ಘಟಪ್ರಭಾ: ಡಾಕ್ಟರೇಟ್ ಪದವಿ ಪಡೆದ ಗುಂಡೊಪಂತ ಪತ್ತಾರ
ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಸಮೀಪದ ಘಟಪ್ರಭಾ ಪಠ್ಠಣದ ನಿವಾಸಿಗಳಾದ ಶ್ರೀ ಗುಂಡೋಪಂತ ಅಪ್ಪಣ್ಣ ಪತ್ತಾರ ಇವರಿಗೆ ಗೌರವ ಡಾಕ್ಟರೇಟ್ ಪದವಿ ಗಳಿಸಿದ್ದಾರೆ.
ಶ್ರೀ ದುರದುಂಡಿಶ್ವರ ಪುಣ್ಯಾರಣ್ಯ ಪ್ರೌಢಶಾಲೆಯಲ್ಲಿ ಚಿತ್ರ ಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ನಾಡಿನ ಖ್ಯಾತ ಚಿತ್ರ ಕಲಾವಿದರು, ಲೋಹ ಶಿಲ್ಪ ಕಲಾವಿದರು ಆಗಿರುವ ಶ್ರೀ ಗುಂಡೋಪಂತ ಅಪ್ಪಣ್ಣ ಪತ್ತಾರ ಇವರಿಗೆ ದಿನಾಂಕ 5/10/2024 ರಂದು ಚೈನೈನ ಸೌಥ ವೆಸ್ಟರ್ನ್ ಅಮೇರಿಕನ್ ಯುನಿವರ್ಸಿಟಿಯವರು ಇವರ ಸಾಮಾಜಿಕ ಸೇವೆ ಮತ್ತು ಜೀವ ಮಾನದ ಸಾಧನೆ ಮೆಚ್ಚಿ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿ ಗೌರವಿಸಿದರು.
ಇವರಿಗೆ ಅವರ ಧರ್ಮಪತ್ನಿ ಸೌ.ರತ್ನಾ ಪತ್ತಾರ, ಮಕ್ಕಳಾದ ಶ್ರೀ ಗೋಪಾಲ ಪತ್ತಾರ, ಡಾ!! ರಾಘವೇಂದ್ರ ಪತ್ತಾರ, ಮಗಳು ಶ್ರೀಮತಿ ಸರಸ್ವತಿ ಪತ್ತಾರ, ಅಳಿಯ ಶ್ರೀ ಪ್ರಕಾಶ ಪತ್ತಾರ… ಸೊಸೆಯಂದಿರು ಕವಿತಾ ಮತ್ತು ಡಾ !!ಭಾಗ್ಯ ಮತ್ತು ಮೊಮ್ಮಕ್ಕಳು ಶುಭ ಕೋರಿದರು ಜೊತೆಗೆ ಬೆಳಗಾವಿ ಜಿಲ್ಲೆಯ ಅನೇಕ ಗಣ್ಯರು ಮುಖಂಡರು ಪತ್ತಾರ ಗುರುಗಳ ಶಿಷ್ಯರು ಹಾಗೂ ಶಿಕ್ಷಕರ ಬಳಗ ಪತ್ತಾರ ಗುರುಗಳಿಗೆ ಡಾಕ್ಟರೇಟ್ಪ ಪದವಿ ಪಡೆದಿದ್ದಕ್ಕೆ ಶ್ಲಾಘಿಸಿ ಅಭಿನಂದನೆಗಳನ್ನ ತಿಳಿಸಿದ್ದಾರೆ.
ಜರ್ನಲಿಸ್ಟ್: ಚಂದ್ರು ತಳವಾರ ಟಿವಿ3 ಬೆಳಗಾವಿ