆಗೆ ತಕ್ಷಣದ ಪರಿಹಾರ:-ತಾಲೂಕಾ ದಂಡಾಧಿಕಾರಿಗಳು, ಪೊಲೀಸರು, ಹಾಗೂ ಜಿಲ್ಲಾ ಆಡಳಿತದಿಂದ ತಕ್ಷಣವೇ ಈ ಬಗ್ಗೆ ಗಮನಹರಿಸಿ, ಕಬ್ಬು ಸಾಗಾಣಿಕೆಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು ಮನವಿ ಮಾಡಲಾಗಿದೆ. ರೈತರು ತಮ್ಮ ಹೋರಾಟಕ್ಕೆ ನ್ಯಾಯ ದೊರೆತಿಲ್ಲದಿದ್ದರೆ, ಮುಂದಿನ ಹಂತದಲ್ಲಿ ನಿರ್ಣಾಯಕ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ರೈತರು ವಿನಂತಿಸಿರುವುದು:-“ನಮ್ಮ ಜಮೀನಿನಲ್ಲಿ ಕಟಾವಾದ ಕಬ್ಬು ಹಾಗೇ ಉಳಿಯುವುದರಿಂದ ಆರ್ಥಿಕ ನಷ್ಟವನ್ನು ಎದುರಿಸಬೇಕಾಗಿದೆ. ತಕ್ಷಣವೇ ಕಬ್ಬು ಸಾಗಿಸಲು ಸರ್ಕಾರ ಮತ್ತು ಅಧಿಕಾರಿಗಳು ಸಹಾಯ ಮಾಡಬೇಕು,” ಎಂದು ಮನವಿ ಸಲ್ಲಿಸಿದ ಕವಿತಾ ಬಂಗಿ ಇವರ ಯಜಮಾನರಾದ ಈರಣ್ಣ ಬಂಗಿ ಮನವಿ ಮಾಡಿದರು.
ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ಕ್ರಮ ಕೈಗೊಳ್ಳುವ ನಿರೀಕ್ಷೆಯಲ್ಲಿದ್ದಾರೆ.
“ರೈತರ ಬೆನ್ನಿಗೆ ನಿಂತಿದೆ ಟಿವಿ3 ಕನ್ನಡ ವಾಹಿನಿ ತಂಡ”
ಜರ್ನಲಿಸ್ಟ್: ಚಂದ್ರು ತಳವಾರ