ಚಿಕ್ಕೋಡಿ: ಕಳಪೆ ಕಾಮಗಾರಿಗೆ ಹೆಸರುವಾಸಿಯಾದ ಖಡಕಲಾಟ ಚರಂಡಿ ಕೆಲಸ!
ಹೌದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಖಡಕಲಾಟ ಗ್ರಾಮದಲ್ಲಿ ಕುಡಿಯುವ ನೀರು ಹಾಗು ಗ್ರಾಮೀಣ ನೈರ್ಮಲ್ಯ ಇಲಾಖೆ ಅಡಿಯಲ್ಲಿ ಚರಂಡಿ ಕಾಮಗಾರಿ ಬುದು ನೀರು ನಿರ್ವಹಣಾ ವರದಿ…
ಪ್ರಾರಂಭ ಮಾಡಿ ಕೆಲವೆ ತಿಂಗಳಲ್ಲಿ ಬಿರುಕು ಬಿಟ್ಟು ಮುರಿದು ಹೋಗಿದೆ,ನೀವೂ ನೋಡಬೇಕಾದ ಹಾಗೂ ಕೇಳಬೇಕಾದ ವಿಡಿಯೊ ದ್ರಶ್ಯಗಳನ್ನ ನಮ್ಮ ಟಿವಿ೩ ನಿಮ್ಮ ಮುಂದೆ ತೊರಿಸುತ್ತಾ ಬಂದಿದೆ.
ಒಂದು ಭ್ರಷ್ಟ ಹಾಗೂ ಕಳಪೆ ಕಾಮಗಾರಿಯ ಸುದ್ದಿ ಮಾಡಿ ಸರಿಪಡಿಸಿ ಸಾರ್ವಜನಿಕರಿಗೆ ಸರ್ಕಾರದ ಹಾಗೂ ಮೂಲಭೂತ ಸೌಕರ್ಯ ಸಿಗಬೇಕೆಂದು ಸದಾ ಸುದ್ದಿಯಲ್ಲೆ ಇರುತ್ತೆವೆ,ಆದರೆ ಇಲ್ಲಿ ನೋಡಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಖಡಕಲಾಟ ಗ್ರಾಮದ ಅಂಬೇಡ್ಕರ್ ಪುತ್ತಳಿಯಿಂದ ಗಳತಗಾ ರಸ್ತೆಗೆ ಹೊಗುವ ಬ್ರಿಜ್ ವರೆಗೂ ಎಡಬದಿಗೆ ಕಾಣಿಸುವ ಚರಂಡಿ ಕಾಮಗಾರಿ ಕಣ್ಣ ಮುಂದೆ ಕಾಣಿಸುತ್ತಿದೆ,ನೋಡಿ ಮುರಿದು ಬಿದ್ದ ಸ್ಥಿತಿಯನ್ನ ನೋಡಿದರೆ ಇಲ್ಲಿ ಹಣ ಲಪಡಾಯಿಸಲು ಕಾಮಗಾರಿಯ ಎಸ್ಟಿಮೇಟ್ ದಿಕ್ಕನ್ನೇ ತಪ್ಪಿಸಿ ಎಷ್ಟು ಕಳಪೆ ಕಾಮಗಾರಿ ಮಾಡುತ್ತಿದ್ದಾರೆ.
ಎಂದು ಕಣ್ಣ ಮುಂದೆಯೆ ಕಾಣಿಸುತ್ತಿದೆ,ಇಷ್ಟೆಲ್ಲಾ ಕಳಪೆ ಕಾಮಗಾರಿ ಆಗಿದ್ದರೂ ಕೂಡಾ ಮೇಲಾಧಿಕಾರಿಗಳು ಕ್ಯಾರೆ ಎಂದಿಲ್ಲ ಎಂದ ಮೆಲೆ ಇಲ್ಲಿ ಪ್ರಕಾರದ ಹಣ ಕೊಳ್ಳೆ ಹೊಡೆಯಲು ಯಾರ್ಯಾರು ಶಾಮೀಲಾಗಿದ್ದಾರೆ ಮತ್ತು ಯಾರಿಗೆ ಎಷ್ಟು ಪಾಲು ಸೇರಬಹುದು ಎಂಬ ಯಕ್ಷಪ್ರಶ್ನೆ ಕಾಡತೊಡಗಿದೆ.
ಹೀಗೆ ಹಲವೂ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ,ಯಾಕೆ ಸರ್ಕಾರದ ಅಧಿಕಾರಿಗಳು ಈ ಗುತ್ತಿಗೆದಾರರ ಮೇಲೆ ನೀಗಾ ಇಡದೇ ಸುಮ್ಮನಿರ್ತಾರೆ ಎಂಬುದು ಚರ್ಚೆಗೆ ಗ್ರಾಸವಾಗಿದೆ,ಇಂತಹ ಗುತ್ತಿಗೆದಾರರನನ್ನ ಕಪ್ಪು ಪಟ್ಟಿಗೆ ಸೇರಿಸಿ ಇಂತವರಿಗೆ ಯಾವೂದೇ ಸರ್ಕಾರದ ಕಾಮಗಾರಿಗಳನ್ನ ಕೊಡಬಾರದೆಂದು ಸಾರ್ವಜನಿಕರು ಹಿಡಿಶಾಪ ಹಾಕಿದ್ದಾರೆ,ಇದಷ್ಟೆ ಅಲ್ಲದೆ ಚರಂಡಿ ಬೀಳುವದು ಅಷ್ಟೇ ನೊಡಬೇಡಿ ನೀವೆಲ್ಲಿ ಕೈ ಹಚ್ಚತಿರಿ ಅಲ್ಲೆಲ್ಲಾ ಸಿಮೆಂಟ ಉಸುಕು ಕೈಗೆ ಹತ್ತಿಕೊಂಡು ಬರುತ್ತೆ.
ಇಂತಹವರ ಮೆಲೆ ಸರಕಾರ ಮತ್ತು ಮೇಲಾಧಿಕಾರಿಗಳು ಪರಿಶೀಲನೆ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸ ಬೇಕು ಈ ಕಾಮಗಾರಿ ಮಾಡಿದ ವೈ.ಕೆ. ಜಮನಾಳೆ ಹಾಗೂ ಗುರು ಸಿಂಗಾಡಿ ಹಾಗೂ ಕುಮಾರ ಪಾಟೀಲ ಅವರಿಂದ ಆಗಿದಿಯೋ ಅಥವಾ ಅಧಿಕಾರಿಗಳಿಂದ ಆಗಿದೆಯೋ ಅಥವಾ ಮತ್ತೆನೋ ಕರಾಮತ್ತು ನಡೆದಿದೆ ಎಂದು ಪರಿಶಿಲನೆ ಮಾಡಿದರೆ ಮಾತ್ರ ನಿಖರ ಸತ್ಯಾಸತ್ಯತೆ ಹೊರಬಿಳುತ್ತದೆ.
ಶೀಘ್ರದಲ್ಲಿ ಹೆಚ್ಚಿನ ಮಾಹಿತಿಯೊಂದಿಗೆ ಮುಂದಿನ ಸಂಚಿಕೆ ನಿಮ್ಮ ಮುಂದೆ,..
ವರದಿ:- ಚಂದ್ರು ತಳವಾರ ಟಿವಿ೩ ನ್ಯೂಸ್ ಕನ್ನಡ ಚಿಕ್ಕೋಡಿ


