ಮೂಡಲಗಿ: ಗ್ರಾಮ ಪಂಚಾಯಿತಿ ವಿವಿಧ ನೌಕರರ ಸಂಘದ ವತಿಯಿಂದ ಫ್ರೀಡಂ ಪಾರ್ಕ್ ಬೆಂಗಳೂರು ಚಲೋ…
ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಶಿವಾಪೂರ(ಹ): ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಯಿಂದ ರಾಜ್ಯದ ಶೇ 70 % ರಷ್ಟು ಜನರಿಗೆ ವಿವಿಧ ಸೇವೆಗಳನ್ನು ನೀಡುತ್ತಿರುವ ಸ್ಥಳೀಯ ಸಂಸ್ಥೆಯಾದ ಗ್ರಾಮ ಪಂಚಾಯಿತಿ ಯಲ್ಲಿ ಕೆಲಸ ನಿರ್ವಹಿಸುತ್ತಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು, ಕ್ಲರ್ಕ್ ಕಂ ಡಾಟಾ ಎಂಟ್ರೀ ಆಪರೇಟರ್, ಕರ ವಸೂಲಿಗಾರ,ವಾಟರ್ಮ್ಯಾನ,ಜವಾನರ ಮತ್ತು ಪತ್ರಾಕ್ಕಿತ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದಿಂದ ಸಮಸ್ತ ಅಧಿಕಾರಿಗಳು, ನೌಕರರು ಆಡಳಿತ ವರ್ಗ ಕಾರ್ಯ ನಿರ್ವಹಣೆಯಲ್ಲಿ ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ಪರಿಹರಿಸುವಂತೆ ಸರಕಾರ ಮತ್ತು ಇಲಾಖೆಯ ಹಲವಾರು ವರ್ಷಗಳಿಂದ ಮನವಿ ಸಲ್ಲಿಸುತ್ತಾ ಬಂದರು ಯಾವುದೇ ಮನವಿಗಳಿಗೆ ಸ್ಪಂದಿಸದೇ ಇರುವ ಇಲಾಖೆಯ ಧೋರಣೆಯನ್ನು ಖಂಡಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಇಡೇರಿಸುವಂತೆ ಒತ್ತಾಯಿಸಿ ಅಕ್ಟೋಬರ್ o4 ರಿಂದ ಗ್ರಾಮ ಪಂಚಾಯಿತಿ ಸೇವೆಗಳನ್ನು ನಿಲ್ಲಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಎಲ್ಲ ವೃಂದ ಸಂಘಗಳು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟ ಬೆಂಗಳೂರು ಇವರ ಸಹಯೋಗದಲ್ಲಿ ಪ್ರೀಡಂ ಪಾರ್ಕ್ ಬೆಂಗಳೂರು ಚಲೋ ಅನಿರ್ದಿಷ್ಟಾವಧಿ ಕರೆ ಕೊಟ್ಟ ಪ್ರಯುಕ್ತ ಇವತ್ತು ಮೂಡಲಗಿ ತಾಲೂಕಿನ ಎಲ್ಲ ಗ್ರಾಮ ಪಂಚಾಯತ್ ಚುನಾಯಿತ ಪ್ರತಿನಿಧಿಗಳ ಸಂಘ, ಪಿಡಿಒ ಕ್ಷೇಮಾಭಿವೃದ್ಧಿ ಸಂಘ, ಗ್ರೇಡ್-1 ಗ್ರೇಡ್ -2 ಕಾರ್ಯದರ್ಶಿಗಳ ಸಂಘ, ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಸಂಘ,ಕ್ಲರ್ಕ್ ಕಂ ಡಿ ಇ ಓ ಗಳ ಕ್ಷೇಮಾಭಿವೃದ್ಧಿ ಸಂಘ, ಕರವಸೂಲಿಗಾರರ ಸಂಘ, ನೀರುಘಂಟೆಗಳ ಸಂಘ,ಸಿಪಾಯಿಗಳ ಸಂಘ, ಸ್ವಚ್ಚಾತಾಗಾರರ ಸಂಘ ಹೀಗೆ ಗ್ರಾಮ ಪಂಚಾಯತಿ ಮಟ್ಟದ 11 ವಿವಿಧ ವೃಂದ ನೌಕರರ ನೇತೃತ್ವದಲ್ಲಿ 04-10-2024 ರಿಂದ ನ್ಯಾಯಯುತ ಬೇಡಿಕೆಗಾಗಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಅನಿರ್ದಿಷ್ಟ ಅವಧಿಯವರೆಗೆ ಪ್ರತಿಭಟನೆ ಮಾಡಲು
ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ತಾಲ್ಲೂಕು ಅಧ್ಯಕ್ಷರಾದ ಸತ್ತೆಪ್ಪ ಲಕ್ಷ್ಮಣ ಬಬಲಿ ಅವರ ನೇತೃತ್ವದಲ್ಲಿ ಪ್ರಯಾಣ ಬೆಳೆಸಿದರು.